ಧಮ್ತಾರಿ (ಛತ್ತೀಸ್ಗಢ): ಕಳೆದ ರಾತ್ರಿ ಛತ್ತೀಸ್‌ಗಢದ ಧಮ್ತಾರಿ ಜಿಲ್ಲೆಯಲ್ಲಿ 35 ವರ್ಷದ ಯುವಕನನ್ನು ನಕ್ಸಲರು ಹತ್ಯೆ ಮಾಡಿದ್ದಾರೆ. ಈ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ.
ಕೇಶರಿ ಸೂರಿ ಎಂಬ ಯುವಕನನ್ನು ನಕ್ಸಲರು ಹತ್ಯೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಘಟನೆ ಸಂಬಂಧ ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಪ್ರಫುಲ್ ಠಾಕೂರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಹೆಚ್ಚಿನ ಓದಿಗೆ: ಪೆಗಾಸಸ್ ಗೂಢಚರ್ಯೆ: ಗುರುವಾರ ಅರ್ಜಿ ವಿಚಾರಣೆ ನಡೆಸಲಿರುವ ಸುಪ್ರಿಂಕೋರ್ಟ್
ಬೋರೈ ಪೊಲೀಸ್ ಠಾಣೆಯ ಕರಿಪಾನಿಯಲ್ಲಿ ನಕ್ಸಲೈಟ್ ಬ್ಯಾನರ್ ಪೋಸ್ಟರ್ ಪತ್ತೆಯಾಗಿದೆ. ಹಾಗೆ ಜುಲೈ 28ರಿಂದ ಆಗಸ್ಟ್ 3ರವರೆಗೆ ಅವರು ಹುತಾತ್ಮ ದಿನ ಆಚರಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.