ನವದೆಹಲಿ: ಹಿಂದೂ ಮಹಾಸಾಗರ ಪ್ರದೇಶ (ಐಒಆರ್)ದಲ್ಲಿ ಭಾರತೀಯ ನೌಕಾಪಡೆಯ ಅತಿದೊಡ್ಡ ಸಮರಾಭ್ಯಾಸವಾಗಿರುವ ಥಿಯೇಟರ್ ಲೆವೆಲ್ ಆಪರೇಷನಲ್ ರೆಡಿನೆಸ್ ಎಕ್ಸರ್ಸೈಸ್ (Tropex-21) ನಡೆಯುತ್ತಿದೆ.
ಒಂದು ತಿಂಗಳ ಅವಧಿಯ ತಾಲೀಮು ಇದಾಗಿದ್ದು, ಯುದ್ಧ ಹಡಗು ಹಾಗೂ ಯುದ್ಧ ವಿಮಾನಗಳೊಂದಿಗೆ ಭಾರತೀಯ ವಾಯುಪಡೆ, ನೌಕಾಪಡೆ ಹಾಗೂ ಕೋಸ್ಟ್ ಗಾರ್ಡ್ ಸಿಬ್ಬಂದಿಯ ಜಂಟಿ ಸಮರಾಭ್ಯಾಸಕ್ಕೆ ಸಾಕ್ಷಿಯಾಗಲಿದೆ.
ಇದನ್ನೂ ಓದಿ: ರಾಜ್ಯಸಭೆ ಪ್ರತಿಪಕ್ಷ ನಾಯಕ ಗುಲಾಂ ನಬಿ ಅವರ ಸ್ಥಾನ ತುಂಬುವವರಾರು.. ಖರ್ಗೆಗೆ ಸಿಗುತ್ತಾ ಅವಕಾಶ?
ಐಒಆರ್ ಮತ್ತು ಇಂಡೋ - ಪೆಸಿಫಿಕ್‌ನಲ್ಲಿ ಭದ್ರತಾ ವಿಚಾರದಲ್ಲಿ ಭಾರತದ ಪಾತ್ರ ಹೆಚ್ಚಾದಂತೆ ಟ್ರೋಪೆಕ್ಸ್ - 21 ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದೆ. ಜನವರಿ ಆರಂಭದಲ್ಲಿ ತಾಲೀಮು ಪ್ರಾರಂಭವಾಗಿದ್ದು, ಫೆಬ್ರವರಿ ಮೂರನೇ ವಾರದಲ್ಲಿ ಮುಕ್ತಾಯಗೊಳ್ಳಲಿದೆ ಎಂದು ನೌಕಾಪಡೆ ತಿಳಿಸಿದೆ.
ರಕ್ಷಣಾ ಸಾಮರ್ಥ್ಯ ಹೆಚ್ಚಿಸುವುದು, ಕಡಲ ಕ್ಷೇತ್ರದಲ್ಲಿ ರಾಷ್ಟ್ರೀಯ ಹಿತಾಸಕ್ತಿಗಳನ್ನು ಕಾಪಾಡುವುದು, ಐಒಆರ್‌ನಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಉತ್ತೇಜಿಸುವ ಗುರಿಯನ್ನು ಟ್ರೋಪೆಕ್ಸ್ -21ಹೊಂದಿರುವುದಾಗಿ ಸೇನೆ ತಿಳಿಸಿದೆ.