ದಾಂತೇವಾಡ(ಛತ್ತೀಸ್ಗಢ): ಮಂಗಳವಾರ ಭದ್ರತಾ ಪಡೆಗಳು ಮತ್ತು ನಕ್ಸಲರ ನಡುವೆ ನಡೆದ ಎನ್‌ಕೌಂಟರ್‌ನಲ್ಲಿ ಓರ್ವ ನಕ್ಸಲ್ನನ್ನು ಹತ್ಯೆ ಮಾಡಲಾಗಿದೆ. ದಾಂತೆವಾಡ ಜಿಲ್ಲೆಯ ಕಟೆಕಲ್ಯಾಣ ಪೊಲೀಸ್ ಠಾಣಾ ವ್ಯಾಪ್ತಿಯ ತುಮ್ಕಪಾಲ್ ಗ್ರಾಮದ ಬಳಿಯ ಕಾಡಿನಲ್ಲಿ ಜಿಲ್ಲಾ ರಿಸರ್ವ್ ಗಾರ್ಡ್ (ಡಿಆರ್‌ಜಿ) ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ನಕ್ಸಲ್ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎನ್‌ಕೌಂಟರ್‌ನಲ್ಲಿ ಹತ್ಯೆಗೀಡಾದ ನಕ್ಸಲ್ ದರ್ಬಾ ವಿಭಾಗದ ಪ್ಲಟೂನ್ ನಂ.31 ರ ಕಮಾಂಡರ್ ಲಖ್ಮಾ ಕವಾಸಿ ಎಂದು ಗುರುತಿಸಲಾಗಿದೆ. ಈತ ಕಾಟೆಕಲ್ಯಾಣ ಪೊಲೀಸ್ ಠಾಣಾ ವ್ಯಾಪ್ತಿಯ ಕೊಡೋಪಾಲ್ ನಿವಾಸಿಯಾಗಿದ್ದು, ಎನ್‌ಕೌಂಟರ್ ಬಳಿಕ ಪೊಲೀಸರು ಪಿಸ್ತೂಲ್, 5 ಕೆಜಿ ಐಇಡಿ, ಪುಸ್ತಕಗಳು ಸೇರಿದಂತೆ ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ: ಉಕ್ರೇನ್ ಮೇಲಿನ ದಾಳಿಗೆ ರಷ್ಯಾ ಬೆಲೆ ತೆರುವಂತೆ ಮಾಡ್ತೇವಿ: ಜೋ ಬೈಡನ್ ಪ್ರತಿಜ್ಞೆ