ETV Bharat / bharat

ಛತ್ತೀಸ್‌ಗಢದಲ್ಲಿ ಇಬ್ಬರು ನಕ್ಸಲೀಯರ ಎನ್‌ಕೌಂಟರ್‌ - ನಕ್ಸಲೀಯರ ಮೇಲೆ ಗುಂಡಿನ ದಾಳಿ

ನಕ್ಸಲೀಯರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಇಬ್ಬರು ನಕ್ಸಲರು ಹತರಾಗಿದ್ದಾರೆ.

ನಕ್ಸಲೀಯರ ಮೇಲೆ ಗುಂಡಿನ ದಾಳಿ
ನಕ್ಸಲೀಯರ ಮೇಲೆ ಗುಂಡಿನ ದಾಳಿ
author img

By

Published : May 8, 2023, 12:39 PM IST

ಸುಕ್ಮಾ (ಛತ್ತೀಸ್‌ಗಢ): ಇಂದು ಬೆಳಗ್ಗೆ ಇಲ್ಲಿನ ಭೇಸಾಯಿ ಪ್ರದೇಶದಲ್ಲಿ ಜಿಲ್ಲಾ ಮೀಸಲು ಗಾರ್ಡ್‌ಗಳ (ಡಿಆರ್‌ಜಿ) ಪಡೆ ಮತ್ತು ನಕ್ಸಲೀಯರ ನಡುವೆ ನಡೆದ ಗುಂಡಿನ ದಾಳಿಯಲ್ಲಿ ಮಹಿಳೆ ಸೇರಿದಂತೆ ಇಬ್ಬರು ನಕ್ಸಲರನ್ನು ಹತ್ಯೆ ಮಾಡಲಾಗಿದೆ. ಮಾವೋವಾದಿಗಳ ಹುಡುಕಾಟದ ವೇಳೆ ಡಿಆರ್‌ಜಿ ಮೇಲೆ ನಕ್ಸಲೀಯರು ಗುಂಡಿನ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿದಾಳಿ ನಡೆಸಿದ ಡಿಆರ್​ಜಿ ಇಬ್ಬರು ಮಾವೋವಾದಿಗಳನ್ನು ಹೊಡೆದುರುಳಿಸಿದೆ.

ನಕ್ಸಲಿಯರ ಹತ್ಯೆಯನ್ನು ಸುಕ್ಮಾ ಎಸ್ಪಿ ಸುನಿಲ್ ಶರ್ಮಾ ಖಚಿತಪಡಿಸಿದ್ದು, ಘಟನೆ ಬಗ್ಗೆ ವಿವರ ನೀಡಿದ್ದಾರೆ. ಜಿಲ್ಲೆಯ ಧನ್ತೇರಸ್ ಪುರಂ ಅರಣ್ಯದಲ್ಲಿ ಗೊಲ್ಲಪಲ್ಲಿ ಎಲ್​ಒಎಸ್ (ನಕ್ಸಲ್​) ಕಮಾಂಡರ್ ಮಡ್ಕಂ ಎರ್ರಾ ಮತ್ತು ಇತರ ನಕ್ಸಲೀಯರು ಇರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಖಚಿತ ಮಾಹಿತಿಯ ಮೇರೆಗೆ ಡಿಆರ್​ಜಿ, ಕೋಬ್ರಾ, ಸಿಆರ್​ಪಿಎಫ್​ ಪಡೆಗಳ ಜಂಟಿ ಕಾರ್ಯಾಚರಣೆ ಆರಂಭಿಸಿದ್ದವು. ನಕ್ಸಲಿಯರಿರುವ ಪ್ರದೇಶದಲ್ಲಿ ಹುಡುಕಾಟ ಮಾಡಿದ್ದು, ಯಾರೊಬ್ಬರೂ ಪತ್ತೆಯಾಗಿರಲಿಲ್ಲ. ನಂತರ ಕಾರ್ಯಾಚರಣೆ ಮುಗಿಸಿ ಈ ಪಡೆಗಳು ಹಿಂತಿರುಗುತ್ತಿದ್ದಾಗ ನಕ್ಸಲೀಯರು ಡಿಆರ್​ಜಿ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.

ಇದಕ್ಕೆ ಪ್ರತಿಯಾಗಿ ಡಿಆರ್‌ಜಿ ಸಿಬ್ಬಂದಿ ದಾಳಿ ನಡೆಸಿದ್ದಾರೆ. ಡಿಆರ್‌ಜಿ ಯೋಧರ ದಾಳಿಗೆ ಇಬ್ಬರು ನಕ್ಸಲಿಯರು ಹತ್ಯೆಯಾಗುತ್ತಿದ್ದಂತೆ ಉಳಿದವರು ದಟ್ಟ ಅರಣ್ಯದದಲ್ಲಿ ಪರಾರಿಯಾಗಿದ್ದಾರೆ. ಯೋಧರಿಂದ ಹತರಾದ ನಕ್ಸಲೀಯರ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ. ಸ್ಥಳದಿಂದ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ನಕ್ಸಲ್ ವಸ್ತುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ವಶಪಡಿಸಿಕೊಂಡಿದ್ದಾರೆ. ಉಳಿದವರಿಗಾಗಿ ತೀವ್ರ ಶೋಧ ಕಾರ್ಯ ಮುಂದುವರೆದಿದೆ ಎಂದು ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ.

ಹತರಾದ ಮಾವೋವಾದಿಗಳನ್ನು ಗೊಲ್ಲಪಲ್ಲಿ ಎಲ್​ಒಎಸ್​ ಕಮಾಂಡರ್ ಮಡ್ಕಮ್ ಎರ್ರಾ ಎಂದು ಗುರುತಿಸಲಾಗಿದೆ. ಈತನ ಬಗ್ಗೆ ಸುಳಿವು ನೀಡಿದವರಿಗೆ ಛತ್ತೀಸ್‌ಗಢ ಸರ್ಕಾರ 8 ಲಕ್ಷ ರೂಪಾಯಿ ಬಹುಮಾನ ಘೋಷಿಸಿತ್ತು. ಮೃತಪಟ್ಟ ಮಹಿಳೆ ನಕ್ಸಲೈಟ್ ಪೋಡಿಯಂ ಭೀಮೆ ಎಲ್​ಒಎಸ್​ ಸದಸ್ಯೆ ಎಂದು ಗುರುತಿಸಲಾಗಿದೆ.

ದಾಂತೇವಾಡದಲ್ಲಿ ನಕ್ಸಲ್​ ದಾಳಿ: ಇತ್ತೀಚೆಗೆ ದಾಂತೇವಾಡ ಜಿಲ್ಲೆಯ ಅರನ್‌ಪುರದಲ್ಲಿ ವಾಹನದಲ್ಲಿ ಪ್ರಯಾಣಿಸುತ್ತಿದ್ದ ದಾಂತೇವಾಡ ಜಿಲ್ಲಾ ಮೀಸಲು ಗಾರ್ಡ್‌ಗಳ (ಡಿಆರ್‌ಜಿ) ಮೇಲೆ ನಕ್ಸಲರು ಐಇಡಿ ಸ್ಫೋಟಕ ಬಳಸಿ ದಾಳಿ ನಡೆಸಿದ್ದರು. ಘಟನೆಯಲ್ಲಿ 10 ಸಿಬ್ಬಂದಿ ಮತ್ತು ಚಾಲಕ ಸೇರಿ 11 ಮಂದಿ ಸಾವನ್ನಪ್ಪಿದ್ದರು. ಸ್ಫೋಟದ ತೀವ್ರತೆಗೆ ವಾಹನಕ್ಕೆ ಬೆಂಕಿ ಹೊತ್ತಿಕೊಂಡಿತ್ತು. ಘಟನಾ ಸ್ಥಳದಲ್ಲಿ ರಸ್ತೆಯ ಮೇಲೆ 8 ಅಡಿ ಆಳ ಮತ್ತು 12 ಅಡಿ ಅಗಲದ ಹೊಂಡ ನಿರ್ಮಾಣವಾಗಿತ್ತು. ಸಮೇಲಿ ಮತ್ತು ಅರನ್‌ಪುರ್‌ ಸಮೀಪ ಮಾವೋವಾದಿಗಳಿರುವ ಬಗ್ಗೆ ಮಾಹಿತಿ ಮಡೆದು ಡಿಆರ್‌ಜಿಯ ಪ್ರಬಲ ತಂಡ ಈ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿತ್ತು. ಅರನ್‌ಪುರದಿಂದ ಖಾಸಗಿ ವಾಹನದಲ್ಲಿ ದಾಂತೇವಾಡಕ್ಕೆ ಹಿಂದಿರುಗುತ್ತಿದ್ದ ವೇಳೆ ಮಾವೋವಾದಿಗಳು ದಾಳಿ ನಡೆಸಿದ್ದರು.

ಇದನ್ನೂ ಓದಿ: ಛತ್ತೀಸ್​ಗಢದಲ್ಲಿ ನಕ್ಸಲ್​ ದಾಳಿ: ಹುತಾತ್ಮ ಜವಾನರಿಗೆ ಗೌರವ ನಮನ ಸಲ್ಲಿಸಿದ ಸಿಎಂ ಭೂಪೇಶ್​ ಬಘೇಲ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.