ETV Bharat / bharat

ಶಾಲಾ ಪುಸ್ತಕಗಳಲ್ಲಿ 'ಇಂಡಿಯಾ' ಬದಲಿಗೆ 'ಭಾರತ' ಪದ ಬಳಸಿ: NCERT ಸಮಿತಿ ಶಿಫಾರಸು - Bharat in school textbooks

ಶಾಲಾ ಪಠ್ಯಪುಸ್ತಕದಲ್ಲಿ ಇಂಡಿಯಾ ಪದದ ಜಾಗದಲ್ಲಿ ಭಾರತ ಅಳವಡಿಕೆಗೆ ಎನ್‌ಸಿಇಆರ್‌ಟಿ ಉನ್ನತ ಮಟ್ಟದ ಸಮಿತಿ ಶಿಫಾರಸು ಮಾಡಿದೆ.

NCERT ಸಮಿತಿ ಶಿಫಾರಸು
NCERT ಸಮಿತಿ ಶಿಫಾರಸು
author img

By PTI

Published : Oct 25, 2023, 6:06 PM IST

Updated : Oct 25, 2023, 7:07 PM IST

ನವದೆಹಲಿ: INDIA ಮತ್ತು ಭಾರತ ಹೆಸರು ಮತ್ತೆ ಮುನ್ನೆಲೆಗೆ ಬಂದಿದೆ. ಜಿ20 ಶೃಂಗಸಭೆ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಆಸನದ ಮುಂದೆ ಮತ್ತು ಗಣ್ಯರಿಗೆ ರಾಷ್ಟ್ರಪತಿಗಳ ಆಹ್ವಾನ ಪತ್ರಿಕೆಯಲ್ಲಿ 'ಭಾರತ' ಎಂದಿರುವುದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಶಾಲಾ ಪಠ್ಯಕ್ರಮಗಳಲ್ಲಿ ಇಂಡಿಯಾ ಬದಲಿಗೆ ಭಾರತ ಎಂದು ಬದಲಿಸಲು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯ (ಎನ್‌ಸಿಇಆರ್‌ಟಿ) ಉನ್ನತ ಸಮಿಯು ಶಿಫಾರಸು ಮಾಡಿದೆ.

ಸಮಿತಿಯ ಅಧ್ಯಕ್ಷ ಸಿಐ ಐಸಾಕ್ ಅವರು ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, INDIA ಎಂಬ ಹೆಸರನ್ನು ಶಾಲಾ ಪಠ್ಯಕ್ರಮದಿಂದ ತೆಗೆದು 'ಭಾರತ' ಎಂದು ಬರೆಯಲು ಸೂಚಿಸಲಾಗಿದೆ. ಜೊತೆಗೆ 'ಪ್ರಾಚೀನ ಇತಿಹಾಸ'ವನ್ನು ತೆಗೆದುಹಾಕಿ ಅದರ ಬದಲಿಗೆ 'ಶಾಸ್ತ್ರೀಯ ಇತಿಹಾಸ'ವನ್ನು ಮಕ್ಕಳಿಗೆ ಕಲಿಸುವ ಬಗ್ಗೆಯೂ ಶಿಫಾರಸು ಮಾಡಲಾಗಿದೆ ಎಂದು ಹೇಳಿದರು.

ಇಂಡಿಯಾ ಬ್ರಿಟಿಷರು ಕೊಟ್ಟ ಪದ: ಎನ್‌ಸಿಇಆರ್‌ಟಿಯ ಏಳು ಸದಸ್ಯರ ಸಮಿತಿಯು ಈ ಎಲ್ಲಾ ಶಿಫಾರಸುಗಳನ್ನು ಸರ್ವಾನುಮತದಿಂದ ಅಂಗೀಕರಿಸಿದೆ. ಭಾರತ ಎಂಬ ಹೆಸರು ಪ್ರಾಚೀನ ಕಾಲದಿಂದ ಬಂದಿದೆ. 7 ಸಾವಿರ ವರ್ಷಗಳಷ್ಟು ಹಳೆಯದಾದ ವಿಷ್ಣು ಪುರಾಣದಂತಹ ಪ್ರಾಚೀನ ಗ್ರಂಥಗಳಲ್ಲಿ 'ಭಾರತ' ಎಂಬ ಹೆಸರಿದೆ. 'ಈಸ್ಟ್ ಇಂಡಿಯಾ ಕಂಪನಿಯ ಸ್ಥಾಪನೆ, 1757ರಲ್ಲಿ ಪ್ಲಾಸಿ ಕದನದ ನಂತರವೇ INDIA ಎಂಬ ಪದವು ಬಳಕೆಗೆ ಬಂದಿತು. ಆದ್ದರಿಂದ ಎಲ್ಲ ವರ್ಗದ ಪುಸ್ತಕಗಳಲ್ಲಿ INDIA ಬದಲಿಗೆ ಭಾರತ ಎಂಬ ಹೆಸರನ್ನು ಬಳಸಬೇಕು ಎಂದು ಸಮಿತಿ ಒಮ್ಮತದಿಂದ ಸೂಚಿಸಿದೆ.

ಬ್ರಿಟಿಷರು ಭಾರತೀಯ ಇತಿಹಾಸವನ್ನು ಮೂರು ಹಂತಗಳಾಗಿ ವಿಂಗಡಿಸಿದ್ದಾರೆ. ಪ್ರಾಚೀನ, ಮಧ್ಯಕಾಲೀನ ಮತ್ತು ಆಧುನಿಕ ಇದರಲ್ಲಿ ಭಾರತವನ್ನು ಕತ್ತಲೆಯಲ್ಲಿ ತೋರಿಸಲಾಗಿದೆ. ವೈಜ್ಞಾನಿಕ ಜ್ಞಾನ ಮತ್ತು ಪ್ರಗತಿಯ ಅಜ್ಞಾನ. ಆದಾಗ್ಯೂ, ಆ ಯುಗದಲ್ಲಿ ಭಾರತದ ಸಾಧನೆಗಳ ಅನೇಕ ಉದಾಹರಣೆಗಳು ಸೌರವ್ಯೂಹದ ಮಾದರಿಯಲ್ಲಿ ಆರ್ಯಭಟನ ಕೆಲಸವನ್ನು ಒಳಗೊಂಡಿವೆ.

ಎನ್‌ಸಿಇಆರ್‌ಟಿಯು ರಾಷ್ಟ್ರೀಯ ಶಿಕ್ಷಣ ನೀತಿಗೆ (ಎನ್‌ಇಪಿ) ಅನುಗುಣವಾಗಿ ಶಾಲಾ ಪಠ್ಯಪುಸ್ತಕಗಳ ಪಠ್ಯಕ್ರಮವನ್ನು ಪರಿಷ್ಕರಿಸುತ್ತಿದೆ. ರಾಷ್ಟ್ರೀಯ ಪಠ್ಯಕ್ರಮ ಮತ್ತು ಬೋಧನಾ ಕಲಿಕಾ ಸಾಮಗ್ರಿ ಸಮಿತಿಯು (ಎನ್‌ಎಸ್‌ಟಿಸಿ) ಪಠ್ಯಕ್ರಮ, ಪುಸ್ತಕಗಳು ಮತ್ತು ಕಲಿಕಾ ಸಾಮಗ್ರಿಗಳನ್ನು ಅಂತಿಮಗೊಳಿಸಲು 21 ಸಮಿತಿಗಳನ್ನು ರಚಿಸಿದೆ. ಅದರಲ್ಲಿ ನಮ್ಮ ಸಮಿತಿಯೂ ಒಂದಾಗಿದೆ ಎಂದು ಐಸಾಕ್​ ತಿಳಿಸಿದರು. ಭಾರತೀಯ ಇತಿಹಾಸದ ಶಾಸ್ತ್ರೀಯ ಅವಧಿಯನ್ನು ಶಾಲೆಗಳಲ್ಲಿ ಮಧ್ಯಕಾಲೀನ ಮತ್ತು ಆಧುನಿಕ ಅವಧಿಗಳೊಂದಿಗೆ ಕಲಿಸಬೇಕೆಂದು ನಾವು ಸೂಚಿಸಿದ್ದೇವೆ ಎಂದು ಐಸಾಕ್ ಹೇಳಿದರು.

ಸಮಿತಿಯ ಸದಸ್ಯರಿವರು: ಸಮಿತಿಯಲ್ಲಿ ಐಸಿಎಚ್‌ಆರ್ ಅಧ್ಯಕ್ಷ ರಘುವೇಂದ್ರ ತನ್ವಾರ್, ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ಪ್ರಾಧ್ಯಾಪಕಿ ವಂದನಾ ಮಿಶ್ರಾ, ಡೆಕ್ಕನ್ ಕಾಲೇಜ್ ಡೀಮ್ಡ್ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ವಸಂತ ಶಿಂಧೆ ಮತ್ತು ಹರಿಯಾಣ ಸರ್ಕಾರಿ ಶಾಲೆಯ ಸಮಾಜಶಾಸ್ತ್ರ ಬೋಧಕಿ ಮಮತಾ ಯಾದವ್ ಇದ್ದಾರೆ.

ಯಾವುದೇ ನಿರ್ಧಾರವಾಗಿಲ್ಲ: ಇದೇ ವೇಳೆ ಕೆಲ ಪದಗಳ ಬದಲಿಗೆ ಸಮಿತಿ ಮಾಡಿರುವ ಶಿಫಾರಸುಗಳ ಬಗ್ಗೆ ಇನ್ನೂ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ಎನ್‌ಸಿಇಆರ್‌ಟಿ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಹಾಸ್ಟೆಲ್‌ನ ಸಾಧಾರಣ ಕೊಠಡಿಯಲ್ಲಿ ವಾಸ, ಹಳೆಯ ಸೈಕಲ್‌ ಸವಾರಿ: ಇಸ್ರೋ ಅಧ್ಯಕ್ಷರ ಆತ್ಮಚರಿತ್ರೆ​ ಶೀಘ್ರದಲ್ಲೇ ಮಾರುಕಟ್ಟೆಗೆ

Last Updated : Oct 25, 2023, 7:07 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.