ETV Bharat / bharat

ಎನ್​ಡಿಆರ್​​ಎಫ್​ ಟ್ವಿಟರ್​ ಖಾತೆ ಹ್ಯಾಕ್ : ಡಿಜಿ ಅತುಲ್ ಕರ್ವಾಲ್

author img

By

Published : Jan 23, 2022, 12:03 PM IST

ದೇಶದೊಳಗೆ ಮಾತ್ರವಲ್ಲದೇ ವಿದೇಶಗಳಲ್ಲೂ ಎನ್​ಡಿಆರ್​​ಎಫ್ ಕಾರ್ಯನಿರ್ವಹಿಸಿದೆ. ಜಪಾನ್​ನಲ್ಲಿ 2011ರಲ್ಲಿ ನಡೆದ ಅತಿ ದೊಡ್ಡ ದುರಂತದ ವೇಳೆ ಮತ್ತು 2015ರಲ್ಲಿ ನೇಪಾಳದಲ್ಲಿ ನಡೆದ ಭೂಕಂಪದ ವೇಳೆ ಎನ್​ಡಿಆರ್​​ಎಫ್​ ರಕ್ಷಣೆಗೆ ಧಾವಿಸಿತ್ತು..

NDRF Twitter handle hacked, will look into it right away: DG Atul Karwal
ಎನ್​ಡಿಆರ್​​ಎಫ್​ ಟ್ವಿಟರ್​ ಖಾತೆ ಹ್ಯಾಕ್: ಡಿಜಿ ಅತುಲ್ ಕರ್ವಾಲ್

ನವದೆಹಲಿ : ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಅಧಿಕೃತ ಟ್ವಿಟರ್ ಖಾತೆ ಹ್ಯಾಕ್ ಆಗಿದೆ ಎಂದು ಎನ್​ಡಿಆರ್​ಎಫ್​ ಡೈರೆಕ್ಟರ್ ಜನರಲ್ ಅತುಲ್ ಕರ್ವಾಲ್ ಭಾನುವಾರ ಮಾಹಿತಿ ನೀಡಿದ್ದಾರೆ.

ಜನವರಿ 19ರಂದು 17ನೇ ಸಂಸ್ಥಾಪನಾ ದಿನವನ್ನು ಎನ್​ಡಿಆರ್​ಎಫ್ ಆಚರಿಸಿಕೊಂಡಿದೆ. ಅದಾದ ಕೆಲವೇ ದಿನಗಳಲ್ಲಿ ಅಂದರೆ ಶನಿವಾರ ಟ್ವಿಟರ್​ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಎಎನ್​ಐಗೆ ಮಾಹಿತಿ ನೀಡಿರುವ ಎನ್​ಡಿಆರ್​ಫ್​ ಡಿಜಿ, ನಾವು ಹ್ಯಾಕ್ ಆಗಿರುವ ಖಾತೆಯನ್ನು ಸರಿಪಡಿಸಲು ಮುಂದಾಗಿದ್ದೇವೆ. ಹ್ಯಾಕ್ ಆಗಿರುವ ಖಾತೆಯಿಂದ ಯಾವುದೇ ಟ್ವೀಟ್​ ಮಾಡಲಾಗಿಲ್ಲ. ಬೇರೆ ಟ್ವಿಟರ್​ ಖಾತೆಗಳಂತೆ ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಗೃಹ ಸಚಿವಾಲಯದ ಅಡಿಯಲ್ಲಿ 2006ರಲ್ಲಿ ಸ್ಥಾಪನೆ ಮಾಡಲಾದ ಎನ್​ಡಿಆರ್​ಎಫ್​ ಈವರೆಗೆ 1.44 ಲಕ್ಷ ಮಂದಿಯನ್ನು ರಕ್ಷಿಸಿದ್ದಾರೆ. ಇದರ ಜೊತೆಗೆ ಏಳು ಲಕ್ಷಕ್ಕೂ ಹೆಚ್ಚು ಮಂದಿಯನ್ನು ನೈಸರ್ಗಿಕ ವಿಕೋಪ ಪೀಡಿತ ಪ್ರದೇಶಗಳಿಂದ ಸ್ಥಳಾಂತರ ಮಾಡಿದೆ.

ದೇಶದೊಳಗೆ ಮಾತ್ರವಲ್ಲದೇ ವಿದೇಶಗಳಲ್ಲೂ ಎನ್​ಡಿಆರ್​​ಎಫ್ ಕಾರ್ಯನಿರ್ವಹಿಸಿದೆ. ಜಪಾನ್​ನಲ್ಲಿ 2011ರಲ್ಲಿ ನಡೆದ ಅತಿ ದೊಡ್ಡ ದುರಂತದ ವೇಳೆ ಮತ್ತು 2015ರಲ್ಲಿ ನೇಪಾಳದಲ್ಲಿ ನಡೆದ ಭೂಕಂಪದ ವೇಳೆ ಎನ್​ಡಿಆರ್​​ಎಫ್​ ರಕ್ಷಣೆಗೆ ಧಾವಿಸಿತ್ತು.

ಇದನ್ನೂ ಓದಿ: ನೇತಾಜಿಯವರ 125ನೇ ಜನ್ಮವಾರ್ಷಿಕೋತ್ಸವ: ಮರಳು ಕಲಾಕೃತಿ ಮೂಲಕ ಗೌರವ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.