ಬಿಜಾಪುರ(ಛತ್ತೀಸ್‌ಗಢ): ಮಾವೋವಾದಿ ಗುಂಪಿಗೆ ಸೇರಿದ ಮೂವರು ನಕ್ಸಲರನ್ನು ಛತ್ತೀಸ್‌ಗಢದ ಬಸ್ತಾರ್ ವಿಭಾಗದ ಬಿಜಾಪುರ ಜಿಲ್ಲೆಯಲ್ಲಿ ಹೊಡೆದುರುಳಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಿಪಿಐಗೆ ಸಂಬಂಧಿಸಿದ ಮೂವರು ನಕ್ಸಲರನ್ನು ಭದ್ರತಾ ಪಡೆಗಳು ಕೊಂದಿರುವುದಾಗಿ ಸ್ಥಳೀಯ ಪೊಲೀಸರಿಗೆ ಮಾಹಿತಿ ದೊರೆತಿರುವುದಾಗಿ ಬಸ್ತಾರ್ ರೇಂಜ್‌ನ ಐಜಿಪಿ ಪಿ.ಸುಂದರರಾಜ್ ಮಾಹಿತಿ ನೀಡಿದ್ದಾರೆ.
ಜನವರಿ 6ರಂದು ಮೂವರನ್ನು ಕೊಲ್ಲಲಾಗಿದೆ ಎಂಬ ಮಾಹಿತಿ ದೊರೆತಿದ್ದು, ಕಮ್ಲು ಪುನೆಮ್ ಮತ್ತು ಮಂಗಿ ಎಂಬ ಇಬ್ಬರನ್ನು ಹೊಡೆದುರುಳಿಸಲಾಗಿದ್ದು, ಅವರಿಬ್ಬರೂ ವಿವಾಹವಾಗಲು ನಕ್ಸಲ್ ಕ್ಯಾಂಪ್ನಿಂದ ಹೊರ ಬಂದಿದ್ದರು ಎಂದು ತಿಳಿದು ಬಂದಿದೆ.
ಮೂರನೇ ನಕ್ಸಲ್ ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ. ಈ ವ್ಯಕ್ತಿಯ ಬಗ್ಗೆ ಮಾಹಿತಿ ಸಂಗ್ರಹಣೆ ಮಾಡಲು ಬಿಜಾಪುರ ಪೊಲೀಸರು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ನಕ್ಸಲರು ಸಾಕಷ್ಟು ಹತಾಶೆಯನ್ನು ಅನುಭವಿಸುತ್ತಿದ್ದು, ಇತ್ತೀಚಿನ ಪೊಲೀಸ್ ಕಾರ್ಯಾಚರಣೆಯಿಂದಾಗಿ ದಿಕ್ಕಿಲ್ಲದಂತಾಗಿದ್ದಾರೆ. ಅನುಮಾನಗಳ ಆಧಾರದ ಮೇಲೆ ನಕ್ಸಲ್ ಸಮುದಾಯಕ್ಕೆ ಸೇರಿದ ಬೇರೆಯವರನ್ನೂ ಕೊಲ್ಲುತ್ತಿದ್ದಾರೆ ಎಂದು ಪಿ.ಸುಂದರರಾಜ್ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಭಾರತದಲ್ಲಿ ಮುಂದಿನ ತಿಂಗಳು ಕೋವಿಡ್ ಉತ್ತುಂಗಕ್ಕೆ.. ದಿನಕ್ಕೆ 5ಲಕ್ಷ ಕೇಸ್ ಸಾಧ್ಯತೆ: ಶಾಕಿಂಗ್ ಕೊಟ್ಟ ಆರೋಗ್ಯ ತಜ್ಞ!