ETV Bharat / bharat

ಡೋಕ್ಲಾಮ್ ಪ್ರದೇಶದಲ್ಲಿ ಮತ್ತೆ ಚೀನಾ ಕಿರಿಕಿರಿ; ಮತ್ತೊಂದು ಹಳ್ಳಿ ನಿರ್ಮಿಸಿ ತಕರಾರು

author img

By

Published : Jul 20, 2022, 7:51 AM IST

ಭಾರತದ ಜೊತೆ ಗಡಿ ಸಂಘರ್ಷ ಹೊಂದಿರುವ ಚೀನಾ ಡೋಕ್ಲಾಂ ಪ್ರದೇಶದಲ್ಲಿ ಹಳ್ಳಿಯನ್ನು ನಿರ್ಮಾಣ ಮಾಡಿದೆ. ಇದು ಭದ್ರತಾ ಆತಂಕ ಉಂಟು ಮಾಡಿದೆ.

ಡೋಕ್ಲಾಮ್ ಪ್ರದೇಶದಲ್ಲಿ ಭಾರತಕ್ಕೆ ಚೀನಾ ಸೆಡ್ಡು

ನವದೆಹಲಿ: ಭಾರತದೊಂದಿಗೆ ಮತ್ತೆ ಗಡಿ ತಂಟೆ ಆರಂಭಿಸಿರುವ ನೆರೆಯ ಚೀನಾ ಉಭಯ ದೇಶಗಳ ವಿವಾದಿತ ಡೋಕ್ಲಾಂ ಪ್ರದೇಶದಲ್ಲಿ ಮತ್ತೊಂದು ಹಳ್ಳಿಯನ್ನು ನಿರ್ಮಾಣ ಮಾಡಿದೆ. ಈ ಬಗ್ಗೆ ಉಪಗ್ರಹ ಚಿತ್ರಗಳು ಲಭ್ಯವಾಗಿವೆ. ಚೀನಾದ ಈ ಹಳ್ಳಿಯು ಸಂಘರ್ಷಕ್ಕೆ ಕಾರಣವಾಗಿರುವ ಡೋಕ್ಲಾಂ ಪ್ರದೇಶದಿಂದ ಸುಮಾರು 9 ಕಿಮೀ ದೂರದಲ್ಲಿದೆ.

ಈ ಹಿಂದೆ ಭೂತಾನ್​ ತನಗೆ ಸೇರಿದ್ದು ಎಂದು ಹೇಳಿಕೊಂಡ ಪ್ರದೇಶದಲ್ಲಿ ರಸ್ತೆಯನ್ನು ವಿಸ್ತರಿಸಲು ಚೀನಾ ಪ್ರಯತ್ನಿಸಿದ ನಂತರ ಡೋಕ್ಲಾಮ್ ಪ್ರದೇಶದಲ್ಲಿ ಭಾರತದ ಸೈನಿಕರ ಮಧ್ಯೆ ಕಾದಾಟ ನಡೆಸಲಾಗಿತ್ತು. ಇದೀಗ ಅದೇ ಪ್ರದೇಶದ ಆಯಕಟ್ಟಿನ ಜಾಗದಲ್ಲಿ ಡ್ರ್ಯಾಗನ್​ ರಾಷ್ಟ್ರ ಮೂಲಸೌಕರ್ಯಗಳುಳ್ಳ ಹಳ್ಳಿಯನ್ನು ನಿರ್ಮಿಸಿದೆ.

ಕಾಂಗ್ರೆಸ್‌ ಟೀಕೆ: ದೇಶದ ಸಾರ್ವಭೌಮತೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ. ಮೋದಿ ಸರ್ಕಾರ ಯಾಕೆ ಈ ಬಗ್ಗೆ ಮೌನವಾಗಿದೆ? ಎಂದೆಲ್ಲಾ ಕಾಂಗ್ರೆಸ್‌ ಮುಖಂಡ ರಂದೀಪ್ ಸಿಂಗ್ ಸುರ್ಜೇವಾಲ ಅವರು ಚೀನಾ ಆಕ್ರಮಿಸಿಕೊಂಡಿದೆ ಎನ್ನಲಾದ ಉಪಗ್ರಹ ಚಿತ್ರಗಳನ್ನು ಲಗತ್ತಿಸಿ ಟ್ವೀಟ್ ಮೂಲಕ ಟೀಕಿಸಿದ್ದಾರೆ.

  • 2/2
    India’s sovereignty compromised!

    India’s territorial integrity assailed!

    QUESTIONS
    ▪️Why is Modi Govt “mum”?

    ▪️What is the answer to salami slicing of 110 Sq KM territory by China?

    ▪️Does it not directly threaten Siliguri Corridor & our interests?
    https://t.co/SeNgJC1nxi

    — Randeep Singh Surjewala (@rssurjewala) July 19, 2022 " class="align-text-top noRightClick twitterSection" data=" ">

ಈ ಬಗ್ಗೆ ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಗುಪ್ತಚರ ದಳಕ್ಕೆ ಸಹಕರಿಸುವ ಮಕ್ಸಾರ್​ ಎಂಬ ಕಂಪನಿಯು ತನ್ನ ಉಪಗ್ರಹದ ಮೂಲಕ ಚೀನಾದ ಈ ಹಳ್ಳಿಯ ಚಿತ್ರಗಳನ್ನು ಸೆರೆ ಹಿಡಿದಿದೆ. ಇದು ಭೂತಾನ್ ಗಡಿಯಲ್ಲಿ ಚೀನಾ ಅಕ್ರಮವಾಗಿ ವಶಪಡಿಸಿಕೊಂಡ ಜಾಗದಲ್ಲಿದೆ. ಭಾರತದ ಗಡಿಗೂ ಇದು ಸಮೀಪದಲ್ಲಿದೆ ಎಂದು ಗುರುತಿಸಲಾಗಿದೆ.

ಈ ಹಳ್ಳಿಯಿಂದ ಡೋಕ್ಲಾಮ್ ಪ್ರದೇಶವನ್ನು ಸಲೀಸಾಗಿ ಸೇರಬಹುದು. ಅಮೋ ಚು ನದಿ ಕಣಿವೆಯಲ್ಲಿ ನಿರ್ಮಿಸಲಾದ ಎರಡನೇ ಹಳ್ಳಿ ಇದಾಗಿದೆ. ಇದಲ್ಲದೇ, ಮೂರನೇ ಹಳ್ಳಿಯನ್ನೂ ನದಿ ದಂಡೆಯಲ್ಲಿ ನಿರ್ಮಿಸಲು ಚೀನಾ ಹುನ್ನಾರ ನಡೆಸಿದೆ ಎಂದು ವರದಿಯಾಗಿದೆ. ಚೀನಾದ ಈ ನಡೆಗೆ ಭಾರತದ ಸೇನೆ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇದನ್ನೂ ಓದಿ: ಟ್ರಕ್​ ಹರಿಸಿ ಡಿಎಸ್​​ಪಿ ಹತ್ಯೆ ಪ್ರಕರಣ: ಒಬ್ಬ ಆರೋಪಿ ಮೇಲೆ ಗುಂಡು ಹಾರಿಸಿದ ಪೊಲೀಸರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.