ಮುಂಬೈ: ಪತ್ರಚಾಲ್ ಹಗರಣದಲ್ಲಿ ಶಿವಸೇನಾ ಮುಖಂಡ ಸಂಜಯ್ ರಾವತ್ ಅವರನ್ನು ಇಡಿ ಈಗಾಗಲೇ ಬಂಧಿಸಿ ವಿಚಾರಣೆ ನಡೆಸುತ್ತಿದೆ. ಇದೇ ಪ್ರಕರಣದಲ್ಲಿ ಮತ್ತೊಬ್ಬ ಮಹಾನ್ ನಾಯಕನೂ ಭಾಗಿಯಾಗಿರುವ ಆರೋಪ ಕೇಳಿ ಬಂದಿದ್ದು, ಇಡಿ ಸಲ್ಲಿಸಿದ ಚಾರ್ಜ್ಶೀಟ್ನಲ್ಲಿ ಅವರ ಹೆಸರಿದೆ.
ಪತ್ರಚಾಲ್ ಪುನರಾಭಿವೃದ್ಧಿ ಯೋಜನೆಗೆ ಸಂಬಂಧಿಸಿದಂತೆ 2006 -07 ಸಂಜಯ್ ರಾವತ್ ಅವರು ಆಗಿನ ಕೇಂದ್ರ ಕೃಷಿ ಸಚಿವರ ಜೊತೆಗೂಡಿ ಸಭೆ ನಡೆಸಿದ್ದರು. ಕೇಂದ್ರ ಮಾಜಿ ಸಚಿವರು ಕೂಡ ಇದರಲ್ಲಿ ಭಾಗಿದಾರರು ಎಂದು ಇಡಿ ಸಲ್ಲಿಸಿರುವ ಚಾರ್ಜ್ ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್, ಶಿವಸೇನೆ ಜೊತೆಗೆ ಎನ್ಸಿಪಿ ಸೇರಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಮಾಡಲಾಗಿತ್ತು. ಆದರೆ, ಸಿದ್ಧಾಂತದ ತಿಕ್ಕಾಟದಲ್ಲಿ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಈಗಿನ ಸಿಎಂ ಏಕನಾಥ್ ಶಿಂಧೆ ಬಣ ಸಿಡಿದೆದ್ದು ಸರ್ಕಾರ ಪತನಕ್ಕೆ ಕಾರಣವಾಗಿತ್ತು. ಬಳಿಕದ ಬೆಳವಣಿಗೆಯಲ್ಲಿ ಶಿವಸೇನೆ ಸಂಸದ ಸಂಜಯ್ ರಾವತ್ರನ್ನು ಪತ್ರಚಾಲ್ ಹಗರಣದಲ್ಲಿ ಬಂಧಿಸಲಾಗಿತ್ತು. ಇದೀಗ ಮತ್ತೊಂದು ಪ್ರಮುಖ ಪಕ್ಷದ ನಾಯಕನಿಗೂ ಪ್ರಕರಣ ಉರುಳಾಗುವ ಸಾಧ್ಯತೆ ಇದೆ.
ಓದಿ: ಕೇಸರಿ ಪಡೆ ಸೇರಿದ ಕ್ಯಾಪ್ಟನ್ ಅಮರಿಂದರ್ ಸಿಂಗ್: ಪಂಜಾಬ್ ಲೋಕ ಕಾಂಗ್ರೆಸ್ ವಿಲೀನ