- ಕೇರಳದಲ್ಲಿ ಹೆಚ್ಚಿದ ಕೋವಿಡ್- ಇಂದಿನಿಂದ ಒಂದು ವಾರಗಳ ಕಾಲ ಕಾಸರಗೋಡು- ಮಂಗಳೂರು ಬಸ್ ಸಂಚಾರ ರದ್ದು.
- ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಾರವಾರ ಜಿಲ್ಲೆ ಪ್ರವಾಸ ಕೈಗೊಳ್ಳಲಿದ್ದು, ಎರಡು ದಿನಗಳ ಕಾಲ ನೆರೆ ಪರಿಶೀಲನೆ ನಡೆಸಲಿದ್ದಾರೆ.
- ಇಂದಿನಿಂದ ರಾಷ್ಟ್ರಪತಿ ಭವನ ಮತ್ತು ಮ್ಯೂಸಿಯಂ ಸಂಕೀರ್ಣಕ್ಕೆ ಸಾರ್ವಜನಿಕರ ಭೇಟಿಗೆ ಅವಕಾಶ.
- ವೇತನ, ಪಿಂಚಣಿ, ಇಎಂಐ ಪಾವತಿಗೆ ಇಂದಿನಿಂದ ಹೊಸ ನಿಯಮ ಅನ್ವಯ.
- ತ್ರಿವಳಿ ತಲಾಖ್ ನಿಷೇಧ ಕಾನೂನಿಗೆ 2 ವರ್ಷ- ಮುಸ್ಲಿಂ ಮಹಿಳಾ ಹಕ್ಕುಗಳ ದಿನಾಚರಣೆ.
- ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆಂಧ್ರಪ್ರದೇಶ ಚಿತ್ತೂರು ಜಿಲ್ಲೆಯ ಕನಿಪಕರಮ್ನಲ್ಲಿರುವ ವರಸಿದ್ಧಿ ವಿನಾಯಕ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.
- ಭಾರತ-ಬಾಂಗ್ಲಾದೇಶ ನಡುವಿನ ಸರಕು ಸಾಗಣೆ ರೈಲ್ವೆ ಸೇವೆ ಆರಂಭ.
- ವಿವಿಧ ಯೋಜನೆಗಳಿಗೆ ಚಾಲನೆ ನೀಡಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಉತ್ತರ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ.
- Tokyo Olympics ಸೆಮಿಫೈನಲ್ನಲ್ಲಿ ಸೋತಿರುವ ಭಾರತದ ಪಿ.ವಿ ಸಿಂಧು ಕಂಚಿನ ಪದಕಕ್ಕಾಗಿ ಹೋರಾಟ ನಡೆಸಲಿದ್ದಾರೆ.
- ಬಾಕ್ಸರ್ ಸತೀಶ್ ಕುಮಾರ್ ಕಂಚಿನ ಪದಕಕ್ಕಾಗಿ 91 ಕೆ.ಜಿ ವಿಭಾಗದಲ್ಲಿ ಉಜ್ಬೇಕಿಸ್ತಾನದ ಬಖೋಡಿರ್ ಜಲೋವ್ ವಿರುದ್ಧ ಪೈಪೋಟಿ ನಡೆಸಲಿದ್ದಾರೆ.
- ಕೋವಿಡ್ 19 ಕಾರಣದಿಂದ ಸೌದಿ ಅರೇಬಿಯಾ ದೇಶವು ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಹೇರಿದ್ದ ನಿಷೇಧವನ್ನು ಇಂದಿನಿಂದ ರದ್ದುಗೊಳಿಸಲಿದೆ.
News Today: ಕಂಚಿನ ಪದಕಕ್ಕೆ ಸಿಂಧು ಹೋರಾಟ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳು - KPCC DK Shivakumar
ಒಲಿಂಪಿಕ್ಸ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಭಾರತದ ಭರವಸೆಯ ಸ್ಟಾರ್ ಶಟ್ಲರ್ ಪಿ.ವಿ ಸಿಂಧು(P.V Sindhu) ನಿನ್ನೆ (ಶನಿವಾರ) ಸೆಮಿಫೈನಲ್ನಲ್ಲಿ ಸೋಲು ಕಂಡಿದ್ದರು. ಇಂದು (ಭಾನುವಾರ) ಕಂಚಿನ ಪದಕಕ್ಕೆ ಅವರು ಚೀನಾ ಆಟಗಾರ್ತಿಯೊಂದಿಗೆ ಸೆಣಸಲಿದ್ದಾರೆ. ಇನ್ನುಳಿದಂತೆ ದಿನದ ಮಹತ್ವದ ವಿದ್ಯಮಾನಗಳು ಹೀಗಿವೆ..
News today