ETV Bharat / bharat

ಗಂಗಾದಲ್ಲಿ ತೇಲುತ್ತಿರುವ ಮೃತ ದೇಹಗಳು: ವರದಿ ಕೇಳಿದ ಮಾನವ ಹಕ್ಕುಗಳ ಆಯೋಗ

author img

By

Published : May 13, 2021, 9:53 PM IST

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು (ಎನ್‌ಎಚ್‌ಆರ್‌ಸಿ) ಗುರುವಾರ ಎರಡೂ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಮತ್ತು ಕೇಂದ್ರ ಜಲ ಸಚಿವಾಲಯದ ಕಾರ್ಯದರ್ಶಿ ಗೆ ನೋಟಿಸ್ ಜಾರಿಗೊಳಿಸಿದೆ. ಗಂಗಾ ನದಿಯಲ್ಲಿ ತೇಲುತ್ತಿರುವ ಮೃತ ದೇಹಗಳ ಸಂಬಂಧ ನಾಲ್ಕು ವಾರಗಳಲ್ಲಿ ವರದಿ ನೀಡಬೇಕು ಎಂದು ಸೂಚಿಸಿದೆ.

NHRC takes cognizance of dead bodies floating in Ganga( 2 ಪ್ಯಾರಾ ಸಾಕು)

ನವದೆಹಲಿ: ಕೊಳೆತ ಮತ್ತು ಉಬ್ಬಿಕೊಂಡಿರುವ ಅನೇಕ ಅಪರಿಚಿತ ಶವಗಳು ಕಳೆದ ಎರಡು ದಿನಗಳಿಂದ ಗಂಗಾನದಿಯಲ್ಲಿ ತೇಲುತ್ತಿರುವುದು ಕಂಡು ಬಂದಿದ್ದು, ಕೋವಿಡ್​ನಿಂದ ಸಾವಿಗೀಡಾದವರ ಶವಗಳನ್ನು ನದಿಯಲ್ಲಿ ಎಸೆಯಲಾಗುತ್ತಿದೆ ಎಂದು ಬಿಹಾರ ಮತ್ತು ಉತ್ತರ ಪ್ರದೇಶದ ನಿವಾಸಿಗಳಲ್ಲಿ ಆತಂಕ ಹುಟ್ಟಿಸಿದೆ. ಇದು ನಾಗರಿಕ ಸಮಾಜ ಮತ್ತು ಇತರ ಸಂಬಂಧಿತ ಸಂಸ್ಥೆಗಳಿಂದ ತೀವ್ರ ಟೀಕೆಗೆ ಗುರಿಯಾಗಿದೆ.

ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು (ಎನ್‌ಎಚ್‌ಆರ್‌ಸಿ) ಗುರುವಾರ ಎರಡೂ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಮತ್ತು ಕೇಂದ್ರ ಜಲ ಸಚಿವಾಲಯದ ಕಾರ್ಯದರ್ಶಿಗೆ ನಾಲ್ಕು ವಾರಗಳಲ್ಲಿ ತಕ್ಷಣದ ಕ್ರಮ ಕೈಗೊಂಡ ವರದಿ ನೀಡಬೇಕು ಎಂದು ತಿಳಿಸಿದೆ.

ಈ ವಿಷಯದ ಬಗ್ಗೆ ಕ್ರಮ ತೆಗೆದುಕೊಳ್ಳಲಾಗಿದೆಯೇ ಎಂದು ಈಟಿವಿ ಭಾರತ್ ಬುಧವಾರ ವಿಚಾರಿಸಿದ ನಂತರ ಈ ಬೆಳವಣಿಗೆ ಕಂಡುಬಂದಿದೆ.

ಈ ವಿಷಯದ ಬಗ್ಗೆ ಈಟಿವಿ ಭಾರತ್‌ಗೆ ಪ್ರತಿಕ್ರಿಯಿಸಿದ ಎನ್‌ಎಚ್‌ಆರ್‌ಸಿಯ ಜಂಟಿ ರಿಜಿಸ್ಟ್ರಾರ್ (ಕಾನೂನು) ಸುನಿಲ್ ಅರೋರಾ, ಈ ಸಂಬಂಧ ಸುಪ್ರೀಂಕೋರ್ಟ್‌ನಿಂದ ಪ್ರಕರಣ ಇತ್ಯರ್ಥಗೊಂಡಿದೆ. ಎಲ್ಲ ಸಾವಿಗೀಡಾದ ಜನರ ಸರಿಯಾದ ದಹನ ಮತ್ತು ಕೊನೆಯ ವಿಧಿಗಳನ್ನು ಸರಿಯಾದ ರೀತಿ ಮಾಡಬೇಕು ಎಂದು ಎಂದು ಹೇಳಿದ್ದಾರೆ.

ಈ ವಿಷಯವು ಖಂಡಿತವಾಗಿಯೂ ಕಳವಳಕಾರಿ ಸಂಗತಿಯಾಗಿದೆ. ನಾವು ಸಂಬಂಧಪಟ್ಟ ಅಧಿಕಾರಿಗಳಿಗೆ ನೋಟಿಸ್ ಕಳುಹಿಸಿದ್ದೇವೆ ಮತ್ತು ಅಧಿಕಾರಿಗಳಿಂದ ಬಂದ ವರದಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು. ಹಾಗೆ ಮುಂದೆ ಅವರು ವಾಸ್ತವಿಕ ವರದಿಗಳನ್ನು ಸಲ್ಲಿಸಬೇಕಾಗುತ್ತದೆ ಮತ್ತು ಅಗತ್ಯವಿದ್ದರೆ, ಎನ್‌ಎಚ್‌ಆರ್‌ಸಿ ಶಿಫಾರಸುಗಳನ್ನು ಮಾಡುತ್ತದೆ ಎಂದು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.