ಹೈದರಾಬಾದ್: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಐದು ತಿಂಗಳಲ್ಲೇ ತೆಲಂಗಾಣದ 28 ವರ್ಷದ ವ್ಯಕ್ತಿಯನ್ನು ಮಹಾಮಾರಿ ಕೊರೊನಾ ಬಲಿ ತೆಗೆದುಕೊಂಡಿದೆ.
ಹೈದರಾಬಾದ್ನ ಮಲ್ಲಾಪುರದಲ್ಲಿ ವಾಸವಾಗಿರುವ ದಿನಕರ್ ಯಾದವ್ ಎಂಬುವರು ತನ್ನ ಪತ್ನಿಯೊಂದಿಗೆ ಎಲ್ಬಿ ನಗರದಲ್ಲಿರುವ ಅತ್ತೆ ಮನೆಗೆ ಹೋಗಿ ಬಂದ ಮರುದಿನದಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು. ಬಳಿಕ ಅವರ ಕೋವಿಡ್ ವರದಿ ಪಾಸಿಟಿವ್ ಬಂದಿದ್ದು, ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದರು.
ಇದನ್ನೂ ಓದಿ: ಆಮ್ಲಜನಕ ಇಲ್ಲವೆಂದು ರಾತ್ರಿ ವಿಡಿಯೋ ಕಾಲ್, ಮುಂಜಾನೆ ಸಾವು: ನವವಿವಾಹಿತನ ದುರಂತ ಅಂತ್ಯ
ಆದರೆ ಅವರ ಆರೋಗ್ಯ ಹದಗೆಟ್ಟಿದ್ದು, ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಮೇ 4ರಂದು ಪೋಷಕರಿಗೆ ಆಸ್ಪತ್ರೆಯಿಂದ ಕರೆ ಮಾಡಿದ್ದ ದಿನಕರ್, ನನಗೆ ಉಸಿರಾಡಲು ತುಂಬಾ ಕಷ್ಟವಾಗುತ್ತಿದೆ. ನನ್ನ ಹೆಂಡತಿಯನ್ನು ಹುಷಾರಾಗಿ ನೋಡಿಕೊಳ್ಳಿ ಎಂದು ಹೇಳಿ ಕೊನೆಯುಸಿರೆಳೆದಿದ್ದಾರೆ.