ಅಮೃತಸರ(ಪಂಜಾಬ್) : ಪಂಜಾಬ್ನಲ್ಲಿ ಅಧಿಕಾರ ನಡೆಸುತ್ತಿರುವ ಆಪ್ ಸರ್ಕಾರದ ವಿರುದ್ಧ ಮೊದಲ ದಿನದಿಂದಲೂ ಟೀಕೆ ಮಾಡುತ್ತಾ ಬಂದಿರುವ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು, ಈಗ ಮರಳು ಮಾಫಿಯಾದ ವಿರುದ್ಧ ಸಿಡಿದೆದ್ದಿದ್ದಾರೆ. ಅಮೃತಸರದ ಜಹಜ್ಗಢದಲ್ಲಿರುವ ಮರಳು ಕೇಂದ್ರಗಳ ಮೇಲೆ ಮುತ್ತಿಗೆ ಹಾಕಿದ ನವಜೋತ್ ಸಿಂಗ್ ನೇತೃತ್ವದ ಕಾಂಗ್ರೆಸ್ ಕಾರ್ಯಕರ್ತರು, ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಅಲ್ಲದೇ, ಸರ್ಕಾರವೇ ಮರಳು ಮಾಫಿಯಾದಲ್ಲಿ ಭಾಗಿಯಾಗಿದೆ. ಬಡವರ ಹೆಸರೇಳಿಕೊಂಡು ಅಧಿಕಾರಕ್ಕೆ ಬಂದ ಆಪ್ ನಾಯಕರು ಈಗ ಬಡವರನ್ನೇ ಟಾರ್ಗೆಟ್ ಮಾಡಿದೆ ಎಂದು ಆರೋಪಿಸಿದರು. ಆಪ್ ನಾಯಕ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸುಳ್ಳು ಹೇಳುವುದರಲ್ಲಿ ಸುಖಬೀರ್ ಬಾದಲ್ ಅವರನ್ನೂ ಮೀರಿಸಿದ್ದಾರೆ ಎಂದು ನವಜೋತ್ ಸಿಂಗ್ ಸಿಧು ಟೀಕಿಸಿದರು.
ವಿವಿಧ ಯೋಜನೆಗಳ ಅಡಿಯಲ್ಲಿ ಪಂಜಾಬ್‌ಗೆ ಬರಬೇಕಿದ್ದ 20 ಸಾವಿರ ಕೋಟಿ ರೂಪಾಯಿ ಈವರೆಗೂ ಬಂದಿಲ್ಲ. ಆಪ್ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಇಲ್ಲಿಯವರೆಗೆ 7 ಸಾವಿರ ಕೋಟಿ ಮಾತ್ರ ಯೋಜನೆಗಳಿಗೆ ವಿನಿಯೋಗಿಸಲಾಗಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಪ್ರತಿ ಕುಟುಂಬಕ್ಕೆ 600 ಯೂನಿಟ್ ಉಚಿತ ವಿದ್ಯುತ್ ನೀಡಲಾಗಿತ್ತು. ಆದರೆ, ಆಪ್ ಸರ್ಕಾರ ಅದನ್ನು ಕೇವಲ 1 ಕಿಲೋವ್ಯಾಟ್ ಹೊಂದಿರುವವರಿಗೆ ಮಾತ್ರ ನೀಡುತ್ತಿದೆ ಎಂದು ವಿದ್ಯುತ್ ಸರಬರಾಜು ವಿರುದ್ಧ ವಾಗ್ದಾಳಿ ನಡೆಸಿದರು.
ಓದಿ: ಬಸವ ಜಯಂತಿಗೆ ಶುಭ ಕೋರಿ ಬಸವಣ್ಣನ ಬಗೆಗಿನ ಭಾಷಣದ ವಿಡಿಯೋ ಶೇರ್ ಮಾಡಿದ ಪ್ರಧಾನಿ