ETV Bharat / bharat

ದೋಷಪೂರಿತ ಫಾಸ್ಟ್​​ಟ್ಯಾಗ್​ ದಂಡ ಸಂಗ್ರಹದ ಅಂಕಿ - ಅಂಶಗಳಿಲ್ಲ ಎಂದ ಎನ್​​ಎಚ್​ಎಐ! - ದೋಷಪೂರಿತ ಫಾಸ್ಟ್​ಟ್ಯಾಗ್

ದೋಷಪೂರಿತ ಫಾಸ್ಟ್​ಟ್ಯಾಗ್ ಮತ್ತು ಅಂಥ ದೋಷಪೂರಿತ ಫಾಸ್ಟ್​ಟ್ಯಾಗ್​ಗಳಿಂದ ಸಂಗ್ರಹಿಸಲಾದ ದಂಡದ ಮೊತ್ತದ ಬಗ್ಗೆ ತನ್ನ ಬಳಿ ಯಾವುದೇ ಮಾಹಿತಿ ಇಲ್ಲ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ.

NHAI says no data available about faulty FASTags penalties collected from users at toll plazas

author img

By

Published : Jan 16, 2023, 3:59 PM IST

ನವದೆಹಲಿ: ದೋಷಪೂರಿತ ಫಾಸ್ಟ್‌ಟ್ಯಾಗ್‌ಗಳು ಮತ್ತು ಹೆದ್ದಾರಿ ಟೋಲ್ ಪ್ಲಾಜಾಗಳಲ್ಲಿ ತಮ್ಮ ಫಾಸ್ಟ್‌ಟ್ಯಾಗ್‌ಗಳು ಕಾರ್ಯನಿರ್ವಹಿಸದಿರುವಾಗ ವಾಹನ ಚಾಲಕರಿಂದ ಸಂಗ್ರಹಿಸಲಾದ ದಂಡದ ಬಗ್ಗೆ ತನ್ನ ಬಳಿ ಯಾವುದೇ ಮಾಹಿತಿ ಇಲ್ಲ ಎಂದು ಸರಕಾರಿ ಸ್ವಾಮ್ಯದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಹೇಳಿದೆ. ವಾಹನ ಚಾಲಕರು ಫಾಸ್ಟ್‌ಟ್ಯಾಗ್ ಹೊಂದಿಲ್ಲದಿದ್ದರೆ ಅಥವಾ ಅದು ಕಾರ್ಯನಿರ್ವಹಿಸದಿದ್ದರೆ, ವ್ಯಕ್ತಿಯು ಟೋಲ್ ಪ್ಲಾಜಾಗಳಲ್ಲಿ ಎರಡು ಪಟ್ಟು ಟೋಲ್ ಶುಲ್ಕ ಪಾವತಿಸಬೇಕಾಗುತ್ತದೆ ಎಂಬುದು ಗಮನಾರ್ಹ.

ಭಾರತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಪ್ರಕಾರ ಅಕ್ಟೋಬರ್ 31, 2022 ರಲ್ಲಿದ್ದಂತೆ 6 ಕೋಟಿಗೂ ಹೆಚ್ಚು ಫಾಸ್ಟ್‌ಟ್ಯಾಗ್‌ಗಳನ್ನು ನೀಡಲಾಗಿದೆ. ಆದಾಗ್ಯೂ, ರೇಡಿಯೊ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ (RFID) ಟ್ಯಾಗ್‌ ಅನ್ನು ತಮ್ಮ ವಾಹನಗಳಿಗೆ ಅಳವಡಿಸಿಕೊಂಡಿದ್ದರೂ, ದೋಷಯುಕ್ತ ಫಾಸ್ಟ್‌ಟ್ಯಾಗ್ ಪ್ರಕರಣಗಳ ಸಂಖ್ಯೆ ಮತ್ತು ಬಳಕೆದಾರರಿಂದ ಸಂಗ್ರಹಿಸಲಾದ ಒಟ್ಟು ದಂಡದ ಬಗ್ಗೆ ಯಾವುದೇ ಮಾಹಿತಿ ಎನ್​ಎಚ್​ಎಐ ಬಳಿ ಇಲ್ಲ.

ಫಾಸ್ಟ್​ಟ್ಯಾಗ್​ ಹೊಂದಿರದ ವಾಹನಗಳಿಗೆ ಎರಡು ಪಟ್ಟ ದಂಡ: 31.10.2022 ರವರೆಗೆ ಒಟ್ಟು 60,277,364 ಫಾಸ್ಟ್‌ಟ್ಯಾಗ್‌ಗಳನ್ನು ನೀಡಲಾಗಿದೆ ಎಂದು ಮಾಹಿತಿ ಹಕ್ಕು ಕಾಯಿದೆಯಡಿ ಪಿಟಿಐ ಸಲ್ಲಿಸಿದ ಅರ್ಜಿಗೆ ಪ್ರತಿಕ್ರಿಯೆಯಾಗಿ ಎನ್​ಎಚ್​ಎಐ ಹೇಳಿದೆ. ಹೆದ್ದಾರಿ ನಿರ್ವಾಹಕರು ಸ್ಥಾಪಿಸಿದ ಟೋಲ್ ಸಂಗ್ರಹಣೆ ಬೂತ್‌ಗಳಲ್ಲಿ ವಾಹನಗಳನ್ನು ನಿಲ್ಲಿಸದೆಯೇ ಎಲೆಕ್ಟ್ರಾನಿಕ್ ರೂಪದಲ್ಲಿ ಹೆದ್ದಾರಿ ಶುಲ್ಕವನ್ನು ಪಾವತಿಸಲು ಫಾಸ್ಟ್‌ಟ್ಯಾಗ್ ಬಳಕೆದಾರರಿಗೆ ಅನುಕೂಲ ಮಾಡಿಕೊಡುತ್ತದೆ. ಫೆಬ್ರವರಿ 16, 2021 ರಿಂದ ಸರ್ಕಾರವು ಎಲ್ಲ ಖಾಸಗಿ ಮತ್ತು ವಾಣಿಜ್ಯ ವಾಹನಗಳಿಗೆ ಫಾಸ್ಟ್​​ಟ್ಯಾಗ್​ ಅನ್ನು ಕಡ್ಡಾಯಗೊಳಿಸಿದೆ. ನಿಯಮಗಳ ಪ್ರಕಾರ, ಚಾಲನೆಯಲ್ಲಿರುವ ಅಥವಾ ಸಕ್ರಿಯವಾದ ಫಾಸ್ಟ್‌ಟ್ಯಾಗ್ ಹೊಂದಿರದ ವಾಹನಗಳು ಟೋಲ್ ಶುಲ್ಕದ ಎರಡು ಪಟ್ಟು ಮೊತ್ತವನ್ನು ದಂಡವಾಗಿ ಪಾವತಿಸಬೇಕಾಗುತ್ತದೆ.

ದೋಷಪೂರಿತ ಫಾಸ್ಟ್‌ಟ್ಯಾಗ್‌ ನೀಡಿದ್ದಕ್ಕಾಗಿ ಯಾವುದೇ ಫಾಸ್ಟ್‌ಟ್ಯಾಗ್ ವಿತರಣಾ ಏಜೆನ್ಸಿಯ ವಿರುದ್ಧ ಯಾವುದೇ ದಂಡದ ಕ್ರಮ ತೆಗೆದುಕೊಳ್ಳಲಾಗಿದೆಯೇ ಎಂಬ ಬಗ್ಗೆ ಎನ್‌ಎಚ್‌ಎಐ, ಅಂಥ ಯಾವುದೇ ಡೇಟಾ ಲಭ್ಯವಿಲ್ಲ ಎಂದು ಹೇಳಿದೆ. ಎನ್‌ಪಿಸಿಐ ಡೇಟಾ ಪ್ರಕಾರ 16.02.2021 ರಿಂದ 16.04.2022 ರವರೆಗೆ ಎನ್‌ಎಚ್‌ಎಐ ನ ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್‌ಟ್ಯಾಗ್ ಮೂಲಕ ಒಟ್ಟು ಟೋಲ್ ಸಂಗ್ರಹವು 39,118.15 ಕೋಟಿ ರೂಪಾಯಿಯಾಗಿದೆ ಎಂದು ಆರ್‌ಟಿಐ ಉತ್ತರ ಹೇಳಿದೆ.

24 ಬ್ಯಾಂಕ್​ಗಳಿಂದ ಫಾಸ್ಟ್​ಟ್ಯಾಗ್​ ಲಭ್ಯ: ಪ್ರಸ್ತುತ, 24 ಬ್ಯಾಂಕ್‌ಗಳಿಂದ ಫಾಸ್ಟ್‌ಟ್ಯಾಗ್ ನೀಡಲಾಗುತ್ತಿದೆ. ಟೋಲ್ ಪ್ಲಾಜಾಗಳಲ್ಲಿ ಕೆಲವೊಮ್ಮೆ ಫಾಸ್ಟ್‌ಟ್ಯಾಗ್‌ಗಳು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ ಎಂದು ಬಳಕೆದಾರರು ದೂರುತ್ತಿದ್ದಾರೆ. ಫಾಸ್ಟ್‌ಟ್ಯಾಗ್‌ಗಳು ಸರಿಯಾಗಿ ಕಾರ್ಯನಿರ್ವಹಿಸದ ಕಾರಣದಿಂದ ಕೆಲ ಬಾರಿ ಬಳಕೆದಾರರು ದುಪ್ಪಟ್ಟು ಟೋಲ್​ ಶುಲ್ಕ ಪಾವತಿಸಬೇಕಾಗುತ್ತದೆ. ರಾಷ್ಟ್ರೀಯ ಹೆದ್ದಾರಿ ಟೋಲ್ ಪ್ಲಾ ಸಂಬಂಧಿತ ಸಮಸ್ಯೆಗಳ ಪರಿಹಾರಕ್ಕೆ NHAI 1033 ಸಂಖ್ಯೆಯ ಸಹಾಯವಾಣಿ ಸ್ಥಾಪಿಸಿದೆ.

ಬಹುತೇಕ ದೂರುಗಳನ್ನು ಕಸ್ಟಮರ್ ಕೇರ್ ಕಾರ್ಯನಿರ್ವಾಹಕರು ತಕ್ಷಣವೇ ಪರಿಹರಿಸುತ್ತಾರೆ. ಇತರ ದೂರುಗಳನ್ನು ಅಗತ್ಯ ಪರಿಹಾರಕ್ಕಾಗಿ ಸಂಬಂಧಿಸಿದ ಎನ್​ಎಚ್​ಎಐ ಪ್ರಾದೇಶಿಕ ಕಚೇರಿಗಳು ಮತ್ತು ಬ್ಯಾಂಕ್‌ಗಳಿಗೆ ರವಾನಿಸಲಾಗುತ್ತದೆ ಎಂದು ಆರ್​ಟಿಐ ಉತ್ತರದಲ್ಲಿ ತಿಳಿಸಲಾಗಿದೆ. ಆದಾಗ್ಯೂ, ಕಾರ್ಯನಿರ್ವಹಿಸದ ಟ್ಯಾಗ್‌ಗಳ ವಿಚಾರದಲ್ಲಿ ಬಹತೇಕ ಬಳಕೆದಾರರು ಫಾಸ್ಟ್‌ಟ್ಯಾಗ್ ಅನ್ನು ಕ್ಯಾನ್ಸಲ್ ಮಾಡುತ್ತಾರೆ ಮತ್ತು ಇನ್ನೊಂದನ್ನು ಖರೀದಿಸುತ್ತಾರೆ. ಅಥವಾ ವಿತರಕ ಬ್ಯಾಂಕ್ ನಂತರ ಹೊಸ ಟ್ಯಾಗ್ ಅನ್ನು ಒದಗಿಸುತ್ತದೆ.

ಆದರೆ, ರೀಡ್ ಆಗದ RFID ಟ್ಯಾಗ್‌ ಕಾರಣದಿಂದ ಪಾವತಿಸಲಾದ ಹೆಚ್ಚುವರಿ ಶುಲ್ಕವನ್ನು ಗ್ರಾಹಕರು ಮರಳಿ ಪಡೆಯುವುದು ಮಾತ್ರ ಸಾಧ್ಯವೇ ಇಲ್ಲ.

ಇದನ್ನೂ ಓದಿ: ರೈಲ್ವೆಯಲ್ಲಿ ಖಾಸಗಿ ಗುತ್ತಿಗೆದಾರರಿಗೆ ಲಾಭ ಮಾಡಲು ಲಂಚ: ಹಿರಿಯ ಅಧಿಕಾರಿ, ಹವಾಲಾ ಆಪರೇಟರ್​​ ಸೇರಿ 7 ಜನರ ಸೆರೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.