ನವದೆಹಲಿ: ವಿಶ್ವದಲ್ಲೇ ದಿನವೊಂದರಲ್ಲಿ ಪತ್ತೆಯಾದ ಅತೀ ಹೆಚ್ಚು ಕೋವಿಡ್ ಕೇಸ್ಗಳಿಗೆ ಭಾರತ ಸಾಕ್ಷಿಯಾಗುತ್ತಿದ್ದಂತೆಯೇ, ಸೋಂಕು ತಗುಲಿ ಕ್ವಾರಂಟೈನ್ ಆಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರದ ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಟೊಳ್ಳು ಭಾಷಣಗಳು ಮತ್ತು ಅನುಪಯುಕ್ತ ಹಬ್ಬಗಳಲ್ಲ.. ಭಾರತಕ್ಕೆ ಪರಿಹಾರದ ಅವಶ್ಯಕತೆಯಿದೆ" ಎಂದು ಈ ತಿಂಗಳ ಆರಂಭದಲ್ಲಿ ಪಿಎಂ ಮೋದಿ ಕರೆ ನೀಡಿದ್ದ ನಾಲ್ಕು 4 ದಿನಗಳ ಟೀಕಾ ಉತ್ಸವ ಹಾಗೂ ಮಂಗಳವಾರ ಮಾಡಿದ್ದ ಭಾಷಣ ವ್ಯರ್ಥವೆಂದು ಕೈ ನಾಯಕ ಟ್ವೀಟ್ ಮಾಡಿದ್ದಾರೆ.
-
घर पर क्वॉरंटीन हूँ और लगातार दुखद समाचार आ रहे हैं।
— Rahul Gandhi (@RahulGandhi) April 22, 2021 " class="align-text-top noRightClick twitterSection" data="
भारत में संकट सिर्फ़ कोरोना नहीं, केंद्र सरकार की जन विरोधी नीतियाँ हैं।
झूठे उत्सव व खोखले भाषण नहीं, देश को समाधान दो!
">घर पर क्वॉरंटीन हूँ और लगातार दुखद समाचार आ रहे हैं।
— Rahul Gandhi (@RahulGandhi) April 22, 2021
भारत में संकट सिर्फ़ कोरोना नहीं, केंद्र सरकार की जन विरोधी नीतियाँ हैं।
झूठे उत्सव व खोखले भाषण नहीं, देश को समाधान दो!घर पर क्वॉरंटीन हूँ और लगातार दुखद समाचार आ रहे हैं।
— Rahul Gandhi (@RahulGandhi) April 22, 2021
भारत में संकट सिर्फ़ कोरोना नहीं, केंद्र सरकार की जन विरोधी नीतियाँ हैं।
झूठे उत्सव व खोखले भाषण नहीं, देश को समाधान दो!
ಹಿಂದಿಯಲ್ಲಿ ಟ್ವೀಟ್ ಮಾಡಿರುವ ರಾಗಾ, "ನಾನು ಮನೆಯಲ್ಲಿಯೇ ಕ್ವಾರಂಟೈನ್ಗೆ ಒಳಗಾಗಿದ್ದೇನೆ ಮತ್ತು ದೇಶಾದ್ಯಂತ ದುರಂತ ಕಥೆಗಳು ವರದಿಯಾಗುತ್ತಿರುವುದನ್ನು ನೋಡುತ್ತಿದ್ದೇನೆ. ಭಾರತವು ಕೇವಲ ಕೋವಿಡ್ ಬಿಕ್ಕಟ್ಟಿನಿಂದ ಬಳಲುತ್ತಿಲ್ಲ, ಸರ್ಕಾರದ ಜನ ವಿರೋಧಿ ನೀತಿಗಳಿಂದ ಬೇಸತ್ತಿದೆ. ಟೊಳ್ಳಾದ (ಅರ್ಥಹೀನ) ಭಾಷಣಗಳು ಮತ್ತು ಅನುಪಯುಕ್ತ ಹಬ್ಬಗಳು ದೇಶಕ್ಕೆ ಅಗತ್ಯವಿಲ್ಲ, ಪರಿಹಾರದ ಅವಶ್ಯಕತೆಯಿದೆ" ಎಂದು ಹೇಳಿದ್ದಾರೆ.
ಇದನ್ನೂ ಓದಿ: ದೇಶದಲ್ಲಿ ಒಂದೇ ದಿನ 3.14 ಲಕ್ಷ ಸೋಂಕಿತರು ಪತ್ತೆ, 2,104 ಮಂದಿ ಸಾವು
ಭಾರತದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 3,14,835 ಹೊಸ ಕೋವಿಡ್ ಕೇಸ್ಗಳು ದೃಢಪಟ್ಟಿದ್ದು, 2,104 ಸಾವು ವರದಿಯಾಗಿದೆ. ಅನೇಕ ರಾಜ್ಯಗಳಲ್ಲಿ ಆಮ್ಲಜನಕದ ಕೊರತೆಯಿಂದ ಕೊರೊನಾ ರೋಗಿಗಳು ಮೃತಪಡುತ್ತಿದ್ದಾರೆ.