ನವದೆಹಲಿ : ನೀಟ್-ಪಿಜಿ 2021 ಕೌನ್ಸೆಲಿಂಗ್ ವಿಳಂಬ ವಿರುದ್ಧ ರೆಸಿಡೆಂಟ್ ವೈದ್ಯರ ಪ್ರತಿಭಟನೆ ಭಾರಿ ಹೈಡ್ರಾಮಕ್ಕೆ ಕಾರಣವಾಗಿದೆ. ಪ್ರತಿಭಟನೆ ವೇಳೆ ಪೊಲೀಸರ ವರ್ತನೆಯನ್ನು ವಿರೋಧಿಸಿ ನಾಳೆ ಬೆಳಗ್ಗೆ 8 ಗಂಟೆಯಿಂದ ದೇಶಾದ್ಯಂತ ಎಲ್ಲ ಆರೋಗ್ಯ ಸೇವೆಗಳನ್ನು ಬಹಿಷ್ಕರಿಸುವುದಾಗಿ ಅಖಿಲ ಭಾರತ ವೈದ್ಯಕೀಯ ಸಂಘಗಳ ಒಕ್ಕೂಟ ಘೋಷಿಸಿದೆ.
ನೀಟ್ ಪಿಜಿ 2021 ಕೌನ್ಸೆಲಿಂಗ್ ವಿಳಂಬದ ಕುರಿತು ದೆಹಲಿಯಲ್ಲಿ ಫೆಡರೇಷನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್ ನೇತೃತ್ವದಲ್ಲಿ ನಡೆದ ವೈದ್ಯರ ಪ್ರತಿಭಟನೆ ನಿನ್ನೆ ನಾಟಕೀಯ ತಿರುವು ಪಡೆದುಕೊಂಡಿತ್ತು. ವೈದ್ಯರು ಮತ್ತು ಪೊಲೀಸ್ ಸಿಬ್ಬಂದಿ ನಡುವೆ ಘರ್ಷಣೆ ನಡಿದಿತ್ತು.
ಘಟನೆಯಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೌಲಾನಾ ಆಜಾದ್ ವೈದ್ಯಕೀಯ ಕಾಲೇಜಿನಿಂದ ಸುಪ್ರೀಂಕೋರ್ಟ್‌ವರೆಗೆ ಪ್ರತಿಭಟನೆಗೆ ಮುಂದಾದಾಗ ಪೊಲೀಸರು ಹಲವರನ್ನು ವಶಕ್ಕೆ ಪಡೆದಿದ್ದಾರೆ.
-
Thousands of doctors being detained at Sarojini Nagar Police Station!@rashtrapatibhvn @VPSecretariat @FordaIndia @IMAIndiaOrg @delhimediasso @ArvindKejriwal @SatyendarJain @INCIndia @AshishOnGround @AshishOnGround @IndiaToday @TheQuint @thewire_in @ndtv @ndtvindia @abplivenews pic.twitter.com/wPM4NDfbkX
— RDA_UCMS & GTBH (@RdaUcms) December 27, 2021 " class="align-text-top noRightClick twitterSection" data="
">Thousands of doctors being detained at Sarojini Nagar Police Station!@rashtrapatibhvn @VPSecretariat @FordaIndia @IMAIndiaOrg @delhimediasso @ArvindKejriwal @SatyendarJain @INCIndia @AshishOnGround @AshishOnGround @IndiaToday @TheQuint @thewire_in @ndtv @ndtvindia @abplivenews pic.twitter.com/wPM4NDfbkX
— RDA_UCMS & GTBH (@RdaUcms) December 27, 2021Thousands of doctors being detained at Sarojini Nagar Police Station!@rashtrapatibhvn @VPSecretariat @FordaIndia @IMAIndiaOrg @delhimediasso @ArvindKejriwal @SatyendarJain @INCIndia @AshishOnGround @AshishOnGround @IndiaToday @TheQuint @thewire_in @ndtv @ndtvindia @abplivenews pic.twitter.com/wPM4NDfbkX
— RDA_UCMS & GTBH (@RdaUcms) December 27, 2021
ನಾವು ಮೌಲಾನಾ ಆಜಾದ್ ವೈದ್ಯಕೀಯ ಕಾಲೇಜಿನಿಂದ ಸುಪ್ರೀಂಕೋರ್ಟ್‌ವರೆಗೆ ಪ್ರತಿಭಟನೆಗೆ ಪ್ರಯತ್ನಿಸಿದೆವು. ಆದರೆ, ತಕ್ಷಣ ಪೊಲೀಸರು ಮುಂದೆ ಸಾಗದಂತೆ ತಡೆದರು. ಈ ವೇಳೆ ನಮ್ಮ ಮೇಲೆ ಹಲ್ಲೆ ನಡೆದಿದೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ. ನಮ್ಮಲ್ಲಿ ಅನೇಕರನ್ನು ಬಂಧಿಸಲಾಗಿದೆ ಎಂದು ರೆಸಿಡೆಂಟ್ ವೈದ್ಯರ ಸಂಘದ ಅಧ್ಯಕ್ಷ ಮನೋಜ್ ಆರೋಪಿಸಿದ್ದಾರೆ.
ಆದರೆ, ರೆಸಿಡೆಂಟ್ ವೈದ್ಯರ ಆರೋಪವನ್ನು ಪೊಲೀಸರು ನಿರಾಕರಿಸಿದ್ದಾರೆ. ಪ್ರತಿಭಟನಾನಿರತ ವೈದ್ಯರನ್ನು ನಿಯಂತ್ರಿಸಲು ಪೊಲೀಸರು ಯಾರ ಮೇಲೆ ಲಾಠಿ ಬೀಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ರೆಸಿಡೆಂಟ್ ವೈದ್ಯರನ್ನು ನಿಂದಿಸಿದ್ದಾರೆ ಎಂಬ ಮನೋಜ್ ಆರೋಪವನ್ನು ಪೊಲೀಸರು ಅಲ್ಲಗಳೆದಿದ್ದಾರೆ. ಪ್ರತಿಭಟನೆ ವೇಳೆ ಕೇವಲ 12 ಮಂದಿಯನ್ನು ಬಂಧಿಸಿ ತಕ್ಷಣ ಬಿಡುಗಡೆಗೊಳಿಸಲಾಯಿತು ಎಂದು ಹೇಳಿದ್ದಾರೆ.
ಘಟನೆ ಕುರಿತು ಉಪ ಪೊಲೀಸ್ ಆಯುಕ್ತ ರೋಹಿತ್ ಮೀನಾ ಪ್ರತಿಕ್ರಿಯಿಸಿ, ಮುಖ್ಯರಸ್ತೆಯಲ್ಲಿ ಉದ್ದೇಶಪೂರ್ವಕವಾಗಿ ರೆಸಿಡೆಂಟ್ ವೈದ್ಯರು ಪ್ರತಿಭಟನೆಗೆ ಮುಂದಾಗಿದ್ದರು. ರಾತ್ರಿ ಕರ್ಫ್ಯೂ ಹಿನ್ನೆಲೆಯಲ್ಲಿ ರಸ್ತೆಯಿಂದ ಹೊರಬಾರದಂತೆ ಸೂಚಿಸಲಾಗಿತ್ತು.
ಆದರೂ ಹೊರ ಬರುವ ಪ್ರಯತ್ನ ಮಾಡಿದಾಗ ವಶಕ್ಕೆ ಪಡೆಯಲಾಗಿದೆ. ಘಟನೆಯಲ್ಲಿ ಏಳು ಮಂದಿ ಪೊಲೀಸರಿಗೆ ಗಾಯಗಳಾಗಿದ್ದು, ಪೊಲೀಸ್ ಬಸ್ ಗಾಜುಗಳನ್ನು ಒಡೆದಿರುವ ಆರೋಪ ಇದೆ. ಸರ್ಕಾರಿ ಆಸ್ತಿ ಹಾನಿ ಆರೋಪದ ಮೇಲೆ ಪ್ರಕರಣಗಳು ದಾಖಲಾಗಿವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪೊಲೀಸರ 'ಅನಾಗರಿಕ ಕ್ರಮ'ಕ್ಕೆ ಖಂಡನೆ: ದೆಹಲಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೇವೆ ಸ್ಥಗಿತಕ್ಕೆ ವೈದ್ಯರ ಕರೆ