ETV Bharat / bharat

ಡ್ರಗ್ಸ್​​ ಖರೀದಿಗೆ ಕ್ರಿಪ್ಟೋ ಕರೆನ್ಸಿ ಬಳಸುತ್ತಿದ್ದ ಶಾರುಖ್ ಖಾನ್ ಪುತ್ರ: ಎನ್​​ಸಿಬಿ​

ಕೆಲವು ಮೂಲಗಳ ಪ್ರಕಾರ, ಬಾಲಿವುಡ್ ನಟ ಶಾರುಖ್​ ಖಾನ್ ಪುತ್ರ ಆರ್ಯನ್ ಖಾನ್, ಅರ್ಬಾಜ್ ಸೇಠ್ ಮರ್ಚೆಂಟ್ ಮತ್ತು ಮುನ್ಮುನ್ ಧಮೇಚಾ ಅವರು ಕ್ರೂಸ್​ಶಿಪ್​ನಲ್ಲಿ ಡ್ರಗ್ಸ್ ಸಾಗಿಸುತ್ತಿದ್ದಾಗಿ ಒಪ್ಪಿಕೊಂಡಿದ್ದಾರೆ.

NCB arrest eight more in drugs-on-cruise case
ಆರ್ಯನ್ ಡ್ರಗ್ಸ್​​ ಖರೀದಿಗೆ ಕ್ರಿಪ್ಟೋ ಕರೆನ್ಸಿ, ವಾಟ್ಸ್ಆ್ಯಪ್ ಕೋಡ್​ ಬಳಸುತ್ತಿದ್ದ: ಎನ್​​ಸಿಬಿ​
author img

By

Published : Oct 6, 2021, 8:28 AM IST

Updated : Oct 6, 2021, 12:59 PM IST

ಮುಂಬೈ(ಮಹಾರಾಷ್ಟ್ರ): ಕ್ರೂಸ್ ಶಿಪ್​​ನಲ್ಲಿ ಡ್ರಗ್ಸ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಎಂಟು ಮಂದಿಯನ್ನು ಬಂಧಿಸಲಾಗಿದೆ. ಈವರೆಗೆ ಪ್ರಕರಣದಲ್ಲಿ ಬಂಧಿತರಾದವರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ. ಅವರಲ್ಲಿ ಕೆಲವರನ್ನು ಅಕ್ಟೋಬರ್ 11ರವರೆಗೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ವಶಕ್ಕೆ ನೀಡಲಾಗಿದೆ.

ಕ್ರೂಸ್​ ಶಿಪ್​​ನಲ್ಲಿ ಪಾರ್ಟಿ ಮಾಡುತ್ತಿದ್ದ ಆರೋಪದ ಮೇಲೆ ಅಬ್ದುಲ್ ಶೇಖ್, ಶ್ರೇಯಸ್ ನಾಯರ್, ಮನೀಶ್ ರಾಜ್‌ಗರಿಯಾ, ಅವಿನ್ ಶಾಹು, ಸಮೀರ್ ಸೈಗಲ್, ಅಂದನ್ ಗೋಪಾಲ್, ಭಾಸ್ಕರ್ ಮತ್ತು ಇನ್ನೋರ್ವ ಅಪರಿಚಿತ ವ್ಯಕ್ತಿಯನ್ನು ಎನ್​ಸಿಬಿ​ ಬಂಧಿಸಿದೆ.

ಇವರ ಪೈಕಿ ಅಬ್ದುಲ್ ಶೇಖ್, ಶ್ರೇಯಸ್ ನಾಯರ್, ಮನೀಶ್ ರಾಜ್‌ಗರಿಯಾ, ಅವಿನ್ ಶಾಹು ಅವರನ್ನು ಅಕ್ಟೋಬರ್ 11ರವರೆಗೆ ಎನ್​ಸಿಬಿ ತನ್ನ ವಶದಲ್ಲಿಟ್ಟುಕೊಂಡು ವಿಚಾರಣೆ ನಡೆಸಲಿದೆ. ಇನ್ನುಳಿದವರನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಕ್ರಿಪ್ಟೋಕರೆನ್ಸಿ ಮತ್ತು ವಾಟ್ಸ್​​ಆ್ಯಪ್ ಕೋಡ್​​ವರ್ಡ್​

ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಖರೀದಿಗೆ ಕ್ರಿಪ್ಟೋ ಕರೆನ್ಸಿ ಬಳಸುತ್ತಿದ್ದ ಎಂದು ಎನ್​ಸಿಬಿ ಮಾಹಿತಿ ಬಹಿರಂಗಪಡಿಸಿದೆ. ಇದರ ಜೊತೆಗೆ ವಾಟ್ಸ್​ಆ್ಯಪ್ ಕೋರ್ಡ್​ ವರ್ಡ್​ ಅನ್ನು ಡ್ರಗ್ಸ್​ ಖರೀದಿಯನ್ನು ಗುಪ್ತವಾಗಿಡಲು ಬಳಸಲಾಗುತ್ತಿತ್ತು ಎಂದು ಎನ್​ಸಿಬಿ ಹೇಳಿದೆ.

ಆರ್ಯನ್ ಖಾನ್ ವಿಚಾರಣೆ ನಡೆಸುತ್ತಿದ್ದಂತೆ ಕೆಲವೊಂದು ವಿಚಾರಗಳು ಅಂತಾರಾಷ್ಟ್ರೀಯ ಡ್ರಗ್ ಪೆಡ್ಲರ್​ಗೂ ಸಂಬಂಧವಿದೆಯಾ ಎಂಬ ಅನುಮಾನಗಳು ಎನ್​ಸಿಬಿಯನ್ನು ಕಾಡುತ್ತಿವೆ. ಆರ್ಯನ್ ಮತ್ತು ಮತ್ತೊಬ್ಬ ಆರೋಪಿಯಾದ ಅರ್ಬಾಜ್ ಮರ್ಚೆಂಟ್ ಅವರ ವಾಟ್ಸ್​​ ಆ್ಯಪ್ ಚಾಟ್ ಪರಿಶೀಲನೆ ನಡೆಸಿದಾಗ ಡ್ರಗ್ಸ್ ತರಿಸಿಕೊಂಡಿರುವುದಕ್ಕೆ ಪುರಾವೆಗಳು ದೊರೆತಿವೆ. ಆರ್ಯನ್ ಅರ್ಬಾಜ್​​ನನ್ನು ಡ್ರಗ್ಸ್ ತರಲು ಕೇಳಿದ ಚಾಟ್​ ಕೂಡಾ ಎನ್​ಸಿಬಿಗೆ ಸಿಕ್ಕಿದೆ ಎಂದು ಎನ್​​ಸಿಬಿ ಮೂಲಗಳು ಹೇಳಿವೆ.

ಕ್ರೂಸ್‌ನ ಸಿಇಒ ವಿಚಾರಣೆ

ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಡೆಲಿಯಾ ಕ್ರೂಸ್‌ನ ಸಿಇಒ ಜುರ್ಗೆನ್ ಬೆಲೋಮ್ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಕೆಲವು ಮೂಲಗಳ ಪ್ರಕಾರ ಆರ್ಯನ್ ಖಾನ್, ಅರ್ಬಾಜ್ ಸೇಠ್ ಮರ್ಚೆಂಟ್ ಮತ್ತು ಮುನ್ಮುನ್ ಧಮೇಚಾ ಅವರು ಕ್ರೂಸ್​ಶಿಪ್​ನಲ್ಲಿ ಡ್ರಗ್ಸ್ ಸಾಗಿಸುತ್ತಿದ್ದಾಗಿ ಒಪ್ಪಿಕೊಂಡಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಹಡಗು ರವಾನೆ ವಿಭಾಗದ ಮಹಾನಿರ್ದೇಶಕ ಅಮಿತಾಬ್ ಕುಮಾರ್, ಕ್ರೂಸ್ ಶಿಪ್​ ಮುಂಬೈನಿಂದ ಗೋವಾಕ್ಕೆ ತೆರಳಲು ಅನುಮತಿ ನೀಡಿರಲಿಲ್ಲ. ಮರ್ಚೆಂಟ್ ಶಿಪ್ಪಿಂಗ್ ಕಾಯ್ದೆಯ ಸೆಕ್ಷನ್ 406 ರ ಪ್ರಕಾರ, ಪ್ರಯಾಣಕ್ಕೆ ಅನುಮತಿ ಪಡೆಯಬೇಕಾಗಿತ್ತು ಎಂದಿದ್ದಾರೆ. ಹಡಗು ರವಾನೆ ವಿಭಾಗದ ಉಪ ಮಹಾನಿರ್ದೇಶಕ ಮೊಹಮ್ಮದ್ ಪ್ರತಿಕ್ರಿಯೆ ನೀಡಿ, ಈ ಕುರಿತು ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.

ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಸಂಚಲನ ಸೃಷ್ಟಿಸಿದ ಉಗ್ರರ ದಾಳಿ: ಪ್ರಸಿದ್ಧ ಕೆಮಿಸ್ಟ್ ಸೇರಿ ಮೂವರ ಸಾವು

Last Updated : Oct 6, 2021, 12:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.