ನಾಗೌರ್ (ರಾಜಸ್ಥಾನ): ನವಜಾತ ಶಿಶುವಿಗೆ ರಾಜಸ್ಥಾನದ ಹಳ್ಳಿಯೊಂದರಲ್ಲಿ ವಿಶೇಷ ಸ್ವಾಗತ ನೀಡಲಾಯಿತು. ಹೆಲಿಕಾಪ್ಟರ್‌ನಲ್ಲಿ ಮಗುವನ್ನು ಮನೆಗೆ ಕರೆತಂದ ನಂತರ ಬ್ಯಾಂಡ್ ವಾದ್ಯಗಳ ಮೂಲಕ ಸ್ವಾಗತ ಕೋರಲಾಯಿತು. ಬಳಿಕ ದಾರಿ ಉದ್ದಕ್ಕೂ ಗುಲಾಬಿ ದಳಗಳನ್ನು ಹರಡಲಾಯಿತು.
ಕಳೆದ 35 ವರ್ಷಗಳಲ್ಲಿ ಕುಟುಂಬದಲ್ಲಿ ಜನಿಸಿದ ಮೊದಲ ಹೆಣ್ಣು ಮಗು ಇದಾಗಿದ್ದರಿಂದ ಮಗುವಿಗೆ ಈ ರೀತಿಯ ಭವ್ಯ ಸ್ವಾಗತ ಕೋರಲಾಯಿತು. ಬಾಡಿಗೆಗೆ ಹೆಲಿಕಾಪ್ಟರ್ ಪಡೆದು, ಸ್ವಾಗತ ಕಾರ್ಯಕ್ರಮಕ್ಕೆ ಒಟ್ಟು 4.5 ಲಕ್ಷ ರೂ. ವ್ಯಯಿಸಲಾಯಿತು.
ನಾಗೌರ್ ಜಿಲ್ಲೆಯ ನಿಂಬ್ದಿ ಚಂದಾವತದ ಗ್ರಾಮಸ್ಥರು ತಮ್ಮ ಗ್ರಾಮದಲ್ಲಿ ಹೆಲಿಕಾಪ್ಟರ್ ಇಳಿಯುವುದನ್ನು ನೋಡಲು ಮತ್ತು ಹೆಣ್ಣು ಮಗುವನ್ನು ಕಣ್ತುಂಬಿಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಕೊಂಡಿದ್ದರು. ರಾಮನವಮಿಯ ಶುಭ ಸಂದರ್ಭದಲ್ಲಿ ಹಳ್ಳಿಗೆ ಬಂದ ಮಗುವನ್ನು, ಗ್ರಾಮಸ್ಥರು ಭಜನೆ ಹಾಡಿ, ಹೂಮಳೆ ಮೂಲಕ ಸ್ವಾಗತಿಸಿದರು.