ETV Bharat / bharat

ಆರ್ಯನ್ ಖಾನ್ ಡ್ರಗ್ಸ್ ಕೇಸ್.. ಪ್ರಮುಖ ಸಾಕ್ಷಿ ಪ್ರಭಾಕರ್​​ ಸೈಲ್ ಹೃದಯಾಘಾತದಿಂದ ಮೃತ - ಕಿರಣ್ ಗೋಸಾವಿ ಅಂಗರಕ್ಷಕ ಪ್ರಭಾಕರ್ ಸೈಲ್ ಮೃತ

ಬಾಲಿವುಡ್​ನಲ್ಲಿ ಸಂಚಲನ ಸೃಷ್ಟಿಸಿದ್ದ ಆರ್ಯನ್ ಖಾನ್ ಡ್ರಗ್ಸ್ ಕೇಸ್​ನ ಮುಖ್ಯ ಸಾಕ್ಷಿದಾರ ಮತ್ತು ಕಿರಣ್ ಗೋಸಾವಿ ಅವರ ಅಂಗರಕ್ಷಕರಾಗಿದ್ದ ಪ್ರಭಾಕರ್​​ ಸೈಲ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

NCB witness in Cordelia cruise drug case Prabhakar Sail dies
ಕಾರ್ಡೆಲಿಯಾ ಡ್ರಗ್ಸ್ ಪ್ರಕರಣ: ಪ್ರಮುಖ ಸಾಕ್ಷಿ ಪ್ರಭಾಕರ್​​ ಸೈಲ್ ಹೃದಯಾಘಾತದಿಂದ ಮೃತ
author img

By

Published : Apr 2, 2022, 9:57 AM IST

ಮುಂಬೈ(ಮಹಾರಾಷ್ಟ್ರ): ಬಾಲಿವುಡ್​ನಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿದ್ದ ಕಾರ್ಡೆಲಿಯಾ ಕ್ರೂಸ್ ಡ್ರಗ್ ಪ್ರಕರಣದ ತನಿಖೆ ಇನ್ನೂ ನಡೆಯುತ್ತಿದೆ. ಈ ಪ್ರಕರಣದ ತನಿಖೆಯನ್ನು ಎನ್‌ಸಿಬಿ ಕೈಗೊಂಡಿದ್ದು, ಈ ಪ್ರಕರಣದ ಸಾಕ್ಷಿಯಾಗಿದ್ದ ಪ್ರಭಾಕರ್ ಸೈಲ್ ಶುಕ್ರವಾರ ನಿಧನರಾಗಿದ್ದಾರೆ. ಪ್ರಭಾಕರ ಸೈಲ್ ಅವರ ವಕೀಲರಾದ ತುಷಾರ್ ಖಂಡಾರೆ ಅವರ ಪ್ರಕಾರ, ಪ್ರಭಾಕರ್ ಸೈಲ್​ ಚೆಂಬೂರಿನ ಮಹುಲ್ ಪ್ರದೇಶದ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಡ್ರಗ್ಸ್ ಪತ್ತೆ ಪ್ರಕರಣದಲ್ಲಿ ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಕೂಡಾ ಆರೋಪಿಯಾಗಿದ್ದು, ಇದೇ ವೇಳೆ ಪ್ರಭಾಕರ್​ ಸೈಲ್​ ಕೂಡಾ ಬೆಳಕಿಗೆ ಬಂದಿದ್ದರು. ಡ್ರಗ್ಸ್ ಪ್ರಕರಣದ ಪ್ರಮುಖ ವ್ಯಕ್ತಿಯಾದ ಕಿರಣ್ ಗೋಸಾವಿ ಅವರ ಅಂಗರಕ್ಷಕರಾಗಿದ್ದ ಪ್ರಭಾಕರ್ ಸೈಲ್ ಅವರು ಎನ್​ಸಿಬಿ ಅಧಿಕಾರಿ ಸಮೀರ್​ ವಾಂಖೆಡೆ ವಿರುದ್ಧ ಸುಲಿಗೆ ಆರೋಪ ಮಾಡಿದ್ದರು.

ಪ್ರಭಾಕರ್ ಸೈಲ್ ಅವರ ಮೃತದೇಹವನ್ನು ಶನಿವಾರ ಬೆಳಗ್ಗೆ 11 ಗಂಟೆಗೆ ಅಂಧೇರಿಯಲ್ಲಿರುವ ಅವರ ಮನೆಗೆ ತಂದು ಅಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ತಿಳಿದುಬಂದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಇದನ್ನೂ ಓದಿ: ಪೊಲೀಸರ ಸೂಚನೆಗೆ ಕ್ಯಾರೇ ಎನ್ನದ ಕ್ರಿಮಿನಲ್ಸ್​.. ಎನ್​ಕೌಂಟರ್​ಗೆ ಮೂವರು ಬಲಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.