ETV Bharat / bharat

ಚೀನಾದ ಹೊಸ ಭೂಪಟಕ್ಕೆ ಖಂಡನೆ: ತನ್ನನ್ನು ವಿಶ್ವಸಂಸ್ಥೆಗೆ ಸೇರಿಸಲು ಒತ್ತಾಯಿಸಿದ ತೈವಾನ್‌ - ತೈವಾನ್‌ ವಿದೇಶಾಂಗ ಸಚಿವ ಜೌಸಿಹೆ ಜೋಸೆಫ್ ವು

ತೈವಾನ್​ ಭೂಪ್ರದೇಶವನ್ನು ತನ್ನದು ಎಂಬಂತೆ ಬಿಂಬಿಸುವ ಚೀನಾದ ''ಸ್ಟ್ಯಾಂಡರ್ಡ್​ ಮ್ಯಾಪ್'' ಅನ್ನು ವಿದೇಶಾಂಗ ಸಚಿವ ಜೌಸಿಹೆ ಜೋಸೆಫ್ ವು ಖಂಡಿಸಿದ್ದಾರೆ. 23 ಮಿಲಿಯನ್​ ಜನಸಂಖ್ಯೆಯ ತೈವಾನ್ ಪ್ರಜಾಪ್ರಭುತ್ವ ನೆಲೆ ಹಾಗೂ ಚೀನಾ ಒಡ್ಡಿದ ಸವಾಲುಗಳನ್ನು ಎದುರಿಸುತ್ತೇವೆ ಎಂದು ತಿಳಿಸಿದ್ದಾರೆ.

Taiwanese Foreign Minister Jausiheh Joseph Wu
ತೈವಾನ್‌ ವಿದೇಶಾಂಗ ಸಚಿವ ಜೌಸಿಹೆ ಜೋಸೆಫ್ ವು
author img

By ETV Bharat Karnataka Team

Published : Aug 30, 2023, 9:22 PM IST

ನವದೆಹಲಿ: ಚೀನಾ ಎರಡು ದಿನಗಳ ಹಿಂದೆ ತನ್ನ ''ಸ್ಟ್ಯಾಂಡರ್ಡ್​ ಮ್ಯಾಪ್'' ಬಿಡುಗಡೆಗೊಳಿಸಿದ್ದು, ಇದರಲ್ಲಿ ತೈವಾನ್​ ಭೂಪ್ರದೇಶವನ್ನೂ ತನ್ನದೇ ಭಾಗ ಎಂದು ಚಿತ್ರಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ತೈವಾನ್​, ಏಷ್ಯಾದ ದ್ವೀಪ ರಾಷ್ಟ್ರವನ್ನು ವಿಶ್ವಸಂಸ್ಥೆ ವ್ಯವಸ್ಥೆ (UN system)ಅಡಿ ಸೇರಿಸಬೇಕೆಂದು ಒತ್ತಾಯಿಸಿದೆ. ಚೀನಾದ ಹೊಸ ನಕ್ಷೆ ಬಗ್ಗೆ ನೇರವಾಗಿ ಉಲ್ಲೇಖಿಸದೆ ಬುಧವಾರ ತೈವಾನ್‌ ವಿದೇಶಾಂಗ ಸಚಿವ ಜೌಸಿಹೆ ಜೋಸೆಫ್ ವು ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ನಿರ್ಣಯ 2758 ಅನ್ನು ಚೀನಾ ವಿರೂಪಗೊಳಿಸಿದ್ದರಿಂದ ತೈವಾನ್​ ಅನ್ನು ವಿಶ್ವಸಂಸ್ಥೆಯಿಂದ ಹೊರಗಿಡುವುದನ್ನು ಮುಂದುವರೆಸಲಾಗಿದೆ ಎಂದು ತಿಳಿಸಿದರು.

1971ರ ಅಕ್ಟೋಬರ್ 25ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ''ವಿಶ್ವಸಂಸ್ಥೆ ನಿರ್ಣಯ 2758 (XXVI)'' ಅನ್ನು ಅಂಗೀಕರಿಸಿದೆ. ಇದು ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ (People's Republic of China - PRC) ಮಾತ್ರ ಚೀನಾದ ಏಕೈಕ ಕಾನೂನುಬದ್ಧ ಸರ್ಕಾರ ಎಂದು ಹೇಳುತ್ತದೆ. ಈ ನಿರ್ಣಯವು ಆರ್​​ಓಸಿ (ರಿಪಬ್ಲಿಕ್ ಆಫ್ ಚೀನಾ ಅಥವಾ ತೈವಾನ್) ಅನ್ನು ಪಿಆರ್​ಸಿ ಎಂದು ಬದಲಾಯಿಸಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯತ್ವ ನೀಡಿದೆ. ಈ ನಿರ್ಣಯವು ತೈವಾನ್ ಪಿಆರ್​ಸಿಯ ಒಂದು ಭಾಗ ಎಂದು ಹೇಳುವುದಿಲ್ಲ ಅಥವಾ ವಿಶ್ವಸಂಸ್ಥೆ ಮತ್ತು ಅದರ ವಿಶೇಷ ಏಜೆನ್ಸಿಗಳಲ್ಲಿ ತೈವಾನ್ ಜನರನ್ನು ಪ್ರತಿನಿಧಿಸುವ ಹಕ್ಕನ್ನೂ ನೀಡುವುದಿಲ್ಲ ಎಂದು ದೆಹಲಿಯಲ್ಲಿರುವ ತೈವಾನ್ ಪ್ರತಿನಿಧಿ ಕಚೇರಿಯಲ್ಲಿ 'ಈಟಿವಿ ಭಾರತ್​'ಗೆ ವಿದೇಶಾಂಗ ಸಚಿವ ಜೌಸಿಹೆ ಜೋಸೆಫ್ ವು ಪ್ರತಿಕ್ರಿಯಿಸಿದರು.

ವಾಸ್ತವವಾಗಿ ಈ ನಿರ್ಣಯವು ಸದಸ್ಯ ರಾಷ್ಟ್ರ ಚೀನಾವನ್ನು ಯಾರು ಪ್ರತಿನಿಧಿಸುತ್ತದೆ ಎಂಬುದನ್ನು ಮಾತ್ರ ನಿರ್ಧರಿಸುತ್ತದೆ. ಇದನ್ನು 1971ರಲ್ಲಿ ಮತದಾನದ ನಂತರ ಅಂತರರಾಷ್ಟ್ರೀಯ ಸಮುದಾಯ ಮತ್ತು ಚೀನಾ ಸ್ವತಃ ಗುರುತಿಸಿದೆ. 2758ರ ನಿರ್ಣಯವು ವಿಶ್ವಸಂಸ್ಥೆಯ ಮೂಲಭೂತ ತತ್ವಗಳಿಗೆ ವ್ಯತಿರಿಕ್ತವಾಗಿದ್ದು, ಅದನ್ನು ಸರಿಪಡಿಸಬೇಕೆಂದೂ ಅವರು ಒತ್ತಾಯಿಸಿದರು.

23 ಮಿಲಿಯನ್​ ಜನರನ್ನು ಹೊಂದಿರುವ ತೈವಾನ್ ಪ್ರಜಾಪ್ರಭುತ್ವ ನೆಲೆಯಾಗಿದೆ. ಚೀನಾ ಒಡ್ಡಿದ ಅಗಾಧ ಸವಾಲುಗಳನ್ನು ಎದುರಿಸುವಲ್ಲಿ ನಾನು ಹೆಮ್ಮೆಯಿಂದ ತೈವಾನ್​ಅನ್ನು ಪ್ರತಿನಿಧಿಸುತ್ತೇನೆ. ಜಾಗತಿಕ ಸಹಕಾರದ ಅಗತ್ಯವಿರುವ ವಿಷಯಗಳ ಚರ್ಚೆಗಳಿಂದ ಹೊರಗಿಡುವ ಬದಲು ತೈವಾನ್‌ಗೆ ವಿಶ್ವಸಂಸ್ಥೆಯ ವ್ಯವಸ್ಥೆಯಲ್ಲಿ ಭಾಗವಹಿಸಲು ಅವಕಾಶ ನೀಡಬೇಕು ಎಂದು ಹೇಳಿದರು.

ಆಗಸ್ಟ್ 28ರಂದು ಚೀನಾ ಹೊಸ ''ಸ್ಟ್ಯಾಂಡರ್ಡ್ ಮ್ಯಾಪ್''ನಲ್ಲಿ ಬಿಡುಗಡೆ ಮಾಡಿದೆ. ಇದರಲ್ಲಿ ಭಾರತದ ಅರುಣಾಚಲ ಪ್ರದೇಶ ಮತ್ತು ಅಕ್ಸಯ್ ಚಿನ್ ಜೊತೆಗೆ ತೈವಾನ್​ ಅನ್ನು ತನ್ನ ಭೂಪ್ರದೇಶದ ಭಾಗಗಳಾಗಿ ತೋರಿಸಿದೆ. ಇದನ್ನು ಭಾರತ ಸಹ ಬಲವಾಗಿ ಖಂಡಿಸಿದೆ. ಈ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಮಂಗಳವಾರ ಮಾತನಾಡಿ, ಭಾರತದ ಭೂಪ್ರದೇಶದ ಮೇಲೆ ಹಕ್ಕು ಸಾಧಿಸುವ ಚೀನಾದ "ಸ್ಟ್ಯಾಂಡರ್ಡ್ ಮ್ಯಾಪ್" ಬಗ್ಗೆ ಭಾರತವು ರಾಜತಾಂತ್ರಿಕ ಮಾರ್ಗಗಳ ಮೂಲಕ ಬಲವಾದ ಪ್ರತಿಭಟನೆಯನ್ನು ದಾಖಲಿಸಿದೆ ಎಂದು ತಿಳಿಸಿದ್ದರು. ಅಲ್ಲದೇ, ನಾವು ಚೀನಾ ನಡೆಯನ್ನು ತಿರಸ್ಕರಿಸುತ್ತೇವೆ. ಏಕೆಂದರೆ, ಇದಕ್ಕೆ ಯಾವುದೇ ಆಧಾರವಿಲ್ಲ. ಚೀನಾದ ಕಡೆಯಿಂದ ಇಂತಹ ಕ್ರಮಗಳು ಗಡಿ ಸಮಸ್ಯೆಯ ಪರಿಹಾರವನ್ನು ಸಂಕೀರ್ಣಗೊಳಿಸುತ್ತವೆ ಎಂದು ಹೇಳಿದ್ದರು.

ಇದನ್ನೂ ಓದಿ: ಅರುಣಾಚಲ ಪ್ರದೇಶ, ಅಕ್ಸಾಯ್ ಚಿನ್​ ಪ್ರದೇಶ ತನ್ನದೆಂದ ಚೀನಾ: ಬಿಡುಗಡೆಯಾದ ಹೊಸ 'ಸ್ಟ್ಯಾಂಡರ್ಡ್ ಮ್ಯಾಪ್'ನಲ್ಲಿ ಮಾಹಿತಿ ಬಹಿರಂಗ...

ETV Bharat Logo

Copyright © 2025 Ushodaya Enterprises Pvt. Ltd., All Rights Reserved.