ETV Bharat / bharat

ಪಂಜಾಬ್​ನಲ್ಲಿ ಮಾಫಿಯಾ ವಿರೋಧಿ ಯುಗ ಆರಂಭದ ನಿರೀಕ್ಷೆ: ಮಾನ್​ ಬಗ್ಗೆ ಸಿಧು ಟ್ವೀಟ್​ - ನವಜೋತ್​ ಸಿಂಗ್ ಸಿಧು ಟ್ವೀಟ್

ಪಂಜಾಬ್​​ ಚುನಾವಣೆಯಲ್ಲಿ ಕಾಂಗ್ರೆಸ್​ ಸೋತ ಬೆನ್ನಲ್ಲೇ ನವಜೋತ್​ ಸಿಂಗ್ ಸಿಧು, ರಾಜ್ಯದ ಜನತೆ ಬದಲಾವಣೆ ಬಯಸಿದ್ದಾರೆ. ಹೀಗಾಗಿ ಆಮ್​​ ಆದ್ಮಿ ಪಕ್ಷವನ್ನು ಆಯ್ಕೆ ಮಾಡಿದ್ದಾರೆ ಎಂದು ಹೇಳಿದ್ದರು. ಇಂದು ಟ್ವೀಟ್​ ಮೂಲಕ ಎಡವಟ್ಟು ಮಾಡಿಕೊಂಡಿದ್ದಾರೆ.

navjot sidhu
navjot sidhu
author img

By

Published : Mar 17, 2022, 6:58 PM IST

ನವದೆಹಲಿ: ಪಂಜಾಬ್​ನ ನೂತನ ಮುಖ್ಯಮಂತ್ರಿ ಭಗವಂತ್​ ಮಾನ್​ ಅವರನ್ನು ಅಭಿನಂದಿಸುವ ಭರದಲ್ಲಿ ಕಾಂಗ್ರೆಸ್​​ ಮಾಜಿ ಅಧ್ಯಕ್ಷ ನವಜೋತ್​ ಸಿಂಗ್ ಸಿಧು ಎಡವಟ್ಟೊಂದು ಮಾಡಿದ್ದಾರೆ. ಮಾಫಿಯಾ ವಿರೋಧಿ ಆಡಳಿತಕ್ಕೆ ಮಾನ್​ ಮುನ್ನುಡಿ ಬರೆಯುವ ಭರವಸೆ ಮೂಡಿಸಿದ್ದಾರೆ ಎನ್ನುವ ಸಿಧು ಅಭಿಪ್ರಾಯವು ಕಾಂಗ್ರೆಸ್​ ಅನ್ನು ಇಕ್ಕಟ್ಟಿಗೆ ಸಿಲುಕಿಸುವುದರೊಂದಿಗೆ ಮುಜಗರಕ್ಕೂ ಈಡಾಗುವಂತೆ ಮಾಡಿದೆ.

ಆಡಳಿತದಲ್ಲಿ ಇದ್ದೂ ಚುನಾವಣೆಯಲ್ಲಿ ಕಾಂಗ್ರೆಸ್​ ಸೋತ ಬೆನ್ನಲ್ಲೇ ನವಜೋತ್​ ಸಿಂಗ್ ಸಿಧು, ಪಂಜಾಬ್​ ಜನತೆ ಬದಲಾವಣೆ ಬಯಸಿದ್ದಾರೆ. ಹೀಗಾಗಿ ಆಮ್​​ ಆದ್ಮಿ ಪಕ್ಷವನ್ನು ಆಯ್ಕೆ ಮಾಡಿದ್ದಾರೆ ಎಂದು ಹೇಳಿದ್ದರು. ಈಗ ಭಗವಂತ್ ಮಾನ್​ ಕುರಿತಂತೆ ಟ್ವೀಟ್​ ಮಾಡಿ ತಮ್ಮದೇ ಪಕ್ಷದ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿಕೊಂಡಿದ್ದಾರೆ.

'ಯಾರಿಂದಲೂ ಯಾವುದನ್ನೂ ನಿರೀಕ್ಷಿಸದ ವ್ಯಕ್ತಿ ಅತ್ಯಂತ ಸಂತೋಷವಾಗಿರುತ್ತಾನೆ. ಹಾಗೆ ಭಗವಂತ್ ಮನ್​ ಪಂಜಾಬ್​​ನಲ್ಲಿ ಮಾಫಿಯಾ-ವಿರೋಧಿ ಯುಗದ ಅನಾವರಣ ಮಾಡುವ ಬೆಟ್ಟದಷ್ಟು ನಿರೀಕ್ಷೆ ಹುಟ್ಟಿಸಿದ್ದಾರೆ. ಜನಸ್ನೇಹಿ ರಾಜಕೀಯದ ಮೂಲಕ ಪಂಜಾಬ್​​ನನ್ನು ಮತ್ತಷ್ಟು ಶಕ್ತಿಯುತ ರಾಜ್ಯವನ್ನಾಗಿ ಮಾಡಲಿ ಎಂದು ಸಿಧು ಟ್ವೀಟ್​ ಮಾಡಿದ್ದಾರೆ. ಅಚ್ಚರಿ ಎಂದರೆ ಪಂಜಾಬ್​ ಕಾಂಗ್ರೆಸ್​ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಮರುದಿನವೇ ಇಂತಹ ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ: ಪಂಜಾಬ್‌ನಲ್ಲಿ ಭ್ರಷ್ಟರಿಗೆ ಹೊಸ ಸಿಎಂ ಶಾಕ್: ಜನರಿಗೆ ತನ್ನದೇ ವಾಟ್ಸಾಪ್‌ ನಂಬರ್‌ ನೀಡಿ ದೂರು ಸಲ್ಲಿಸಲು ಅವಕಾಶ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.