ETV Bharat / bharat

ಭಾರತ ಪ್ರವಾಸದಲ್ಲಿ ನೇಪಾಳ ಪ್ರಧಾನಿ ಪುಷ್ಪಕಮಲ್ ದಹಾಲ್: ಇಂದು ಮೋದಿ ಭೇಟಿ

author img

By

Published : Jun 1, 2023, 11:16 AM IST

ನೇಪಾಳ ಪ್ರಧಾನಿ ಪುಷ್ಪಕಮಲ್ ದಹಾಲ್ ಪ್ರಚಂಡ ಅವರಿಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ.

ಮೋದಿ ಭೇಟಿಯಾಗಲಿರುವ ನೇಪಾಳ ಪ್ರಧಾನಿ
ಮೋದಿ ಭೇಟಿಯಾಗಲಿರುವ ನೇಪಾಳ ಪ್ರಧಾನಿ

ನವದೆಹಲಿ: ನಾಲ್ಕು ದಿನಗಳ ಭಾರತ ಪ್ರವಾಸದಲ್ಲಿರುವ ನೇಪಾಳ ಪ್ರಧಾನಿ ಪುಷ್ಪಕಮಲ್ ದಹಾಲ್ ಪ್ರಚಂಡ ಅವರು ಇಂದು (ಗುರುವಾರ) ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಲಿದ್ದಾರೆ. ಉಭಯ ದೇಶಗಳ ನಡುವೆ ಇಂಧನ, ಸಂಪರ್ಕ ಮತ್ತು ವ್ಯಾಪಾರವನ್ನು ಉತ್ತೇಜಿಸುವ ಕುರಿತು ಚರ್ಚೆ ನಡೆಯಲಿದ್ದು, ಉಭಯ ನಾಯಕರ ಸಮ್ಮುಖದಲ್ಲಿ ಹಲವಾರು ಒಪ್ಪಂದಗಳಿಗೂ ಸಹಿ ಹಾಕುವ ನಿರೀಕ್ಷೆ ಇದೆ.

ಡಿಸೆಂಬರ್ 2022 ರಲ್ಲಿ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಇದು ಪ್ರಚಂಡ ಅವರ ಮೊದಲ ದ್ವಿಪಕ್ಷೀಯ ವಿದೇಶಿ ಭೇಟಿಯಾಗಿದೆ. ನೇಪಾಳ ರಾಯಭಾರ ಕಚೇರಿಯಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ, "ನಾವು ಉಭಯ ದೇಶಗಳ ನಡುವಿನ ಬಾಂಧವ್ಯವನ್ನು ಬಲಪಡಿಸಲು ಬದ್ಧರಾಗಿದ್ದೇವೆ" ಎಂದು ಹೇಳಿದರು. ಮಾಹಿತಿ ಪ್ರಕಾರ, ಇಂದು ನಡೆಯುವ ದ್ವಿಪಕ್ಷೀಯ ಮಾತುಕತೆಯಲ್ಲಿ ವ್ಯಾಪಾರ, ಸಾರಿಗೆ ಸಂಪರ್ಕ ಮತ್ತು ಗಡಿ ಸಮಸ್ಯೆಗಳೂ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚಿಸಲಾಗುವುದು ಎಂದು ಪ್ರಚಂಡ ಅವರ ನಿಯೋಗದ ಭಾಗವಾಗಿರುವ ನೇಪಾಳದ ವಿದೇಶಾಂಗ ಸಚಿವ ಎನ್‌.ಪಿ.ಸೌದ್ ಹೇಳಿದರು.

ಮೊದಲ ಲ್ಯಾಂಡ್ ​ಪೋರ್ಟ್ ಉದ್ಘಾಟನೆ: ನರೇಂದ್ರ ಮೋದಿ ಮತ್ತು ಪುಷ್ಪಕಮಲ್ ದಹಾಲ್ ಪ್ರಚಂಡ ಅವರು ಭಾರತ-ನೇಪಾಳ ಗಡಿಯಲ್ಲಿರುವ ಬಹ್ರೈಚ್‌ನಲ್ಲಿ ಯುಪಿಯ ಮೊದಲ ಭೂ ಬಂದರನ್ನು ಉದ್ಘಾಟಿಸಲಿದ್ದಾರೆ. ಲ್ಯಾಂಡ್ ಪೋರ್ಟ್ ಅಥಾರಿಟಿ ಆಫ್ ಇಂಡಿಯಾದಿಂದ ರುಪೈದಿಹಾ ಲ್ಯಾಂಡ್ ಪೋರ್ಟ್‌ನಲ್ಲಿ ಸಲಹೆಗಾರರಾಗಿ ನೇಮಕಗೊಂಡ ಎ.ಪಿ.ಸಿಂಗ್ ಅವರು, ಇಂದು ಬೆಳಿಗ್ಗೆ 11.30 ಕ್ಕೆ ನವದೆಹಲಿಯಿಂದ ಈ ಲ್ಯಾಂಡ್ ಪೋರ್ಟ್ ಅನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಇದಾದ ನವದೆಹಲಿಯ ಬಳಿಕ ಹೈದರಾಬಾದ್ ಹೌಸ್‌ನಲ್ಲಿ ನೇಪಾಳದ ಪ್ರಧಾನಮಂತ್ರಿಯ ಗೌರವಾರ್ಥ ವಿಶೇಷ ಭೋಜನಕೂಟ ಆಯೋಜಿಸಲಾಗಿದೆ. ನಂತರ ಪ್ರಚಂಡ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಉಪಾಧ್ಯಕ್ಷ ಜಗದೀಪ್ ಧಂಖರ್, ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಭಾರತದ ವಿದೇಶಾಂಗ ಕಾರ್ಯದರ್ಶಿ ವಿನಯ್ ಮೋಹನ್ ಕವಾತ್ರಾ ಸೇರಿದಂತೆ ಅನೇಕರನ್ನು ಭೇಟಿಯಾಗಿ ನವದೆಹಲಿಯಲ್ಲಿ ನೇಪಾಳ-ಭಾರತ ವ್ಯಾಪಾರ ಶೃಂಗಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ. ಭಾರತದಲ್ಲಿ ಇರುವ ನೇಪಾಳಿ ಸಮುದಾಯದ ಜನರನ್ನೂ ಭೇಟಿಯಾಗುವರು.

ಬುಧವಾರ ಭಾರತಕ್ಕೆ ಬಂದಿಳಿದ ಪ್ರಚಂಡ ಅವರು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ಭೇಟಿ ಮಾಡಿ, ಭಾರತ-ನೇಪಾಳ ಸಂಬಂಧದ ಕುರಿತ ಹಲವಾರು ಅಂಶಗಳ ಬಗ್ಗೆ ಚರ್ಚೆ ನಡೆಸಿದ್ದರು. ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ಕೂಡ ಉಪಸ್ಥಿತರಿದ್ದರು.

ನೇಪಾಳದ ಭಾರತದ ಮಾಜಿ ರಾಯಭಾರಿ ಮಂಜೀವ್ ಸಿಂಗ್ ಪುರಿ ಈಟಿವಿ ಭಾರತದೊಂದಿಗೆ ಮಾತನಾಡಿ, “ಈ ಭೇಟಿಯಿಂದ ಭಾರತ ಮತ್ತು ನೇಪಾಳ ನಡುವೆ ವಿದ್ಯುತ್, ವ್ಯಾಪಾರ ಮತ್ತು ಇಂಧನ ಕ್ಷೇತ್ರಗಳಲ್ಲಿ ಫಲಪ್ರದ ಫಲಿತಾಂಶಗಳು ಬರಲಿವೆ. ಮುಖ್ಯವಾಗಿ, ನೇಪಾಳವು ಭಾರತವನ್ನು ದೊಡ್ಡ ಮಾರುಕಟ್ಟೆಯಾಗಿ ನೋಡುತ್ತಿದೆ. ಜಲವಿದ್ಯುತ್ ಕ್ಷೇತ್ರದಲ್ಲಿ ಮತ್ತಷ್ಟು ಭಾರತೀಯ ಹೂಡಿಕೆಯ ಸಾಧ್ಯತೆಯನ್ನು ನೇಪಾಳ ನಿರೀಕ್ಷಿಸುತ್ತಿದೆ" ಎಂದು ಹೇಳಿದರು.

ನೇಪಾಳ ಪ್ರಧಾನಿಗಳಿಂದ ಈ ಹಿಂದಿನ ಭಾರತ ಪ್ರವಾಸ: ಕಳೆದ ವರ್ಷ ಏಪ್ರಿಲ್‌ನಲ್ಲಿ ಆಗಿನ ನೇಪಾಳಿ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನೇಪಾಳದಲ್ಲಿ ರುಪೇ ಕಾರ್ಡ್ ಅನ್ನು ಪ್ರಾರಂಭಿಸಲಾಗಿತ್ತು ಎಂಬುದು ಗಮನಾರ್ಹ. ಪ್ರಧಾನಿ ಪ್ರಚಂಡ ಕೂಡ ಎರಡು ಬಾರಿ ಭಾರತಕ್ಕೆ ಭೇಟಿ ನೀಡಿದ್ದಾರೆ. 2016 ರಲ್ಲಿ ಮತ್ತು 2008 ರಲ್ಲಿ ನೇಪಾಳದ ಪ್ರಧಾನಿಯಾಗಿ ಭಾರತಕ್ಕೆ ಆಗಮಿಸಿದ್ದರು.

ಇದನ್ನೂ ಓದಿ: ಜುಲೈನಲ್ಲಿ ಬೆಂಗಳೂರು-ಧಾರವಾಡ ವಂದೇ ಭಾರತ್ ರೈಲಿಗೆ ಚಾಲನೆ: ರೈಲ್ವೆ ಸಚಿವರ ಭೇಟಿಯಾದ ಜೋಶಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.