ಫರಿದಾಬಾದ್: ನೂತನವಾಗಿ ಆಯ್ಕೆಯಾದ ಸರಪಂಚ್‌ಗೆ 500ರ ನೋಟುಗಳಿಂದ ಕೂಡಿದ 11 ಲಕ್ಷ ರೂಪಾಯಿ ಮಾಲೆ ಹಾಕಿ ಸನ್ಮಾನ ಮಾಡಲಾಗಿದೆ. ಹರಿಯಾಣದ ಫರಿದಾಬಾದ್ ಜಿಲ್ಲೆಯ ಫತೇಪುರ್ ತಾಗಾ ಗ್ರಾಮದಲ್ಲಿ ಈ ಘಟನೆ ನಡೆದಿದೆ
ನೂತನ ಸರಪಂಚ್ ಆಸ್ ಮೊಹಮ್ಮದ್ ಎಂಬುವರು ಬೃಹತ್ ಹಾರವಾಗಿದ್ದ ಕಾರಣ ಕಟ್ಟಡದ ಮೊದಲ ಮಹಡಿಯಲ್ಲಿ ನಿಂತಿದ್ದರು. ಶುಕ್ರವಾರ ರಾತ್ರಿ ಆಸ್ ವಿಜಯಿ ಎಂದು ಘೋಷಿಸಿದ ಬಳಿಕ ವಿಶಿಷ್ಟ ಆಚರಣೆ ನಡೆದಿದೆ. ಸ್ಥಳೀಯ ಯುವಕನೊಬ್ಬ ಸರಪಂಚ್‌ಗೆ ಹಾರ ಹಾಕಿರುವ ಫೋಟೋ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾನೆ. ಇದೀಗ ಫೋಟೋ ಸಖತ್ ವೈರಲ್ ಆಗಿದೆ.
ಗ್ರಾಮಸ್ಥರ ಪ್ರೀತಿಯೇ ನನ್ನ ಗೆಲುವಿಗೆ ಕಾರಣವಾಗಿದೆ. ಜನಸೇವಕನಾಗಿ ಕೆಲಸ ಮಾಡಿ ಆದರ್ಶ ಗ್ರಾಮವನ್ನಾಗಿಸಲು ಎಲ್ಲ ಪ್ರಯತ್ನ ಮಾಡುತ್ತೇನೆ ಎಂದು ಸರಪಂಚ್ ಆಸ್ ಮೊಹಮ್ಮದ್ ಜನತೆಗೆ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಗುಜರಾತ್ನಲ್ಲಿ 2036ರ ಒಲಿಂಪಿಕ್, 20 ಲಕ್ಷ ಉದ್ಯೋಗ ಸೃಷ್ಟಿ..ಚುನಾವಣಾ ಪ್ರಣಾಳಿಕೆಯಲ್ಲಿ ಬಿಜೆಪಿ ಬ್ರಹ್ಮಾಸ್ತ್ರ