ನವದೆಹಲಿ: ದೇಶಾದ್ಯಂತ ಮಹಾಮಾರಿ ಕೊರೊನಾ ವೈರಸ್ ಹಾವಳಿ ಜೋರಾಗಿದ್ದು, ನಿತ್ಯ ಲಕ್ಷಾಂತರ ಸೋಂಕಿತ ಪ್ರಕರಣ ಹಾಗೂ ಸಾವಿರಾರು ಜನರು ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಡೆಡ್ಲಿ ವೈರಸ್ ವಿರುದ್ಧದ ಹೋರಾಟದಲ್ಲಿ ಈಗಾಗಲೇ ಅನೇಕರು ಕೈಜೋಡಿಸಿದ್ದು, ಸದ್ಯ ಟೀಂ ಇಂಡಿಯಾ ಟೆಸ್ಟ್ ಪ್ಲೇಯರ್ ಹನುಮ ವಿಹಾರಿ ಕೂಡ ಇದರಲ್ಲಿ ಭಾಗಿಯಾಗಿದ್ದಾರೆ.
ಸದ್ಯ ಕೌಂಟಿ ಚಾಂಪಿಯನ್ಷಿಪ್ನಲ್ಲಿ ಕ್ರಿಕೆಟ್ ಆಡಲು ಉದ್ದೇಶದಿಂದ ಇಂಗ್ಲೆಂಡ್ನಲ್ಲಿರುವ ಹನುಮ ವಿಹಾರಿ ಅಲ್ಲಿಂದಲೇ ನೆರವಿಗೆ ಮನವಿ ಮಾಡ್ತಿದ್ದಾರೆ. ಇದರ ಜತೆಗೆ 100 ಮಂದಿ ತಂಡ ರಚನೆ ಮಾಡಿದ್ದು, ಅದರಲ್ಲಿ ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕರ್ನಾಟಕದ ಅನೇಕರು ಸೇರಿಕೊಂಡಿದ್ದಾರೆ. ಈ ಮೂಲಕ ಕೋವಿಡ್ ಸೋಂಕಿಗೊಳಗಾಗಿ ಆಕ್ಸಿಜನ್, ಔಷಧ, ಆಹಾರ ಸೇರಿದಂತೆ ಅನೇಕ ಸಮಸ್ಯೆ ಎದುರಿಸುತ್ತಿರುವವರ ಪಾಲಿಗೆ ಸಹಾಯ ಮಾಡ್ತಿದ್ದಾರೆ.
-
Hope he recovers soon https://t.co/9eQI0Jzy4e
— Hanuma vihari (@Hanumavihari) May 13, 2021 " class="align-text-top noRightClick twitterSection" data="
">Hope he recovers soon https://t.co/9eQI0Jzy4e
— Hanuma vihari (@Hanumavihari) May 13, 2021Hope he recovers soon https://t.co/9eQI0Jzy4e
— Hanuma vihari (@Hanumavihari) May 13, 2021
ಇದನ್ನೂ ಓದಿ: ಕೊನೆಗೂ ಬದುಕಿ ಬರಲಿಲ್ಲ ಈ ಧೈರ್ಯಶಾಲಿ ಯುವತಿ!
ಇದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಕ್ರಿಕೆಟರ್ ಹನುಮ ವಿಹಾರಿ, ಇಂತಹ ಕೆಲಸ ವೈಭವೀಕರಣ ಮಾಡುವ ಅವಶ್ಯಕತೆ ಇಲ್ಲ. ಅದು ನನಗಿಷ್ಟವಿಲ್ಲ. ಕೆಳಮಟ್ಟದ ಜನರಿಗೆ ನೆರವಾಗಬೇಕು ಎಂಬ ಉದ್ದೇಶವಿದೆ. ಕಷ್ಟದ ಸಮಯದಲ್ಲಿ ಅನೇಕರಿಗೆ ನೆರವಿನ ಅಗತ್ಯವಿರುವ ಕಾರಣ ಈ ನಿರ್ಧಾರ ಕೈಗೊಂಡಿದ್ದಾನೆ ಎಂದು ತಿಳಿಸಿದ್ದಾರೆ.
ವಿಹಾರಿ ರಚನೆ ಮಾಡಿರುವ ವಾಟ್ಸ್ಆ್ಯಪ್ ಗ್ರೂಪ್ನಲ್ಲಿ 100 ಸ್ವಯಂ ಸೇವಕರಿದ್ದು, ಅವರ ಪರಿಶ್ರಮದಿಂದಲೇ ನಾನು ಜನರಿಗೆ ಸಹಾಯ ಮಾಡಲು ಸಾಧ್ಯವಾಗುತ್ತದೆ. ನನ್ನ ಪತ್ನಿ, ಸಹೋದರಿ ಮತ್ತು ಅನೇಕರು ಈ ವಾಲಂಟಿಯರ್ ತಂಡದಲ್ಲಿದ್ದಾರೆ ಎಂದು ತಿಳಿಸಿದ್ದಾರೆ.
ಮೂಲತಃ ಆಂಧ್ರಪ್ರದೇಶದವರಾಗಿರುವ ವಿಹಾರಿ ಟೀಂ ಇಂಡಿಯಾ ಪರ 11 ಟೆಸ್ಟ್ ಪಂದ್ಯಗಳನ್ನಾಡಿದ್ದು, 624 ರನ್ಗಳಿಕೆ ಮಾಡಿದ್ದಾರೆ. ಇದೀಗ ವಿಶ್ವ ಟೆಸ್ಟ್ ಚಾಪಿಯನ್ಶಿಪ್ ಹಾಗೂ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಅವರು ಆಯ್ಕೆಯಾಗಿದ್ದು, ಜೂನ್ 3ರಂದು ತಂಡ ಸೇರಿಕೊಳ್ಳಲಿದ್ದಾರೆ.
ಇದೇ ವೇಳೆ, ಗಾಯದ ಸಮಯದಲ್ಲೂ ಮೈದಾನದಲ್ಲಿ ನೆಲಕಚ್ಚಿ ನಿಂತು ಟೆಸ್ಟ್ ಪಂದ್ಯದ ಸೋಲು ತಪ್ಪಿಸಿದ್ದು ಸಣ್ಣ ಸಾಹಸವೇನಲ್ಲ, ಆದರೆ, ಕೋವಿಡ್ನಿಂದ ಸಮಸ್ಯೆಗೊಳಗಾಗಿ ದಿಕ್ಕು ತೋಚದ ಈ ಸಮಯದಲ್ಲಿ ಅವರಿಗೆ ಸಹಾಯ ಮಾಡುತ್ತಿರುವುದು ಮತ್ತಷ್ಟು ಸತೃಪ್ತಿ ನೀಡಿದೆ ಎಂದು ಅವರು ಹೇಳಿಕೊಂಡಿದ್ದಾರೆ.