ನವದೆಹಲಿ : ಯುರೋಪ್ನ ಸೈಪ್ರಸ್ನಲ್ಲಿ ತಲೆಮರೆಸಿಕೊಂಡಿದ್ದ ಖಲಿಸ್ತಾನಿ ಭಯೋತ್ಪಾದಕ ಗುರ್ಜೀತ್ ಸಿಂಗ್ ನಿಜ್ಜಾರ್ನನ್ನು ನವದೆಹಲಿ ವಿಮಾನ ನಿಲ್ದಾಣದಲ್ಲಿ ಎನ್ಐಎ ಅಧಿಕಾರಿಗಳು ಬಂಧಿಸಿದ್ದಾರೆ.
ಖಲಿಸ್ತಾನ್ ಪ್ರತ್ಯೇಕತೆಗಾಗಿ ಸಿಖ್ಖರನ್ನು ದಂಗೆಯೇಳಿಸಲು ಸಾಮಾಜಿಕ ಜಾಲತಾಣಗಳಲ್ಲಿ ಪಿತೂರಿ ನಡೆಸಿದ ಪ್ರಕರಣದಲ್ಲಿ ಗುರ್ಜೀತ್ ಸಿಂಗ್ ನಿಜ್ಜಾರ್ ಪ್ರಮುಖ ಆರೋಪಿಯಾಗಿದ್ದಾನೆ. ಈತನೊಂದಿಗೆ ಹರ್ಪಾಲ್ ಸಿಂಗ್ ಮತ್ತು ಮೊಯಿನ್ ಖಾನ್ ಕೂಡ ಸಂಚಿನ ರುವಾರಿಗಳಾಗಿದ್ದಾರೆ ಎಂದು ಆರೋಪಿಸಲಾಗಿದೆ. ಗುರ್ಜೀತ್ ಸಿಂಗ್ ನಿಜ್ಜಾರ್ ಪೊಲೀಸರಿಂದ ತಲೆಮರೆಸಿಕೊಂಡು ಯುರೋಪ್ನಲ್ಲಿ ನೆಲೆಸಿದ್ದ.
ಇದನ್ನೂ ಓದಿ : ಸಿಖ್ ಫಾರ್ ಜಸ್ಟೀಸ್ ಪ್ರಕರಣ: 10 ಖಲಿಸ್ತಾನಿ ಉಗ್ರರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ ಎನ್ಐಎ
ಆರೋಪಿಗಳು ಪಂಜಾಬ್ ಮಾಜಿ ಸಿಎಂ ಬೀಂತ್ ಸಿಂಗ್ ಹತ್ಯೆ ಆರೋಪಿ ಜಗತ್ ಸಿಂಗ್ ಹವಾರನನ್ನು ಹೊಗಳುವ ಮತ್ತು 1984 ರ ಬ್ಲೂ ಸ್ಟಾರ್ ಕಾರ್ಯಾಚರಣೆಯ ಫೋಟೋ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದರು. ಅಲ್ಲದೇ, ನಿಷೇಧಿತ ಬಬ್ಬರ್ ಕಾಲ್ಸಾ ಇಂಟರ್ನ್ಯಾಷನಲ್ ಸಂಘಟನೆ ಮತ್ತು ಖಲಿಸ್ತಾನ್ ಪರ ಪೋಸ್ಟ್ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿ ಸಿಖ್ ಯುವಕರನ್ನು ಧಂಗೆಯೆಬ್ಬಿಸುತ್ತಿದ್ದರು ಎಂದು ಆರೋಪಿಸಲಾಗಿದೆ.