ETV Bharat / bharat

ದತ್ತಾಂಶ ಸಂರಕ್ಷಣಾ ಮಸೂದೆ ಮುಂಗಾರು ಅಧಿವೇಶನದಲ್ಲಿ ಮಂಡನೆ: ಸುಪ್ರೀಂಕೋರ್ಟ್​ಗೆ ಕೇಂದ್ರದ ಮಾಹಿತಿ - ದತ್ತಾಂಶ ಸಂರಕ್ಷಣಾ ಮಸೂದೆ ಸಿದ್ಧವಾಗಿದೆ

ಹೊಸ ದತ್ತಾಂಶ ಸಂರಕ್ಷಣಾ ಮಸೂದೆಯನ್ನು ಮುಂಬರುವ ಮುಂಗಾರು ಅಧಿವೇಶನದಲ್ಲಿ ಸಂಸತ್ತಿನಲ್ಲಿ ಮಂಡಿಸಲಾಗುವುದು ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್​ಗೆ ತಿಳಿಸಿದೆ. ದತ್ತಾಂಶ ಸಂರಕ್ಷಣಾ ಮಸೂದೆ ಸಿದ್ಧವಾಗಿದೆ ಎಂದು ಸರ್ಕಾರ ಕೋರ್ಟ್​ಗೆ ಈ ಮಾಹಿತಿ ನೀಡಿದೆ.

New data protection bill in Monsoon session of Parliament, govt tells SC Constitution Bench

author img

By

Published : Apr 11, 2023, 2:37 PM IST

ನವದೆಹಲಿ: ಹೊಸ ಡೇಟಾ ಪ್ರೊಟೆಕ್ಷನ್ ಬಿಲ್ (ದತ್ತಾಂಶ ಸಂರಕ್ಷಣಾ ಮಸೂದೆ) ಸಿದ್ಧವಾಗಿದ್ದು, ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಅದನ್ನು ಮಂಡಿಸಲಾಗುವುದು ಎಂದು ಕೇಂದ್ರ ಸರ್ಕಾರ ಮಂಗಳವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ನ್ಯಾಯಮೂರ್ತಿ ಕೆ.ಎಂ. ಜೋಸೆಫ್ ನೇತೃತ್ವದ ಸಂವಿಧಾನ ಪೀಠಕ್ಕೆ ಅಟಾರ್ನಿ ಜನರಲ್ ಆರ್. ವೆಂಕಟ್ರಮಣಿ ಈ ಮಾಹಿತಿ ನೀಡಿದ್ದಾರೆ. ನ್ಯಾಯಮೂರ್ತಿಗಳಾದ ಅಜಯ್ ರಸ್ತೋಗಿ, ಅನಿರುದ್ಧ ಬೋಸ್, ಹೃಷಿಕೇಶ್ ರಾಯ್ ಮತ್ತು ಸಿಟಿ ರವಿಕುಮಾರ್ ಅವರನ್ನು ಕೂಡ ಒಳಗೊಂಡ ಪೀಠವು ಸರ್ಕಾರ ನೀಡಿದ ಮಾಹಿತಿಯನ್ನು ಗಮನಿಸಿತು. ನ್ಯಾಯಮೂರ್ತಿ ಜೋಸೆಫ್ ಅವರು ಜೂನ್ 16 ರಂದು ನಿವೃತ್ತರಾಗಲಿದ್ದು, ಪ್ರಕರಣದ ವಿಚಾರಣೆಗಾಗಿ ಹೊಸ ಪೀಠ ರಚಿಸಬೇಕಾಗಿದೆ. ಹೀಗಾಗಿ ವಿಷಯವನ್ನು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರ ಮುಂದೆ ಇರಿಸುವಂತೆ ಪೀಠ ಸೂಚಿಸಿತು.

ಆಗಸ್ಟ್ 2023 ರ ಮೊದಲ ವಾರದಲ್ಲಿ ಪ್ರಕರಣದ ವಿಚಾರಣೆಯನ್ನು ನಿಗದಿ ಮಾಡಲಾಗಿದೆ. ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಶ್ಯಾಮ್ ದಿವಾನ್, ನ್ಯಾಯಾಲಯವು ನ್ಯಾಯಾಲಯದ ವಿಚಾರಣೆಗಳನ್ನು ಶಾಸಕಾಂಗ ಪ್ರಕ್ರಿಯೆಗೆ ಲಿಂಕ್ ಮಾಡಬಾರದು ಎಂದು ಮನವಿ ಮಾಡಿದರು. ಶಾಸಕಾಂಗ ಪ್ರಕ್ರಿಯೆಯು ಸಂಕೀರ್ಣವಾಗಿದೆ ಮತ್ತು ಅದನ್ನು ವಿಷಯವನ್ನು ಮತ್ತೆ ಕೆಲವು ಸಮಿತಿಗಳಿಗೆ ನೀಡಬಹುದು ಎಂದು ಅವರು ಹೇಳಿದರು.

ವಾಟ್ಸ್​ಆ್ಯಪ್ ಮತ್ತು ಅದರ ಒಡೆತನ ಹೊಂದಿರುವ ಕಂಪನಿ ಫೇಸ್​ಬುಕ್​, ಬಳಕೆದಾರರು ಹಂಚಿಕೊಂಡ ಕರೆಗಳು, ಚಿತ್ರಗಳು, ವೀಡಿಯೊಗಳು ಮತ್ತು ದಾಖಲೆಗಳನ್ನು ಎರಡೂ ಕಂಪನಿಗಳ ಮಧ್ಯೆ ಪರಸ್ಪರ ಹಂಚಿಕೊಳ್ಳುವ ಒಪ್ಪಂದ ಮಾಡಿಕೊಂಡಿರುವುದು ತಮ್ಮ ಖಾಸಗಿತನ ಹಾಗೂ ಗೌಪ್ಯತೆಗೆ ಭಂಗ ಉಂಟು ಮಾಡುತ್ತದೆ ಎಂದು ಆರೋಪಿಸಿ ಕರ್ಮಣ್ಯಾ ಸಿಂಗ್ ಸರೀನ್ ಮತ್ತು ಶ್ರೇಯಾ ಸೇಠಿ ಎಂಬ ಇಬ್ಬರು ವಿದ್ಯಾರ್ಥಿಗಳು ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯ ವಿಚಾರಣೆಯ ಸಮಯದಲ್ಲಿ ಮೇಲಿನ ಬೆಳವಣಿಗೆಗಳು ನಡೆದಿವೆ.

ದತ್ತಾಂಶ ಸಂರಕ್ಷಣಾ ಮಸೂದೆಯನ್ನು ಇತ್ತೀಚೆಗೆ ಮುಕ್ತಾಯಗೊಂಡ ಬಜೆಟ್ ಅಧಿವೇಶನದ ಎರಡನೇ ಹಂತದಲ್ಲಿ ಮಂಡಿಸಲಾಗುವುದು ಎಂದು ಜನವರಿ 31 ರಂದು ಸರ್ಕಾರವು ನ್ಯಾಯಾಲಯಕ್ಕೆ ತಿಳಿಸಿತ್ತು. ಸರ್ಕಾರವೇ ಕಾನೂನು ತರಲು ಮುಂದಾಗಿರುವಾಗ ಈ ಪ್ರಕಣದಲ್ಲಿ ನ್ಯಾಯಾಲಯದ ವಿಚಾರಣೆ ಒಂದು ರೀತಿಯಲ್ಲಿ ಯಾಂತ್ರಿಕ ವಿಚಾರಣೆಯಂತಾಗುವುದಿಲ್ಲವೇ ಎಂದು ಪೀಠ ಈ ಸಂದರ್ಭದಲ್ಲಿ ಪ್ರಶ್ನಿಸಿತು. ಸಂವಿಧಾನ ಪೀಠದ ಅಭಿಪ್ರಾಯಕ್ಕೆ ಸಮ್ಮತಿ ಸೂಚಿಸಿದ ಮೆಹ್ತಾ, ಶಾಸನಬದ್ಧ ಚೌಕಟ್ಟಿನ ಅನುಪಸ್ಥಿತಿಯಲ್ಲಿ ಸಮಸ್ಯೆಯನ್ನು ಆಲಿಸುವ ಸಂಪೂರ್ಣ ಪ್ರಕ್ರಿಯೆಯು ಯಾಂತ್ರಿಕವಾಗಬಹುದು ಎಂದು ಹೇಳಿದರು.

ಮಸೂದೆ ಮಂಡನೆಯು ಆಡಳಿತಾತ್ಮಕ ಅನುಮೋದನೆಗೆ ಒಳಪಟ್ಟಿರುತ್ತದೆ ಮತ್ತು ಸಂಸತ್ತಿನ ಅಧಿವೇಶನದ ದ್ವಿತೀಯಾರ್ಧದಲ್ಲಿ ಮಂಡನೆ ಮಾಡಲಾಗುವುದು ಎಂದು ಮೆಹ್ತಾ ಹೇಳಿದ್ದಾರೆ. ಪ್ರಕರಣದಲ್ಲಿ ವಾಟ್ಸ್​ ಆ್ಯಪ್​ ಅನ್ನು ಪ್ರತಿನಿಧಿಸುತ್ತಿರುವ ವಕೀಲ ಕಪಿಲ್ ಸಿಬಲ್, ಸುಪ್ರೀಂಕೋರ್ಟ್ ಮಸೂದೆಯ ಮಂಡನೆಗಾಗಿ ಕಾಯಬೇಕು ಎಂದು ಮನವಿ ಮಾಡಿದರು. ಆದಾಗ್ಯೂ, ಮಸೂದೆ ಮಂಡನೆಯ ಏಕೈಕ ಕಾರಣದಿಂದ ಪ್ರಕರಣದ ವಿಚಾರಣೆಯನ್ನು ಮುಂದೂಡಬಾರದು ಎಂದು ದಿವಾನ್ ಹೇಳಿದರು.

ಇದನ್ನೂ ಓದಿ : ರೋಹಿಣಿ ಸಿಂಧೂರಿ ವಿರುದ್ಧ ಮಾನಹಾನಿಕರ ಹೇಳಿಕೆ ನೀಡದಂತೆ ನ್ಯಾಯಾಲಯ ನೀಡಿದ್ದ ಆದೇಶಕ್ಕೆ ಹೈಕೋರ್ಟ್ ತಡೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.