ಹೈದರಾಬಾದ್: ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಮತ್ತು ಅವರ ಪತ್ನಿ ಆಲಿಯಾ ಸಿದ್ದಿಕಿ ವಿಚ್ಛೇದನದ ಕದನ ಇನ್ನಷ್ಟು ಉಲ್ಬಣಗೊಂಡಿದೆ. ನಟನು ತನ್ನ ಹೆಂಡ್ತಿ ಮತ್ತು ಮಕ್ಕಳನ್ನು ಮಧ್ಯರಾತ್ರಿಯೇ ಹೊರಹಾಕಿದೆ ಎಂದು ಆರೋಪಿಸಿ ವಿಚ್ಛೇದಿತ ಪತ್ನಿ ಆಲಿಯಾ ಸಿದ್ದಿಕಿ ಅವರು ಎರಡು ವಿಡಿಯೋಗಳನ್ನು ಪೋಸ್ಟ್ ಮಾಡಿದ್ದಾರೆ. ಆಲಿಯಾ ತನ್ನ ಕಷ್ಟವನ್ನು ವಿವರಿಸಲು ಮತ್ತು ತನ್ನ ಮಕ್ಕಳಿಗೆ ನೀಡಿರುವ ಚಿತ್ರಹಿಂಸೆಯನ್ನು ತೋರಿಸಲು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋಗಳನ್ನು ಪೋಸ್ಟ್ ಮಾಡಿದ್ದಾರೆ.
- " class="align-text-top noRightClick twitterSection" data="
">
ಮೊದಲ ವಿಡಿಯೋದಲ್ಲಿ ಅವರು ಹಣವಿಲ್ಲದೆ ಹೇಗೆ ರಸ್ತೆಯಲ್ಲಿ ಸಿಲುಕಿಕೊಂಡಿದ್ದೇವೆ ಎಂಬುದನ್ನು ತೋರಿಸಿದರೆ, ಎರಡನೆಯದರಲ್ಲಿ, ಸಂಬಂಧಿಕರು ಸ್ಥಳಕ್ಕೆ ಬಂದಿದ್ದು, ಅವರು ರಾತ್ರಿ ತಮ್ಮ ಮನೆಯಲ್ಲಿ ಉಳಿಯಲು ಅವಕಾಶ ನೀಡಿರುವ ಬಗ್ಗೆ ಹೇಳಿಕೊಂಡಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಬರೆದಿದ್ದು ಹೀಗೆ?: ಇನ್ಸ್ಟಾಗ್ರಾಮ್ನಲ್ಲಿ ನವಾಜುದ್ದೀನ್ ಅವರ ವಿಚ್ಛೇದಿತ ಪತ್ನಿ ದೊಡ್ಡ ಶೀರ್ಷಿಕೆಯನ್ನು ಬರೆದಿದ್ದು, ತನಗೆ ಆಗಿರುವ ಎಲ್ಲಾ ಕಷ್ಟಗಳನ್ನು ಹೊರಹಾಕಿದ್ದಾರೆ. ''ತನ್ನ ಸ್ವಂತ ಮುಗ್ಧ ಮಕ್ಕಳನ್ನು ಸಹ ಬಿಡದ ನವಾಜುದ್ದೀನ್ ಸಿದ್ದಿಕಿ ಅವರ ಸತ್ಯ ಇದು.. 40 ದಿನಗಳ ಕಾಲ ಮನೆಯಲ್ಲಿದ್ದ ನಂತರ ವರ್ಸೋವಾ ಪೊಲೀಸ್ ಠಾಣೆಯ ಪದಾಧಿಕಾರಿಗಳು ನನ್ನನ್ನು ತುರ್ತಾಗಿ ಕರೆದಿದ್ದರಿಂದ ನಾನು ಹೊರಬಂದೆ.. ಆದರೆ, ನಾನು ಹೋದಾಗ ನನ್ನ ಮಕ್ಕಳೊಂದಿಗೆ ಮನೆಗೆ ಹಿಂತಿರುಗಿದಾಗ ನವಾಜುದ್ದೀನ್ ಸಿದ್ದಿಕಿ ನಮ್ಮನ್ನು ಒಳಗೆ ಬಿಡದಂತೆ ಹಲವಾರು ಕಾವಲುಗಾರರನ್ನು ನಿಯೋಜಿಸಿದ್ದರು. ನನ್ನನ್ನು ಮತ್ತು ನನ್ನ ಮಕ್ಕಳನ್ನು ಈ ವ್ಯಕ್ತಿ ಕ್ರೂರವಾಗಿ ರಸ್ತೆಯ ಮೇಲೆ ಉಳಿಯುವಂತೆ ಮಾಡಿದ್ದಾರೆ ಎಂದು ಜಾಲತಾಣದಲ್ಲಿ ಕಷ್ಟ ತೋಡಿಕೊಂಡಿದ್ದಾರೆ.
ಬೀದಿಯಲ್ಲಿ ನಿಂತ ತಾಯಿ- ಮಕ್ಕಳು: ನವಾಜುದ್ದೀನ್ ಮತ್ತು ಆಲಿಯಾ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಮಗಳು ಶೋರಾ ಮತ್ತು ಮಗ ಯಾನಿ. ಆಲಿಯಾ ಹಂಚಿಕೊಂಡ ವೀಡಿಯೊದಲ್ಲಿ ತಮ್ಮಲ್ಲಿ ನಡೆಯುತ್ತಿರುವ ಗಲಾಟೆಯಿಂದ ಮಕ್ಕಳು ಬೇಸತ್ತಿ ಹೋಗಿದ್ದಾರೆ. ಈ ವಿಡಿಯೋದಲ್ಲಿ ಆಕೆಯ ಮಗಳು ಅಳುತ್ತಿರುವುದನ್ನು ಕಾಣಬಹುದು. ಆದರೆ, ಚಿಕ್ಕ ಹುಡುಗ ತನ್ನ ತಾಯಿಗೆ ಏನಾಗುತ್ತಿದೆ ಎಂದು ತಿಳಿಯದೇ ಹೆದರಿ ಅಂಟಿಕೊಂಡುತ್ತಿರುವ ದೃಶ್ಯವಿದೆ. ''ತನ್ನ ಸ್ವಂತ ತಂದೆಯೇ ಮಗಳಿಗೆ ಈ ರೀತಿ ಮಾಡುತ್ತಾನೆಂದು ನಂಬಲು ಸಾಧ್ಯವಾಗಲಿಲ್ಲ'' ಎಂದು ತನ್ನ ಮಗಳ ಭಾವನೆಗಳನ್ನು ಹಂಚಿಕೊಂಡಿದ್ದಾರೆ.
ಪತಿ ವಿರುದ್ಧ ಗಂಭೀರ ಆರೋಪ: ಆಲಿಯಾಗೆ ಹೋಗಲು ಬೇರೆಲ್ಲಿಯೂ ಸ್ಥಳವಿರದ ಕಾರಣ, ರಾತ್ರಿ ಕಳೆಯಲು ಸಂಬಂಧಿಕರ ಮನೆಗೆ ತೆರಳಿದರು. ಅದೃಷ್ಟವಶಾತ್ ಸಂಬಂಧಿಯೊಬ್ಬರು ಸಹಾಯ ಮಾಡಿದರು ಎಂದು ಅವರು ತಮ್ಮ ಫಾಲೋವರ್ಸ್ಗಳಿಗೆ ತಿಳಿಸಿದ್ದಾರೆ. ನವಾಜುದ್ದೀನ್ ಅವರು ಮಕ್ಕಳನ್ನು ನೋಯಿಸುವ ಕೃತ್ಯದ ಬಗ್ಗೆ ಕೋಪಗೊಂಡ ಅವರು, ತಮ್ಮ ಮಕ್ಕಳಿಗೆ ಮಾಡಿದ್ದನ್ನು ನಾನು ಅವರನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಆಲಿಯಾ ಸಿದ್ದಿಕಿ ಈ ಹಿಂದೆ, ತಮ್ಮ ಪತಿ ಮೇಲೆ ಅತ್ಯಾಚಾರದ ಆರೋಪ ಹೊರಿಸಿ ವರ್ಸೋವಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತನ್ನ ಪತಿ ಮತ್ತು ಅತ್ತೆ ತನ್ನ ಆಹಾರ ಮತ್ತು ಇತರ ಮೂಲ ಅವಶ್ಯಕತೆಗಳನ್ನು ಕಸಿದುಕೊಂಡಿದ್ದಾರೆ. ಸ್ನಾನಗೃಹಕ್ಕೆ ಪ್ರವೇಶವನ್ನು ನಿರ್ಬಂಧಿಸಿದ್ದರು. ನವಾಜುದ್ದೀನ್ ಅವರ ಬಂಗಲೆಯಲ್ಲಿ ತನ್ನ ಮತ್ತು ತನ್ನ ಮಕ್ಕಳನ್ನು ಒಂದು ಕೋಣೆಯಲ್ಲಿ ಇರಿಸಿದ್ದರು ಎಂದು ಅವರು ಆರೋಪಿಸಿದ್ದರು.
ಇದನ್ನೂ ಓದಿ: 'ನಮ್ಮ ಬೆಡ್ರೂಮ್ ತನಕ ಬನ್ನಿ..': ಪಾಪರಾಜಿಗಳ ವರ್ತನೆಗೆ ನಟ ಸೈಫ್ ಅಲಿಖಾನ್ ರಿಯಾಕ್ಷನ್: