ETV Bharat / bharat

ನೀಟ್​ ಪರೀಕ್ಷೆಯಲ್ಲಿ ವಿದ್ಯಾರ್ಥಿನಿಗೆ ಶೂನ್ಯ ಅಂಕ: ಹೈಕೋರ್ಟ್​ ಮೆಟ್ಟಿಲೇರಿದ ಲಿಪಾಕ್ಷಿ ಪಾಟಿದಾರ್

author img

By

Published : Sep 22, 2022, 7:46 PM IST

ನೀಟ್ ಪರೀಕ್ಷೆಯಲ್ಲಿ ಶೂನ್ಯ ಅಂಕ ಪಡೆದಿರುವ ವಿದ್ಯಾರ್ಥಿನಿಯೊಬ್ಬರು ಒಎಂಆರ್ ಶೀಟ್ ಬದಲಾಯಿಸಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಮಧ್ಯಪ್ರದೇಶದ ವಿದ್ಯಾರ್ಥಿನಿ ಲಿಪಾಕ್ಷಿ ಪಾಟಿದಾರ್ ನ್ಯಾಯಾಲಯದ ಮೆಟ್ಟಿಲೇರಿದ್ದು, ಕೋರ್ಟ್​ ಮೂಲ ದಾಖಲೆ ನೀಡುವಂತೆ ಸೂಚಿಸಿದೆ. ಅಲ್ಲದೇ ಈ ಪ್ರಕರಣದ ವಿಚಾರಣೆಯನ್ನು ಸೆ.30ಕ್ಕೆ ಮುಂದೂಡಿದೆ.

NEET Controversy in MP
ವಿದ್ಯಾರ್ಥಿನಿ ಲಿಪಾಕ್ಷಿ ಪಾಟಿದಾರ್

ಇಂದೋರ್ (ಮಧ್ಯಪ್ರದೇಶ): ವೈದ್ಯಕೀಯ ಕಾಲೇಜುಗಳ ಪದವಿಪೂರ್ವ ಕೋರ್ಸ್‌ಗಳ ಪ್ರವೇಶಕ್ಕಾಗಿ ಜುಲೈನಲ್ಲಿ ನಡೆಸಲಾದ ನೀಟ್​​ ಪರೀಕ್ಷೆಯು ಇದೀಗ ಹೊಸ ವಿವಾದಕ್ಕೆ ಕಾರಣವಾಗಿದೆ. ಪ್ರವೇಶ ಪರೀಕ್ಷೆಯ ಫಲಿತಾಂಶ ಬಂದಾಗ ಓರ್ವ ವಿದ್ಯಾರ್ಥಿನಿ ಶೂನ್ಯ ಅಂಕ ಪಡೆದಿದ್ದಾಳೆ. ಅಲ್ಲದೇ ಆಕೆ ಈ ವಿಷಯವಾಗಿ ಮಧ್ಯಪ್ರದೇಶದ ಹೈಕೋರ್ಟ್ ಮೆಟ್ಟಿಲೇರಿದ್ದಾಳೆ. ಅಷ್ಟೇ ಅಲ್ಲ ಈ ಪರೀಕ್ಷೆಯಲ್ಲಿ ಮೋಸ ನಡೆದಿದ್ದು, ಒಎಂಆರ್ ಶೀಟ್​ನನ್ನು ಬದಲಾಯಿಸಿರುವ ಶಂಕೆಯನ್ನೂ ವಿದ್ಯಾರ್ಥಿನಿ ವ್ಯಕ್ತಪಡಿಸಿದ್ದಾಳೆ.

ಸರ್ಕಾರದ ಉತ್ತರ ಕೇಳಿದ ಹೈಕೋರ್ಟ್​: ವಿದ್ಯಾರ್ಥಿನಿ ಲಿಪಾಕ್ಷಿ ಪಾಟಿದಾರ್‌ಗೆ ಶೂನ್ಯ ಅಂಕ ನೀಡಿದ ಪ್ರಕರಣದ ವಿಚಾರಣೆ ವೇಳೆ, ಮಧ್ಯಪ್ರದೇಶದ ಹೈಕೋರ್ಟ್‌ನ ಇಂದೋರ್ ಪೀಠದ ನ್ಯಾಯಮೂರ್ತಿ ಸುಬೋಧ್ ಅಭ್ಯಂಕರ್ ಅವರು ವಿದ್ಯಾರ್ಥಿನಿಯ ಮೂಲ ದಾಖಲೆ ನೀಡುವಂತೆ ಎನ್​ಟಿಎಗೆ ಕೇಳಿದೆ. ಬಳಿಕ ಕೇಂದ್ರ ಸರ್ಕಾರದ ಪರ ವಕೀಲರು ವಿದ್ಯಾರ್ಥಿನಿಯ ಮೂಲ ದಾಖಲೆ ನೀಡಲು ಒಂದು ವಾರ ಕಾಲಾವಕಾಶವನ್ನು ಕೋರಿದರು. ಇದಕ್ಕೆ ನ್ಯಾಯಾಲಯ ಒಪ್ಪಿಕೊಂಡು, ಸೆಪ್ಟೆಂಬರ್ 30ಕ್ಕೆ ವಿಚಾರಣೆಯನ್ನು ಮುಂದೂಡಿತು. ಅಲ್ಲದೇ ಈ ವಿಷಯವಾಗಿ ಸರ್ಕಾರ ಸೆ.30 ರೊಳಗೆ ಉತ್ತರವನ್ನು ನೀಡಬೇಕು ಎಂದು ನ್ಯಾಯಾಲಯ ಹೇಳಿದೆ.

ಇದನ್ನೂ ಓದಿ: ನೀಟ್ ಪರೀಕ್ಷೆ: ದೇಶಕ್ಕೆ ನಾಲ್ಕನೇ ರ‍್ಯಾಂಕ್​​​ ಪಡೆದ ಬೆಳಗಾವಿಯ ರುಚಾ

ಒಎಂಆರ್ ಶೀಟ್ ಬದಲಾವಣೆ ಶಂಕೆ: ವಿದ್ಯಾರ್ಥಿನಿ ಲಿಪಾಕ್ಷಿ ಪಾಟಿದಾರ್ ಪರ ವಕೀಲ ಧರ್ಮೇಂದ್ರ ಚೇಲಾವತ್ ಮಾತನಾಡಿ, ಜುಲೈ 17ರಂದು ನಡೆದ ನೀಟ್ ಪರೀಕ್ಷೆಯಲ್ಲಿ ಲಿಪಾಕ್ಷಿ 200ರಲ್ಲಿ 161 ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಅವರು ಪರೀಕ್ಷೆಯಲ್ಲಿ ಪಾಸ್​ ಆಗುವ ವಿಶ್ವಾಸವನ್ನು ಹೊಂದಿದ್ದರು. ಆದರೆ, ಫಲಿತಾಂಶ ಬಂದಾಗ ಅವರಿಗೆ ಶೂನ್ಯ ಅಂಕಗಳು ಬಂದಿವೆ. ವಿದ್ಯಾರ್ಥಿನಿ ನನಗೆ OMR ಶೀಟ್ ಕಳುಹಿಸಿದಾಗ, ಅದು ಸಂಪೂರ್ಣವಾಗಿ ಖಾಲಿಯಾಗಿತ್ತು ಮತ್ತು ಅದರಲ್ಲಿ ಒಂದೇ ಒಂದು ಉತ್ತರ ದಾಖಲಾಗಿರಲಿಲ್ಲ. ಹಾಗಾಗಿ ಒಎಂಆರ್​ ಶೀಟ್​ ಬದಲಾವಣೆ ಮಾಡಿರುವ ಶಂಕೆಯನ್ನು ವಿದ್ಯಾರ್ಥಿನಿ ವ್ಯಕ್ತಪಡಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಯಾರು ಲಿಪಾಕ್ಷಿ ಪಾಟಿದಾರ್ ?: ಅಗರ-ಮಾಳವಾ ಜಿಲ್ಲೆಯ ನಲ್ಖೇಡಾ ಬಳಿಯ ಭೆಸೋಡಾ ಗ್ರಾಮದಲ್ಲಿ ವಾಸಿಸುತ್ತಿರುವ ರೈತನ ಮಗಳು ಲಿಪಾಕ್ಷಿ ಪಾಟಿದಾರ್. ಇವರು 10 ಮತ್ತು 12ನೇ ತರಗತಿಯಲ್ಲಿ ಶೇ 80 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿದ್ದಾರೆ. ಅವರು ವೈದ್ಯೆಯಾಗುವ ಕನಸನ್ನು ಹೊಂದಿದ್ದಾರೆ. ನೀಟ್​ ಪರೀಕ್ಷೆಯಲ್ಲಿ ಇವರಿಗೆ ಶೂನ್ಯ ಫಲಿತಾಂಶ ಬಂದಿದ್ದು, ಇದೀಗ ನ್ಯಾಯಾಲಯದ ಬಾಗಿಲು ತಟ್ಟಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.