ETV Bharat / bharat

ಕೋವ್ಯಾರ್​ಸ್ಕ್ಯಾನ್.. ಕೊರೊನಾ ರೂಪಾಂತರಿ ತ್ವರಿತ ಪತ್ತೆಗೆ ಹೊಸ ಟೆಸ್ಟ್​ - ಕ್ಷಿಪ್ರ ಕೋವಿಡ್19 ಟೆಸ್ಟ್

ಕ್ಲಿನಿಕಲ್ ಕೆಮಿಸ್ಟ್ರಿ ಎಂಬ ಜರ್ನಲ್​ನಲ್ಲಿ ಸಂಶೋಧನಾ ಪ್ರಬಂಧ ಪ್ರಕಟವಾಗಿದ್ದು, ಕ್ಷಿಪ್ರ ಟೆಸ್ಟ್​ ವಿಧಾನವು ಇತರ ಎಲ್ಲ ಟೆಸ್ಟ್​ ವಿಧಾನಗಳಂತೆ ನಿಖರವಾಗಿದ್ದು, ಪ್ರಸ್ತುತ ಕಾಣಿಸಿಕೊಳ್ಳುತ್ತಿರುವ ಎಲ್ಲ ಬಗೆಯ ಕೋವಿಡ್​-19 ವೈರಸ್​ಗಳನ್ನು ಪತ್ತೆ ಮಾಡಬಲ್ಲದು ಎಂದು ತಿಳಿಸಲಾಗಿದೆ.

New COVID-19 test can identify all variants in hours

author img

By

Published : Jul 4, 2022, 5:27 PM IST

Updated : Jul 4, 2022, 5:32 PM IST

ಹೂಸ್ಟನ್: ಅದು ಪ್ರಸ್ತುತ ಕಂಡುಬರುತ್ತಿರುವ ಕೋವಿಡ್​-19 ಸೋಂಕಿನ ಎಲ್ಲ ರೂಪಾಂತರಗಳನ್ನು ಕೆಲವೇ ಗಂಟೆಗಳಲ್ಲಿ ನಿಖರವಾಗಿ ಪತ್ತೆ ಮಾಡಬಲ್ಲ ಕ್ಷಿಪ್ರ ಕೋವಿಡ್-19 ಟೆಸ್ಟ್​ ವಿಧಾನವೊಂದನ್ನು ಅಮೆರಿಕದ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ. ಕೋವ್ಯಾರ್​ಸ್ಕ್ಯಾನ್ (CoVarScan) ಎಂದು ಹೆಸರಿಸಲಾಗಿರುವ ಈ ಟೆಸ್ಟ್​, ಕೋವಿಡ್​-19 ವೈರಸ್ ಮೇಲೆ ಕಾಣಸಿಗುವ ಕೋವಿಡ್​ಗೆ ಕಾರಣವಾಗುವ ಎಂಟು ಹಾಟ್​ಸ್ಪಾಟ್​ ಸಿಗ್ನೇಚರ್​ಗಳನ್ನು ಪತ್ತೆ ಮಾಡಬಲ್ಲದು ಎಂದು ಅಮೆರಿಕದ ಯುನಿವರ್ಸಿಟಿ ಆಫ್ ಟೆಕ್ಸಾಸ್ ಸೌತ್ ವೆಸ್ಟರ್ನ್ ಮೆಡಿಕಲ್ ಸೆಂಟರ್​​ನ ಸಂಶೋಧಕರು ತಿಳಿಸಿದ್ದಾರೆ.

ಕ್ಲಿನಿಕಲ್ ಕೆಮಿಸ್ಟ್ರಿ ಎಂಬ ಜರ್ನಲ್​ನಲ್ಲಿ ಸಂಶೋಧನಾ ಪ್ರಬಂಧ ಪ್ರಕಟವಾಗಿದ್ದು, ಕ್ಷಿಪ್ರ ಟೆಸ್ಟ್​ ವಿಧಾನವು ಇತರ ಎಲ್ಲ ಟೆಸ್ಟ್​ ವಿಧಾನಗಳಂತೆ ನಿಖರವಾಗಿದ್ದು, ಪ್ರಸ್ತುತ ಕಾಣಿಸಿಕೊಳ್ಳುತ್ತಿರುವ ಎಲ್ಲ ಬಗೆಯ ಕೋವಿಡ್​-19 ವೈರಸ್​ಗಳನ್ನು ಪತ್ತೆ ಮಾಡಬಲ್ಲದು ಎಂದು ತಿಳಿಸಲಾಗಿದೆ.

"ಸದ್ಯ ಸಮುದಾಯದಲ್ಲಿ ಎಷ್ಟು ಕೋವಿಡ್​ ವೇರಿಯಂಟ್​ಗಳು ಇವೆ ಎಂಬುದನ್ನು ಮತ್ತು ಹೊಸ ವೇರಿಯಂಟ್​ ಏನಾದರೂ ಬಂದಿದೆಯಾ ಎಂಬುದನ್ನು ಅತಿ ಶೀಘ್ರವಾಗಿ ಈ ಟೆಸ್ಟ್​ ಪತ್ತೆ ಮಾಡುತ್ತದೆ." ಎಂದು ಯುನಿವರ್ಸಿಟಿ ಆಫ್ ಟೆಕ್ಸಾಸ್​ನ ಸಹಾಯಕ ಪ್ರಾಧ್ಯಾಪಕ ಜೆಫ್ರಿ ರೊಸೆಲ್ಲೆ ಹೇಳಿದ್ದಾರೆ.

ಕ್ಷಿಪ್ರ ಕೋವಿಡ್-19 ಟೆಸ್ಟ್ ವಿಧಾನವು ಕೆಲ ರೂಪಾಂತರಗಳನ್ನು ನಿಖರವಾಗಿ ಪತ್ತೆಹಚ್ಚಲಾರದು ಅಥವಾ ಭವಿಷ್ಯದಲ್ಲಿ ಕಾಣಿಸಿಕೊಳ್ಳಬಹುದಾದ ತಳಿಗಳನ್ನು ಕಂಡುಹಿಡಿಯದೇ ಇರಬಹುದು ಎಂದು ಅನೇಕ ಸಂಶೋಧಕರು ಸಂಶಯ ವ್ಯಕ್ತಪಡಿಸಿದ್ದಾರೆ. ರೋಗಿಯು ಕೋವಿಡ್​-19ನ ಯಾವ ರೂಪಾಂತರ ಹೊಂದಿದ್ದಾನೆ ಎಂಬುದನ್ನು ನಿರ್ಧರಿಸಲು, ವಿಜ್ಞಾನಿಗಳು ಸಾಮಾನ್ಯವಾಗಿ ಸಂಪೂರ್ಣ ಜಿನೋಮ್ ಅನುಕ್ರಮವನ್ನು ಬಳಸಬೇಕು. ಜಿನೋಮ್ ಸಿಕ್ವೆನ್ಸಿಂಗ್ ಸಮಯ ತೆಗೆದುಕೊಳ್ಳುವ ಮತ್ತು ದುಬಾರಿ ಪರೀಕ್ಷಣೆಯಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಇದನ್ನು ಓದಿ:WhatsApp: ಮೆಸೇಜ್ ಡಿಲೀಟ್​ ಮಾಡುವ ಸಮಯಾವಧಿ ವಿಸ್ತರಣೆ

Last Updated : Jul 4, 2022, 5:32 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.