ETV Bharat / bharat

ಇಪಿಎಫ್, ಗ್ರಾಚ್ಯುಟಿ ಹೆಚ್ಚಳ-ಟೇಕ್ ಹೋಂ ಸ್ಯಾಲರಿ ಇಳಿಕೆ: ಹೊಸ ಕಾರ್ಮಿಕ ನೀತಿಯಲ್ಲಿ ಏನಿದೆ? - ಓವರ್ ಟೈಂ ಕೆಲಸ

ಹೊಸ ನೀತಿಯ ಪ್ರಕಾರ ಉದ್ಯೋಗಿಯ ಮೂಲ ವೇತನವು ಆತನ ಒಟ್ಟು ವೇತನದ ಕನಿಷ್ಠ ಶೇಕಡಾ 50 ರಷ್ಟಾದರೂ ಇರಬೇಕು. ಇದರಿಂದಾಗಿ ಉದ್ಯೋಗಿಗಳ ಇಪಿಎಫ್ ಹಾಗೂ ಗ್ರಾಚ್ಯುಟಿ ವಂತಿಗೆ ಕಡಿತಗಳು ಹೆಚ್ಚಾಗಬಹುದು ಹಾಗೂ ಕೈಗೆ ಸಿಗುವ ಸಂಬಳ (ಟೇಕ್ ಹೋಂ ಸ್ಯಾಲರಿ) ಕಡಿಮೆಯಾಗಬಹುದು.

new-labour-laws-may-change-work-hours-pf-and-salary-structure-details-here

author img

By

Published : Jun 15, 2022, 4:38 PM IST

Updated : Jun 15, 2022, 4:47 PM IST

ಇದೇ ಜುಲೈ 1 ರಿಂದ ಕಾರ್ಮಿಕ ಕಾಯ್ದೆಗಳಲ್ಲಿ ಕೆಲ ಮಹತ್ವದ ಬದಲಾವಣೆಗಳನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸುತ್ತಿದೆ. ಒಂದೊಮ್ಮೆ ಪ್ರಸ್ತಾವಿತ ಈ ಹೊಸ ನಿಯಮಗಳು ಜಾರಿಗೆ ಬಂದಿದ್ದೇ ಆದಲ್ಲಿ, ಉದ್ಯಮ ಹಾಗೂ ಬಹುತೇಕ ಎಲ್ಲ ವಲಯಗಳ ಕಾರ್ಮಿಕ ನಿಯಮಗಳಲ್ಲಿ ಮಹತ್ತರ ಬದಲಾವಣೆಗಳಾಗಲಿವೆ. ಕಾರ್ಮಿಕರು ಕೆಲಸ ಮಾಡುವ ಅವಧಿ, ಕಾರ್ಮಿಕ ಭವಿಷ್ಯ ನಿಧಿಗೆ ಉದ್ಯೋಗಳು ಸಲ್ಲಿಸುವ ವಂತಿಗೆಯ ಪ್ರಮಾಣ ಹಾಗೂ ವೇತನದ ಮಟ್ಟಗಳು ಮುಖ್ಯವಾಗಿ ಬದಲಾವಣೆಯಾಗಲಿವೆ.

ಆದಷ್ಟು ಬೇಗನೆ ಈ ಕಾರ್ಮಿಕ ಸುಧಾರಣಾ ನೀತಿಗಳನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಬಯಸುತ್ತಿದೆ ಎಂದು ಹೇಳಲಾಗಿದ್ದರೂ, ಸರ್ಕಾರದ ಕಡೆಯಿಂದ ಈ ಬಗ್ಗೆ ಯಾವುದೇ ಅಧಿಕೃತ ಅಧಿಸೂಚನೆ ಬಂದಿಲ್ಲ. ವೇತನ, ಸಾಮಾಜಿಕ ಸುರಕ್ಷತೆ (ಪಿಂಚಣಿ, ಗ್ರಾಚ್ಯುಟಿ), ಕಾರ್ಮಿಕ ಕಲ್ಯಾಣ, ಆರೋಗ್ಯ, ಸುರಕ್ಷತೆ ಮತ್ತು ಕೆಲಸದ ಸ್ಥಳದಲ್ಲಿನ ಪರಿಸ್ಥಿತಿಗಳು (ಮಹಿಳೆಯರ ಸ್ಥಿತಿಗತಿ ಸೇರಿ) ಮುಂತಾದ ವಿಷಯಗಳ ಬಗ್ಗೆ ಸುಧಾರಣೆಗಳು ಜಾರಿಯಾಗಲಿವೆ. ಭಾರತದಲ್ಲಿ ಜಾಗತಿಕ ಕಾರ್ಪೊರೇಟ್ ವಲಯದ ಕ್ಷಿಪ್ರ ಬೆಳವಣಿಗೆಯ ಹಿನ್ನೆಲೆಯಲ್ಲಿ ಹೊಸ ಸುಧಾರಣಾ ಕ್ರಮಗಳು ಮಹತ್ವ ಪಡೆದುಕೊಂಡಿವೆ.

ಸಂಸತ್ತಿನಿಂದ ಜಾರಿಗೊಳಿಸಲ್ಪಟ್ಟ 2019ರ ಹೊಸ ವೇತನ ನೀತಿ, 2020ರ ಇಂಡಸ್ಟ್ರಿಯಲ್ ರಿಲೇಶನ್ಸ್​ ಕೋಡ್, 2020 ರ ಸೋಶಿಯಲ್ ಸೆಕ್ಯೂರಿಟಿ ಕೋಡ್, 2020ರ ವೃತ್ತಿಪರ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಸ್ಥಳದ ಸ್ಥಿತಿಗತಿ ನಿಯಮಗಳ ಆಧಾರದಲ್ಲಿ 23 ರಾಜ್ಯಗಳು ತಮ್ಮದೇ ಆದ ರಾಜ್ಯ ಕಾರ್ಮಿಕ ನೀತಿಯನ್ನು ರೂಪಿಸಿವೆ.

1. ಕೆಲಸದ ಅವಧಿ: ಉದ್ಯೋಗಿಗಳ ಕೆಲಸದ ಅವಧಿಯಲ್ಲಿ ಬದಲಾವಣೆಯಾಗಲಿರುವುದು ಪ್ರಾಮುಖ್ಯತೆ ಪಡೆದುಕೊಂಡಿದೆ. ಪ್ರಸ್ತುತ ರಾಷ್ಟ್ರೀಯ ಮಟ್ಟದಲ್ಲಿ ಫ್ಯಾಕ್ಟರಿ ಹಾಗೂ ಕೆಲಸದ ಸ್ಥಳಗಳ ಕುರಿತಂತೆ ಉದ್ಯೋಗಿಗಳ ಕೆಲಸದ ಅವಧಿಯನ್ನು ಫ್ಯಾಕ್ಟರಿಗಳ ಕಾಯ್ದೆ, 1948 ರ ಅಡಿಯಲ್ಲಿ ಹಾಗೂ ರಾಜ್ಯ ಮಟ್ಟದಲ್ಲಿ ಆಫೀಸು ಹಾಗೂ ಇತರ ಉದ್ಯೋಗಿಗಳ ಕೆಲಸದ ಅವಧಿಯನ್ನು ಆಯಾ ರಾಜ್ಯಗಳ ಅಂಗಡಿ ಹಾಗೂ ವ್ಯಾಪಾರಗಳ ಕಾಯ್ದೆಯನುಸಾರ ನಿರ್ಧರಿಸಲಾಗುತ್ತದೆ. ಹೊಸ ಕಾರ್ಮಿಕ ನೀತಿಗಳನ್ವಯ ದಿನಕ್ಕೆ 12 ತಾಸು ಹಾಗೂ ವಾರಕ್ಕೆ 48 ತಾಸುಗಳಿಗೆ ಸೀಮಿತಗೊಳಿಸಲಾಗಿದೆ. ಇದರಿಂದ ಕಂಪನಿಗಳು ವಾರಕ್ಕೆ 4 ದಿನ ಕೆಲಸದ ವಾರವನ್ನು ಜಾರಿಗೊಳಿಸಬಹುದು. ಇನ್ನು ಓವರ್ ಟೈಂ ಅನ್ನು 50 ತಾಸುಗಳಿಂದ 125 ತಾಸುಗಳಿಗೆ ಏರಿಸಲಾಗಿದೆ.

2. ವೇತನ ಮಟ್ಟ: ಹೊಸ ನೀತಿಯ ಪ್ರಕಾರ ಉದ್ಯೋಗಿಯ ಮೂಲ ವೇತನವು ಆತನ ಒಟ್ಟು ವೇತನದ ಕನಿಷ್ಠ ಶೇಕಡಾ 50 ರಷ್ಟಾದರೂ ಇರಬೇಕು. ಇದರಿಂದಾಗಿ ಉದ್ಯೋಗಿಗಳ ಇಪಿಎಫ್ ಹಾಗೂ ಗ್ರಾಚ್ಯುಟಿ ವಂತಿಗೆ ಕಡಿತಗಳು ಹೆಚ್ಚಾಗಬಹುದು ಹಾಗೂ ಕೈಗೆ ಸಿಗುವ ಸಂಬಳ (ಟೇಕ್ ಹೋಂ ಸ್ಯಾಲರಿ) ಕಡಿಮೆಯಾಗಬಹುದು. ಆದರೆ ನಿವೃತ್ತಿಯ ನಂತರ ಸಿಗುವ ವೇತನಗಳು ಹೆಚ್ಚಾಗುತ್ತವೆ.

3. ರಜೆಗಳು: ಹೊಸ ನೀತಿಯಡಿ ರಜೆ ನೀತಿಯನ್ನು ಸಹ ಪರಿಷ್ಕರಿಸಲಾಗಿದೆ. ಒಟ್ಟಾರೆ ಒಂದು ವರ್ಷದಲ್ಲಿ ಸಿಗುವ ರಜೆಗಳ ಪ್ರಮಾಣ ಮೊದಲಿನಂತೆಯೇ ಮುಂದುವರಿಯಲಿದೆ. ಆದರೆ ಈ ಹಿಂದೆ 45 ದಿನಗಳ ಕೆಲಸಕ್ಕೆ ಸಿಗುತ್ತಿದ್ದ ಒಂದು ದಿನದ ರಜೆ ಇನ್ನು ಮುಂದೆ 20 ದಿನಗಳ ಕೆಲಸಕ್ಕೆ ಸಿಗಲಿದೆ. ಹೊಸ ಉದ್ಯೋಗಿಗಳು ಈ ಮೊದಲಿನ 240 ದಿನಗಳ ಕೆಲಸದ ಅವಧಿಯ ಬದಲಾಗಿ 180 ದಿನಗಳ ಕೆಲಸದ ಅವಧಿಯ ನಂತರ ರಜೆಗಳನ್ನು ಗಳಿಕೆ ಮಾಡಬಹುದು.

Last Updated : Jun 15, 2022, 4:47 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.