ಮುಂಬೈ: ಡ್ರಗ್ಸ್ ಪ್ರಕರಣ ಸಂಬಂಧ ಬಾಲಿವುಡ್ ನಿರ್ದೇಶಕ ಕರಣ್ ಜೋಹರ್‌ಗೆ ಮಾದಕವಸ್ತುಗಳ ನಿಯಂತ್ರಣ ದಳ-ಎನ್‌ಸಿಬಿ ಸಮನ್ಸ್ ಜಾರಿ ಮಾಡಿದೆ. ಅಕಾಲಿದಳ ನಾಯಕ ಮಜಿಂದರ್ ಸಿಂಗ್ ನೀಡಿರುವ ದೂರಿನ ಮೇರೆಗೆ ಎನ್‌ಸಿಬಿ ವಿಚಾರಣೆಗೆ ಹಾಜರಾಗುವಂತೆ ಕರಣ್ ಗೆ ಸಮನ್ಸ್ ನೀಡಿದೆ.
2019ರಲ್ಲಿ ಕರಣ್ ಜೋಹರ್ ನೀಡಿದ್ದ ಪಾರ್ಟಿಯಲ್ಲಿ ಬಾಲಿವುಟ್ ಸ್ಟಾರ್‌ಗಳಾದ ದೀಪಿಕಾ ಪಡುಕೋಣೆ, ವಿಕ್ಕಿ ಕೌಶಲ್, ಮಲೈಕಾ ಆರೋರಾ, ವರುಣ್ ಧವನ್, ಅರ್ಜುನ್ ಕಪೂರ್, ಶಾಹೀದ್ ಕಪೂರ್ ಭಾಗವಹಿಸಿ ಡ್ರಗ್ಸ್ ಸೇವಿಸಿದ್ದಾರೆ ಎಂದು ಮಜಿಂದರ್ ದೂರುನಲ್ಲಿ ಉಲ್ಲೇಖಿಸಿದ್ದಾರೆ. ಪಾರ್ಟಿ ನೀಡಿದ್ದ ವಿಡಿಯೋ ವೈರಲ್ ಆಗಿತ್ತು.
ಹೀಗಾಗಿ ಪಾರ್ಟಿಗೆ ಸಂಬಂಧಿಸಿದ ಪ್ರಮಾಣ ಪತ್ರಗಳು, ಎಲೆಕ್ಟ್ರಾನಿಕ್ ಉಪಕರಣಗಳು, ವಿಡಿಯೋ ದೃಶ್ಯಾವಳಿಗಳನ್ನು ನೀಡಬೇಕು ಎಂದು ಕರಣ್‌ಗೆ ಎನ್‌ಸಿಬಿ ಸೂಚಿಸಿದೆ.
ಪಾರ್ಟಿ ಬಗ್ಗೆ ಕರಣ್ ಜೋಹರ್ ವಿವರಣೆ ನೀಡಿದ್ದು, ನಟ-ನಟಿಯರು ಯಾವುದೇ ರೀತಿಯ ಮಾದಕ ದ್ರವ ಸೇವಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.