ನವದೆಹಲಿ : ಹೊಸ ಸಂಸತ್ ಕಟ್ಟಡದ ವೆಚ್ಚ ಅಂದಾಜು 971 ಕೋಟಿ ರೂ. ಎಂದು ಅಂತಿಮಗೊಳಿಸಿರುವುದಾಗಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.
ಡಿಸೆಂಬರ್ 10ರಂದು ಪ್ರಧಾನಿ ನರೇಂದ್ರ ಮೋದಿ ಅಡಿಪಾಯ ಹಾಕಿದ ಬಳಿಕ ಹೊಸ ಸಂಸತ್ ಕಟ್ಟಡದ ಕಾಮಗಾರಿ ಪ್ರಾರಂಭವಾಗಿದ್ದು, 2022ರಲ್ಲಿ ಭಾರತ 75ನೇ ಸ್ವಾತಂತ್ರ್ಯೋತ್ಸವ ಆಚರಿಸುವ ವೇಳೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ಓದಿ: ಆರ್ಬಿಐ ಅಧಿಕಾರಿಗಳ ವಿಚಾರಣೆ ಕೋರಿ ಸುಪ್ರೀಂ ಕೋರ್ಟ್ಗೆ ಸುಬ್ರಹ್ಮಣಿಯನ್ ಸ್ವಾಮಿ ಅರ್ಜಿ
ಸದ್ಯ ಅಂತಿಮಗೊಳಿಸಿರುವ ವೆಚ್ಚದಲ್ಲಿ ನೆಲಸಮ ಮತ್ತು ಪುನರ್ ನಿರ್ಮಾಣ ಮಾಡಬೇಕಾದ ಕಟ್ಟಡಗಳನ್ನು ಸೇರಿಸಿಲ್ಲ. ಪ್ರಸ್ತುತ ಸನ್ನಿವೇಶದಲ್ಲಿ ಯೋಜನೆಯು ಹೆಚ್ಚಿನ ಪ್ರಮಾಣದ ನೇರ ಮತ್ತು ಪರೋಕ್ಷ ಉದ್ಯೋಗ ಸೃಷ್ಟಿಸುತ್ತದೆ. ಇದು ಆರ್ಥಿಕ ಪುನರುಜ್ಜೀವನಕ್ಕೆ ಪ್ರಮುಖವಾದದ್ದಾಗಿದೆ ಎಂದು ಪುರಿ ಹೇಳಿದ್ದಾರೆ.
ಯೋಜನೆಯ ನಿರೀಕ್ಷೆಯ 2015ರಲ್ಲಿ ಯುನೆಸ್ಕೋ ವಿಶ್ವ ಪಾರಂಪರಿಕ ತಾಣ ಪಟ್ಟಿಯಿಂದ ದೆಹಲಿಯನ್ನು ಸರ್ಕಾರ ಹಿಂತೆಗೆದುಕೊಂಡಿದೆಯೇ ಎಂದು ಸಂಸದ ರಾಜಮಣಿ ಪಟೇಲ್ ಮತ್ತು ಅಮೀ ಯಾಜ್ನಿಕ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಪುರಿ, ಅಂತಹ ಸಾಧ್ಯತೆ ತಳ್ಳಿ ಹಾಕಿದರು.
ಯುನೆಸ್ಕೋ ವಿಶ್ವ ಪಾರಂಪರಿಕ ತಾಣದಿಂದ ದೆಹಲಿಯನ್ನು ಹೊರಗಿಡುವುದಕ್ಕೂ ಸೆಂಟ್ರಲ್ ವಿಸ್ಟಾ ( ಹೊಸ ಸಂಸತ್ ಕಟ್ಟಡ) ಯೋಜನೆಗೂ ಯಾವುದೇ ಸಂಬಂಧವಿಲ್ಲ. ಯಾಕೆಂದರೆ, 2015ರಲ್ಲಿ ದೆಹಲಿಯನ್ನು ಯುನೆಸ್ಕೋ ಪಟ್ಟಿಯಿಂದ ವಾಪಸ್ ಪಡೆಯಲಾಗಿದ್ದು, ಸೆಂಟ್ರಲ್ ವಿಸ್ಟಾ ಯೋಜನೆಯನ್ನು 2019ರಲ್ಲಿ ರೂಪಿಸಲಾಗಿದೆ ಎಂದು ಸಚಿವ ಪುರಿ ತಿಳಿಸಿದರು.