ನವದೆಹಲಿ: ದೇಶಾದ್ಯಂತ ಎರಡನೇ ಹಂತದ ಕೋವಿಡ್ ಅಲೆ ಜೋರಾಗಿದ್ದು, ನಿತ್ಯ ಸಾವಿರಾರು ಜನರು ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದರ ಮಧ್ಯೆ ಆಕ್ಸಿಜನ್ ಸಿಲಿಂಡರ್ಗೋಸ್ಕರ ಹಾಹಾಕಾರ ಶುರುವಾಗಿದ್ದು, ಇದರಿಂದ ರೋಗಿಗಳು ಹಾಗೂ ಅವರ ಸಂಬಂಧಿಕರು ಇನ್ನಿಲ್ಲದ ತೊಂದರೆ ಅನುಭವಿಸುತ್ತಿದ್ದಾರೆ.
ದೇಶದ ಪ್ರಮುಖ ನಗರಗಳಲ್ಲಿ ಆಕ್ಸಿಜನ್ ಸಮಸ್ಯೆ ಉಂಟಾಗಿರುವ ಕಾರಣ ಕೆಲವೊಬ್ಬರು ಇದನ್ನೇ ಬಂಡವಾಳ ಮಾಡಿಕೊಂಡು ಹಣ ಸಂಪಾದನೆ ಮಾಡ್ತಿದ್ದಾರೆ. ಇದರ ಮಧ್ಯೆ ಇನ್ನೂ ಕೆಲವರು ತಮ್ಮ ಕಾಮದ ದಾಹ ತೀರಿಸಿಕೊಳ್ಳುವ ಕೆಲಸಕ್ಕೂ ಕೈಹಾಕುತ್ತಿದ್ದಾರೆ. ಸದ್ಯ ಅಂತಹದೊಂದು ಘಟನೆ ದೆಹಲಿಯಲ್ಲಿ ಕಳೆದ ಎರಡು ದಿನಗಳ ಹಿಂದೆ ನಡೆದಿದೆ.
-
My friend’s sister like my baby sister was asked by a neighbour in an elite colony to sleep with him for an oxygen cylinder that she desperately needed for her father;
— Bhavreen Kandhari (@BhavreenMK) May 11, 2021 " class="align-text-top noRightClick twitterSection" data="
What action can be taken because the b* will obviously deny, no?#HumanityIsDead
">My friend’s sister like my baby sister was asked by a neighbour in an elite colony to sleep with him for an oxygen cylinder that she desperately needed for her father;
— Bhavreen Kandhari (@BhavreenMK) May 11, 2021
What action can be taken because the b* will obviously deny, no?#HumanityIsDeadMy friend’s sister like my baby sister was asked by a neighbour in an elite colony to sleep with him for an oxygen cylinder that she desperately needed for her father;
— Bhavreen Kandhari (@BhavreenMK) May 11, 2021
What action can be taken because the b* will obviously deny, no?#HumanityIsDead
ವ್ಯಕ್ತಿಯೋರ್ವ ಕೋವಿಡ್ ಸೋಂಕಿಗೊಳಗಾಗಿ ಆಕ್ಸಿಜನ್ ಸಮಸ್ಯೆ ಅನುಭವಿಸುತ್ತಿದ್ದನು. ಈ ವೇಳೆ, ತಂದೆಯನ್ನ ಬದುಕಿಸಿಕೊಳ್ಳಲು ಮುಂದಾಗಿರುವ ಯುವತಿ ಆಮ್ಲಜನಕ ಹೊಂದಿಸಲು ಮುಂದಾಗಿದ್ದಾಳೆ, ಇದೇ ವೇಳೆ ನೆರೆಯ ಮನೆ ವ್ಯಕ್ತಿ ಬಳಿ ಸಹಾಯ ಕೇಳಿದ್ದಾಳೆ. ಇದಕ್ಕೆ ಪ್ರತಿಯಾಗಿ ಆತ ಆಕ್ಸಿಜನ್ ಬೇಕಾದರೆ ನನ್ನೊಂದಿಗೆ ಒಂದು ರಾತ್ರಿ ಕಳೆಯುವಂತೆ ಕೇಳಿದ್ದಾನೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ರಾಕೆಟ್ ದಾಳಿಯಲ್ಲಿ ಕೇರಳ ಮೂಲದ ಮಹಿಳೆ ಸಾವು: ಕುಟುಂಬದ ಸಂಪೂರ್ಣ ಹೊಣೆ ಹೊತ್ತುಕೊಂಡ ಇಸ್ರೇಲ್
ಆಕ್ಸಿಜನ್ ಬೇಕಾದರೆ ನನ್ನೊಂದಿಗೆ ಸೆಕ್ಸ್ ಒಪ್ಪಿಕೊ ಎಂದು ಕಿರುಕುಳ ನೀಡಿದ್ದಾನೆ ಎಂದು ಇದೀಗ ಯುವತಿಯೊಬ್ಬಳು ಟ್ವೀಟರ್ನಲ್ಲಿ ಬರೆದು ಕೊಂಡಿದ್ದಾಳೆ. ನನ್ನ ಸ್ನೇಹಿತನ ಸಹೋದರಿ ಬಳಿ ವ್ಯಕ್ತಿ ಈ ರೀತಿಯಾಗಿ ನಡೆದುಕೊಂಡಿದ್ದಾನೆ. ಆಕ್ಸಿಜನ್ಗೋಸ್ಕರ ಸೆಕ್ಸ್ ನೀಡಬೇಕೆ? ನಮ್ಮ ಸಮಾಜ ಎಲ್ಲಿಗೆ ಬಂದು ನಿಂತಿದೆ. ಆತನ ವಿರುದ್ಧ ಯಾವ ರೀತಿಯ ಕ್ರಮ ಕೈಗೊಳ್ಳಬೇಕು? ಎಂದು ಆಕೆ ಬರೆದುಕೊಂಡಿದ್ದಾಳೆ. ಈ ಪೋಸ್ಟ್ ನೋಡಿರುವ ಅನೇಕರು ಪೊಲೀಸ್ ದೂರು ನೀಡುವಂತೆ ಸೂಚಿಸಿದ್ರೆ, ಇನ್ನು ಹಲವರು ಕಾಲೋನಿಯ ಅಸೋಸಿಯೇಷನ್ಗೆ ದೂರು ನೀಡುವಂತೆ ತಿಳಿಸಿದ್ದಾರೆ.