ETV Bharat / bharat

ರಾಷ್ಟ್ರದ ಹೆಮ್ಮೆಯ ಪ್ರತೀಕ ರಾಜದಂಡವನ್ನು ಪ್ರಧಾನಿ ಮೋದಿಗೆ ಹಸ್ತಾಂತರಿಸಿದ ಅಧೀನಂ

author img

By

Published : May 27, 2023, 10:40 PM IST

Updated : May 27, 2023, 10:59 PM IST

ನೂತನ ಸಂಸತ್‌ ಭವನದಲ್ಲಿ ಇರಿಸಲು ನಿರ್ಧರಿಸುವ ರಾಜದಂಡವನ್ನು ಅಧೀನಂನ ಅರ್ಚಕರು ಪ್ರಧಾನಿಗೆ ಹಸ್ತಾಂತರ ಮಾಡಿದರು.

ರಾಜದಂಡ ಹಸ್ತಾಂತರ
ರಾಜದಂಡ ಹಸ್ತಾಂತರ
ರಾಜದಂಡ ಹಸ್ತಾಂತರ

ನವದೆಹಲಿ: ರಾಷ್ಟ್ರದ ಹೆಮ್ಮೆಯ ಪ್ರತೀಕವಾಗಿರುವ ನೂತನ ಸಂಸತ್‌ ಭವನವು ಭಾನುವಾರ ಅದ್ಧೂರಿಯಾಗಿ ಉದ್ಘಾಟನೆಯಾಗಲಿದೆ. ಅದಕ್ಕೂ ಮುನ್ನ ಶನಿವಾರ ಮಧುರೈ ಅಧೀನಂನ 293ನೇ ಪ್ರಧಾನ ಅರ್ಚಕರು ಸಂಸತ್‌ ಭವನದಲ್ಲಿ ಇರಿಸಲು ನಿರ್ಧರಿಸಿರುವ ಸೆಂಗೋಲ್‌ (ರಾಜದಂಡ) ಅನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಸ್ತಾಂತರ ಮಾಡಿದರು.

ಚೆನ್ನೈನಿಂದ ರಾಷ್ಟ್ರ ರಾಜಧಾನಿ ನವದೆಹಲಿಗೆ ಬಂದಿಳಿದ ತಿರುವವಾಡುತುರೈ ಅಧೀನಂ ದಾರ್ಶನಿಕರು, ಶನಿವಾರ ಮಧ್ಯಾಹ್ನ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದಲ್ಲದೇ ಹೆಮ್ಮೆಯ ಪ್ರತೀಕವಾಗಿರುವ ರಾಜದಂಡವನ್ನು ವಿಶೇಷ ಉಡುಗೊರೆಯಾಗಿ ನೀಡಿದರು. ಪ್ರಧಾನಿ ಮೋದಿ ಶ್ರೀಗಳು ನೀಡಿದ ರಾಜದಂಡವನ್ನು ಮನಪೂರ್ವಕ ಸ್ವೀಕರಿಸಿದರು.

ಭಾನುವಾರ ನೂತನ ಸಂಸತ್ ಭವನದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರು ಸಂಸತ್ ಭವನದ ಸ್ಪೀಕರ್ ಆಸನದ ಬಳಿ ಐತಿಹಾಸಿಕ ಮತ್ತು ಪವಿತ್ರವಾದ ಈ ಸೆಂಗೋಲ್ ಅನ್ನು ಸ್ಥಾಪಿಸಲಿದ್ದಾರೆ. ರಾಜದಂಡ ಹಸ್ತಾಂತರಕ್ಕೂ ಮುನ್ನ ತಮ್ಮ ನಿವಾಸದಲ್ಲಿ ಅಧೀನರನ್ನು ಭೇಟಿಯಾದ ಪ್ರಧಾನಿ, ಶ್ರೀಗಳಿಂದ ಆಶೀರ್ವಾದ ಪಡೆದರು.

  • #WATCH | "I greet you all by bowing before you. I am fortunate that you have arrived at my residence. It is the blessings of Lord Shiv due to which I am getting the opportunity for darshan of you Shiv bhakts," says Prime Minister Narendra Modi as addresses Adheenams at his… pic.twitter.com/NjCY751tjk

    — ANI (@ANI) May 27, 2023 " class="align-text-top noRightClick twitterSection" data=" ">

ರಾಜದಂಡ ಹಸ್ತಾಂತರದ ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ "ದೇಶ ಸ್ವಾತಂತ್ರ್ಯಗೊಂಡ ಬಳಿಕ ಪವಿತ್ರ ಈ ಸೆಂಗೋಲ್‌ಗೆ ಗೌರವ ಮತ್ತು ಗೌರವಾನ್ವಿತ ಸ್ಥಾನ ನೀಡಿದ್ದರೆ ಚೆನ್ನಾಗಿರುತ್ತಿತ್ತು. ಆದರೆ, ಹೆಮ್ಮೆಯ ಪ್ರತೀಕವಾಗಿರುವ ಈ ಸೆಂಗೋಲ್ ಅನ್ನು ಆನಂದ ಭವನದಲ್ಲಿ ವಾಕಿಂಗ್ ಸ್ಟಿಕ್ ರೀತಿ ಪ್ರದರ್ಶನಕ್ಕೆ ಇಡಲಾಗಿತ್ತು. ನಮ್ಮ ಸರ್ಕಾರವು ಈ ಸೆಂಗೋಲ್ ಅನ್ನು ಆನಂದ ಭವನದಿಂದ ಹೊರಗೆ ತಂದಿದೆ. ಭಾರತದ ಶ್ರೇಷ್ಠ ಸಂಪ್ರದಾಯದ ಪ್ರತೀಕವಾದ ಈ ಸೆಂಗೊಲ್ ಅನ್ನು ಹೊಸ ಸಂಸತ್ತಿನ ಕಟ್ಟಡದಲ್ಲಿ ಪ್ರತಿಷ್ಠಾಪಿಸಲಾಗುತ್ತಿರುವುದು ನನಗೆ ಸಂತಸ ತಂದಿದೆ. ಇಂದು ನೀವು ನನ್ನ ನಿವಾಸಕ್ಕೆ ಆಗಮಿಸಿರುವುದು ನನ್ನ ಜೀವನದ ಅದೃಷ್ಟ" ಎಂದು ತಮ್ಮ ನಿವಾಸಕ್ಕೆ ಆಗಮಿಸಿದ್ದ ಶ್ರೀಗಳನ್ನು ಗುಣಗಾನ ಮಾಡಿದರು.

  • #WATCH | Prime Minister Narendra Modi says, "...It would have been good if the holy #Sengol would have been given its due respect after independence and given an honourable position. But this Sengol was kept on display as a walking stick in Anand Bhawan, Prayagraj. Your 'sevak'… pic.twitter.com/Z4vKmsRQ7r

ಇದೇ ವೇಳೆ, ವಿರೋಧಿಗಳ ವಿರುದ್ಧ ವಾಗ್ದಾಳಿ ನಡೆಸಿದ ಅವರು, "ಭಾರತವು ಬಲಗೊಳ್ಳುತ್ತಿದೆ. ಆದರೆ, ಭಾರತದ ಪ್ರಗತಿಯನ್ನು ಸಹಿಸಲಾಗದ ಕೆಲವರು ನಮ್ಮ ಏಕತೆಯನ್ನು ಒಡೆಯಲು ಪ್ರಯತ್ನಿಸುತ್ತಾರೆ. ಆದರೆ, ಆಧ್ಯಾತ್ಮಿಕತೆಯ ಶಕ್ತಿಗೆ ಇದನ್ನು ತಡೆಯುವ ಶಕ್ತಿ ಇದೆ ಅನ್ನೋದು ನನ್ನ ನಂಬಿಕೆ. ಬರುವ ಸವಾಲುಗಳನ್ನು ಎದುರಿಸಲು ಇದು ನಮಗೆ ಸಹಾಯ ಮಾಡುತ್ತದೆ" ಎಂದು ಪ್ರಧಾನಿ ಮೋದಿ ಹೇಳಿದರು.

ಚಿನ್ನದ ಈ ರಾಜದಂಡವನ್ನು ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು ಮೊದಲ ಬಾರಿಗೆ ಸ್ವೀಕರಿಸಿದ್ದರು. ಇದು ಬ್ರಿಟಿಷ್ ವಸಾಹತುಶಾಹಿ ಆಡಳಿತದ ಅಂತ್ಯ ಮತ್ತು ಭಾರತೀಯ ಸ್ವ-ಆಡಳಿತಕ್ಕೆ ಅಧಿಕಾರದ ವರ್ಗಾವಣೆಯ ಸಂಕೇತವಾಗಿದೆ. ಸೆಂಗೋಲ್ ತಮಿಳು ಪದ "ಸೆಮ್ಮೈ"ನಿಂದ ಬಂದಿದ್ದು ತಮಿಳಿನಲ್ಲಿ "ಧರ್ಮ" ಎಂದು ಇದರರ್ಥ. ಈ ರಾಜದಂಡವನ್ನು ಒಬ್ಬ ವ್ಯಕ್ತಿಗೆ ವಹಿಸಿದ ಮೇಲೆ, ಆ ವ್ಯಕ್ತಿ ನ್ಯಾಯಯುತ ಮತ್ತು ನಿಷ್ಪಕ್ಷಪಾತ ಆಡಳಿತವನ್ನು ಉತ್ತೇಜಿಸುವ ಆಳವಾದ ಜವಾಬ್ದಾರಿಯನ್ನು ಹೊಂದಿರುತ್ತದೆ ಎಂದು ನಂಬಲಾಗಿದೆ.

  • #WATCH | "The more united India is, the stronger it will be. Those creating obstacles in our path to development will pose various challenges. Those who can't stand India's progress will attempt to break our unity. But I believe that the strength of spirituality that the nation… pic.twitter.com/Rf2goMeg8o

ಈ ಬಗ್ಗೆ ಗೃಹ ಸಚಿವ ಶಾ ಮಾತನಾಡಿ, ಈ ರಾಜದಂಡದ ಇತಿಹಾಸ ಮತ್ತು ಮಹತ್ವದ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಾಗಿ ತಿಳಿದಿಲ್ಲ. ಆದ್ದರಿಂದ, ನೂತನ ಸಂಸತ್ತಿನ ಕಟ್ಟಡದೊಳಗೆ ಈ ರಾಜದಂಡವನ್ನು ಸ್ಥಾಪಿಸುವು ಮೂಲಕ ಭಾರತದ ಸಾಂಸ್ಕೃತಿಕ ಪರಂಪರೆ ಎತ್ತಿ ಹಿಡಿಯಲಾಗುವುದು ಎಂದಿದ್ದರು. ನೂತನ ಸಂಸತ್ತಿನಲ್ಲಿ ಇರಿಸಲು ನಿರ್ಧರಿಸಿರುವ ಪ್ರಧಾನಿ ಮೋದಿ ಅವರ ನಡೆಯನ್ನು ಎಐಎಡಿಎಂಕೆ ಮುಖ್ಯಸ್ಥ ಎಡಪ್ಪಾಡಿ ಕೆ ಪಳನಿಸ್ವಾಮಿ ಕೂಡ ಶ್ಲಾಘಿಸಿದ್ದಾರೆ.

ಇದನ್ನೂ ಓದಿ: "ಏಕ್ ಭಾರತ್ ಶ್ರೇಷ್ಠ ಭಾರತ್‌" ಪರಿಕಲ್ಪನೆಯಲ್ಲಿ ನಿರ್ಮಾಣವಾದ ಸಂಸತ್​ ಭವನ: ಭಾರತದ ಎಲ್ಲೆಡೆಗಳಿಂದ ಸೆಂಟ್ರಲ್ ವಿಸ್ಟಾಗೆ ಕಚ್ಚಾ ವಸ್ತುಗಳ ಬಳಕೆ..

Last Updated : May 27, 2023, 10:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.