ETV Bharat / bharat

ಹೊಸ ಸಂಸತ್​ ಭವನ ಉದ್ಘಾಟನೆ ಸ್ಮರಣಾರ್ಥ ₹75 ನಾಣ್ಯ ಬಿಡುಗಡೆ: ವಿಶೇಷತೆ ಏನು? - ನೂತನ ಸಂಸತ್ ಭವನ ಉದ್ಘಾಟನೆ

ನೂತನ ಸಂಸತ್ ಭವನ ಉದ್ಘಾಟನೆಯ ಸ್ಮರಣಾರ್ಥವಾಗಿ ಕೇಂದ್ರ ಸರ್ಕಾರ 75 ರೂಪಾಯಿ ಮುಖಬೆಲೆಯ ನಾಣ್ಯವನ್ನು ಬಿಡುಗಡೆ ಮಾಡಲಿದೆ. ವಿಶೇಷ ನಾಣ್ಯವು 75 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸುತ್ತಿರುವ ಭಾರತಕ್ಕೆ ಗೌರವ ಸೂಚಕವಾಗಿರಲಿದೆ.

new Parliament building
ಹೊಸ ಸಂಸತ್​ ಭವನ
author img

By

Published : May 26, 2023, 10:05 AM IST

ನವದೆಹಲಿ: ನೂತನ ಸಂಸತ್ ಭವನದ ಉದ್ಘಾಟನೆಯ ಸವಿನೆನಪಿಗಾಗಿ ಭಾರತ ಸರ್ಕಾರ 75 ರೂಪಾಯಿಯ ವಿಶೇಷ ನಾಣ್ಯವನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ ಎಂದು ಹಣಕಾಸು ಸಚಿವಾಲಯ ಗುರುವಾರ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ. 2011 ರ ನಾಣ್ಯ ಕಾಯ್ದೆಯ ಸೆಕ್ಷನ್ 24 ರ ಅಡಿಯಲ್ಲಿ ಸಚಿವಾಲಯ ಈ ಗೆಜೆಟ್ ಅಧಿಸೂಚನೆ ಹೊರಡಿಸಿದೆ. ಭಾರತದ ಸ್ವಾತಂತ್ರ್ಯೋತ್ಸವದ 75 ವರ್ಷಗಳ ನೆನಪಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಭವ್ಯ ಶಾಸಕಾಂಗ ಕಟ್ಟಡವನ್ನು ಮೇ 28 ರಂದು ಉದ್ಘಾಟಿಸಲಿದ್ದಾರೆ.

ನಾಣ್ಯದ ವಿಶೇಷತೆ ಹೀಗಿದೆ..: ನಾಣ್ಯದ ಒಂದು ಬದಿಯಲ್ಲಿ ಅಶೋಕ ಸ್ತಂಭದ ಸಿಂಹದ ಲಾಂಛನ ಇರಲಿದೆ. ಅದರ ಕೆಳಗೆ 'ಸತ್ಯಮೇವ ಜಯತೇ' ಎಂದು ಬರೆಯಲಾಗಿದೆ. ಎಡಭಾಗದಲ್ಲಿ 'ಭಾರತ್' ಎಂಬ ಪದವನ್ನು ದೇವನಾಗರಿ ಲಿಪಿಯಲ್ಲಿಯೂ ಮತ್ತು ಬಲಭಾಗದಲ್ಲಿ 'INDIA' ಎಂಬ ಪದವನ್ನು ಇಂಗ್ಲಿಷ್‌ನಲ್ಲಿ ಬರೆಯಲಾಗಿದೆ. ರೂಪಾಯಿ ಚಿಹ್ನೆ (₹) ಮತ್ತು ಸಿಂಹದ ಲಾಂಛನದ ಕೆಳಗೆ ಅಂತಾರಾಷ್ಟ್ರೀಯ ಅಂಕಿಗಳಲ್ಲಿ 75 ರ ಮುಖಬೆಲೆಯ ಮೌಲ್ಯ ಹೊಂದಿರಲಿದೆ.

ನ್ಯಾಣದ ಮತ್ತೊಂದು ಬದಿಯಲ್ಲಿ ಸಂಸತ್​ ಸಂಕೀರ್ಣದ ಫೋಟೋ ಇರಲಿದೆ. ನಾಣ್ಯದ ಮೇಲಿನ ಪರಿಧಿಯಲ್ಲಿ ದೇವನಾಗರಿ ಲಿಪಿಯಲ್ಲಿ 'ಸಂಸದ್​ ಸಂಕುಲ್'​ ಎಂದು ಹಾಗೂ ಕೆಳಗಿನ ಪರಿಧಿಯಲ್ಲಿ 'ಪಾರ್ಲಿಮೆಂಟ್ ಕಾಂಪ್ಲೆಕ್ಸ್' (PARLIAMENT COMPLEX)​ ಎಂದು ಇಂಗ್ಲಿಷ್​ನಲ್ಲಿ ಬರೆಯಲಾಗಿದೆ. ಇದರ ಜತೆಗೆ, '2023' ವರ್ಷವನ್ನು ಸಂಸತ್ತಿನ ಸಂಕೀರ್ಣದ ಚಿತ್ರದ ಕೆಳಗೆ ಪ್ರಿಂಟ್ ಮಾಡಲಾಗಿದೆ.

ವೃತ್ತಾಕಾರದ ನಾಣ್ಯವು 44 ಮಿಲಿ ಮೀಟರ್ ವ್ಯಾಸ ಹೊಂದಿದೆ. ಬೆಳ್ಳಿ (50%), ತಾಮ್ರ (40%), ನಿಕಲ್ (5%) ಮತ್ತು ಸತು (5%) ಒಳಗೊಂಡಿರುವ ನಾಲ್ಕು ಮಿಶ್ರಲೋಹದಿಂದ ತಯಾರಿಸಲಾಗಿದೆ. ನಾಣ್ಯದ ಪ್ರಮಾಣಿತ ತೂಕ 35 ಗ್ರಾಂ.

ನಾಣ್ಯ ಬಿಡುಗಡೆ ಇದೇ ಮೊದಲಲ್ಲ: ₹ 75 ಮೌಲ್ಯದ ನಾಣ್ಯವನ್ನು ಸರ್ಕಾರ ಬಿಡುಗಡೆ ಮಾಡುತ್ತಿರುವುದು ಇದೇ ಮೊದಲಲ್ಲ. ಈ ವರ್ಷದ ಜನವರಿಯಲ್ಲಿ ಎನ್‌ಸಿಸಿಯ 75 ನೇ ಸಂಸ್ಥಾಪನಾ ದಿನದ ಸಂದರ್ಭದಲ್ಲಿ ಪ್ರಧಾನಿ ಮೋದಿ ₹75 ನಾಣ್ಯವನ್ನು ಬಿಡುಗಡೆ ಮಾಡಿದ್ದರು. 2020 ರಲ್ಲಿ ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯ (FAO) 75 ನೇ ವಾರ್ಷಿಕೋತ್ಸವದ ಸ್ಮರಣಾರ್ಥ ₹75 ನಾಣ್ಯವನ್ನು ಬಿಡುಗಡೆ ಮಾಡಲಾಯಿತು.

2018 ರಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಪೋರ್ಟ್ ಬ್ಲೇರ್‌ನಲ್ಲಿ ಮೊದಲ ಬಾರಿಗೆ ತ್ರಿವರ್ಣ ಧ್ವಜವನ್ನು ಹಾರಿಸಿದ 75 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ 75 ನಾಣ್ಯವನ್ನು ಬಿಡುಗಡೆ ಮಾಡಲಾಗಿತ್ತು. ಅಲ್ಲದೇ 2010 ರಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ 75 ನೇ ವಾರ್ಷಿಕೋತ್ಸವ (ಪ್ಲಾಟಿನಂ ಜುಬಿಲಿ) ಸಂದರ್ಭದಲ್ಲಿ ಇದೇ ರೀತಿಯ 75 ರೂಪಾಯಿಯ ನಾಣ್ಯ ಬಿಡುಗಡೆ ಮಾಡಲಾಗಿತ್ತು.

ವಿಪಕ್ಷಗಳಿಂದ ಬಹಿಷ್ಕಾರ: ಹೊಸ ಸಂಸತ್​ ಭವನ ಮೇ 28 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡಲಿದ್ದಾರೆ. ಸುಮಾರು 25 ಕ್ಕೂ ಅಧಿಕ ಪಕ್ಷಗಳು ಈ ಅದ್ಧೂರಿ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿವೆ. ಆದರೆ 19 ಕ್ಕೂ ಹೆಚ್ಚು ವಿಪಕ್ಷಗಳು ಕಾರ್ಯಕ್ರಮ ಬಹಿಷ್ಕರಿಸಿವೆ. ಹೊಸ ಸಂಸತ್ ಭವನವಾದ ಸೆಂಟ್ರಲ್​ ವಿಸ್ಟಾವನ್ನು ರಾಷ್ಟ್ರಪತಿ ಬದಲಿಗೆ ಪ್ರಧಾನಿ ಉದ್ಘಾಟನೆ ಮಾಡುತ್ತಿರುವುದು ವಿಪಕ್ಷಗಳ ಅಸಮಾಧಾನಕ್ಕೆ ಕಾರಣ. ಪ್ರಜಾಪ್ರಭುತ್ವದ ಆತ್ಮವನ್ನೇ ಹೀರಿರುವಾಗ ಹೊಸ ಸಂಸತ್​ ಭವನದಲ್ಲಿ ಯಾವುದೇ ಮೌಲ್ಯಗಳು ಕಾಣುತ್ತಿಲ್ಲ. ಹೀಗಾಗಿ ಸಮಾರಂಭವನ್ನು ಬಹಿಷ್ಕರಿಸುತ್ತಿದ್ದೇವೆ ಎಂದು ವಿಪಕ್ಷಗಳು ಹೇಳಿವೆ.

ಇದನ್ನೂ ಓದಿ: ಹೊಸ ಸಂಸತ್ ಭವನದ ಉದ್ಘಾಟನಾ ಸಮಾರಂಭಕ್ಕೆ 19 ಪ್ರತಿಪಕ್ಷಗಳಿಂದ ಬಹಿಷ್ಕಾರ!

ಬಿಜೆಪಿ ನಾಯಕರಿಂದ ತಿರುಗೇಟು: ಪ್ರತಿಪಕ್ಷಗಳ ವಿರುದ್ಧ ತೀವ್ರ ಪ್ರತಿದಾಳಿ ನಡೆಸಿರುವ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ), ನೂತನ ಸಂಸತ್​ ಭವನ ಉದ್ಘಾಟನೆಯನ್ನು ಬಹಿಷ್ಕರಿಸುವ ನಿರ್ಧಾರ, "ನಮ್ಮ ಮಹಾನ್ ರಾಷ್ಟ್ರದ ಪ್ರಜಾಸತ್ತಾತ್ಮಕ ನೀತಿ ಮತ್ತು ಸಾಂವಿಧಾನಿಕ ಮೌಲ್ಯಗಳಿಗೆ ಮಾಡಿದ ಘೋರ ಅಪಹಾಸ್ಯ" ಎಂದು ಕಿಡಿಕಾರಿದೆ.

"ಅಸ್ತಿತ್ವದಲ್ಲಿಯೇ ಇಲ್ಲದ ವಿಷಯಗಳ ಬಗ್ಗೆ ವಿವಾದ ಸೃಷ್ಟಿಸುವ ಹವ್ಯಾಸವನ್ನು ಕಾಂಗ್ರೆಸ್ ಹೊಂದಿದೆ. ರಾಷ್ಟ್ರಪತಿ ದೇಶದ ಮುಖ್ಯಸ್ಥರಾದರೆ, ಪ್ರಧಾನಿ ಸರ್ಕಾರದ ಮುಖ್ಯಸ್ಥರು. ಅವರು ಸರ್ಕಾರದ ಪರವಾಗಿ ಸಂಸತ್ ಮುನ್ನಡೆಸುತ್ತಾರೆ. ಅವರ ನೀತಿಗಳು ಕಾನೂನುಗಳ ಅಡಿಯಲ್ಲಿ ರೂಪುಗೊಂಡಿವೆ. ರಾಷ್ಟ್ರಪತಿ ಯಾವುದೇ ಸದನದ (ಲೋಕಸಭೆ/ರಾಜ್ಯಸಭೆ) ಸದಸ್ಯರಲ್ಲ" ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.

ಇದನ್ನೂ ಓದಿ: ಹೊಸ ಸಂಸತ್ ಕಟ್ಟಡ ಉದ್ಘಾಟನೆ ವಿವಾದ: ಪ್ರಧಾನಿಯೇ ಸರ್ಕಾರದ ಮುಖ್ಯಸ್ಥರು- ಬಿಜೆಪಿ ಸಮರ್ಥನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.