ನವದೆಹಲಿ : ರಾಷ್ಟ್ರೀಯ ಮಹಿಳಾ ಆಯೋಗದ (ಎನ್‌ಸಿಡಬ್ಲ್ಯು) ಅಧ್ಯಕ್ಷೆ ರೇಖಾ ಶರ್ಮಾ ಅವರು ಪಂಜಾಬ್ ನಿಯೋಜಿತ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ ಅವರ ವಿರುದ್ಧ ಕೇಳಿಬಂದ "#MeToo ಆರೋಪ"ದ ಹಿನ್ನೆಲೆ ಅವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ.
ಅಂತಹ ವ್ಯಕ್ತಿಯನ್ನು ಪಂಜಾಬ್ ಮುಖ್ಯಮಂತ್ರಿಯಾಗಿ ನೇಮಿಸಿರುವುದು ನಾಚಿಕೆಗೇಡಿನ ಸಂಗತಿ ಮತ್ತು ಆಕ್ಷೇಪಾರ್ಹ. ಅವರು ಈ ಕೂಡಲೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ರೇಖಾ ಶರ್ಮಾ ಹೇಳಿದ್ದಾರೆ.
ಪಂಜಾಬ್ ರಾಜ್ಯ ಮಹಿಳಾ ಆಯೋಗವು ಈ ಘಟನೆಯನ್ನು ಅರಿತುಕೊಂಡಿದೆ. 2018ರಲ್ಲಿ ಮಹಿಳಾ ಐಎಎಸ್ ಅಧಿಕಾರಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದಾರೆಂದು ಹೇಳಲಾಗಿದೆ. ಈ ಬಗ್ಗೆ ಅವರ ಮೇಲೆ #MeToo ಆರೋಪಿವಿದೆ. ಚರಣಜಿತ್ ಸಿಂಗ್ ಚನ್ನಿ ಅವರನ್ನು ಪಂಜಾಬ್ ಮುಖ್ಯಮಂತ್ರಿಯಾಗಿ ನೇಮಿಸಿರುವುದನ್ನು ಕಂಡು ನನಗೆ ಆಘಾತ ಮತ್ತು ಸಂಪೂರ್ಣ ನಿರಾಶೆಯಾಗಿದೆ ಎಂದು ರೇಖಾ ಶರ್ಮಾ ಹೇಳಿದ್ದಾರೆ.
ರಾಜ್ಯದಲ್ಲಿ ಮಹಿಳಾ ಸುರಕ್ಷತೆಯ ಸ್ಥಿತಿ ಹೇಗಿರುತ್ತದೆ ಎಂಬುದನ್ನು ಊಹಿಸಬಹುದು. ಒಬ್ಬ ಮಹಿಳೆ ತನ್ನ ಭದ್ರತೆಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ರಾಜ್ಯದಲ್ಲಿ ಐಎಎಸ್ ಅಧಿಕಾರಿಗೆ ನ್ಯಾಯ ಸಿಕ್ಕಿಲ್ಲ ಎನ್ನುವಾಗ ಪಂಜಾಬ್‌ನ ಸಾಮಾನ್ಯ ಮಹಿಳೆಯರು ಸುರಕ್ಷಿತವಾಗಿದ್ದಾರೆಯೇ? ಕಾಂಗ್ರೆಸ್ ಮಹಿಳಾ ಸುರಕ್ಷತೆ ಬಗ್ಗೆ ಖಚಿತ ಪಡಿಸುತ್ತದೆಯೇ? ಸ್ವತಃ ಮಹಿಳೆಯಾಗಿದ್ದರೂ, ಕಾಂಗ್ರೆಸ್‌ನ ಮುಖ್ಯಸ್ಥರು ಚನ್ನಿ ವಿರುದ್ಧ ಮಾಡಿದ #MeToo ಆರೋಪಗಳನ್ನು ಪರಿಗಣಿಸಲಿಲ್ಲ.
ಅವರನ್ನು ಸಿಎಂ ಆಗಿ ನೇಮಿಸಿದರು ಎಂದು ಆಕ್ರೋಶ ಹೊರ ಹಾಕಿದ್ದಾರೆ. ಪಂಜಾಬ್ ಮಹಿಳಾ ಆಯೋಗದ ಅಧ್ಯಕ್ಷೆ ಮನಿಷಾ ಗುಲಾಟಿ ಅವರು ಸರ್ಕಾರ ಈ ಬಗ್ಗೆ ಕ್ರಮ ತೆಗೆದುಕೊಂಡ ವರದಿಯನ್ನು ಕೋರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.