ETV Bharat / bharat

ರಾಜ್ಯದೊಳಗೆಯೇ ರಾಜ್ಯ ರಚಿಸುವ ಮೂಲಕ ಕೇಂದ್ರ, ದೇಶದ ಒಕ್ಕೂಟ ವ್ಯವಸ್ಥೆ ದುರ್ಬಲಗೊಳಿಸುತ್ತಿದೆ: ಸಿಧು ಆರೋಪ - Punjab Congress state head Navjot Singh Sidhu

ಗುಂಡಿನ ದಾಳಿಗಳ ನಂತರ BSF ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡದ ಹಲವಾರು ಪ್ರಕರಣಗಳು ಬಂಗಾಳದಲ್ಲಿವೆ. ಕಳೆದ ಐದು ವರ್ಷಗಳಲ್ಲಿ ಬಂಗಾಳ ಸರ್ಕಾರವು BSF ಮೇಲೆ ಚಿತ್ರಹಿಂಸೆ, 60 ಕಾನೂನುಬಾಹಿರ ಮರಣದಂಡನೆ ಮತ್ತು ಎಂಟು ಬಲವಂತದ ನಾಪತ್ತೆ ಪ್ರಕರಣಗಳನ್ನು ಆರೋಪಿಸಿ ಒಟ್ಟು 240 ಪ್ರಕರಣಗಳನ್ನು ದಾಖಲಿಸಿದೆ ಎಂದು ಪಂಜಾಬ್​ ಕಾಂಗ್ರೆಸ್ ರಾಜ್ಯಾಧ್ಯಕ್ಷ ನವಜೋತ್​ ಸಿಂಗ್ ಸಿಧು ಟ್ವೀಟ್ ಮಾಡಿದ್ದಾರೆ.

Navjot Singh Sidhu
ಪಂಜಾಬ್​ ಕಾಂಗ್ರೆಸ್ ರಾಜ್ಯಾಧ್ಯಕ್ಷ ನವಜೋತ್​ ಸಿಂಗ್ ಸಿಧು
author img

By

Published : Oct 25, 2021, 4:36 PM IST

ನವದೆಹಲಿ: ಒಂದು ರಾಜ್ಯದೊಳಗೆಯೇ ಇನ್ನೊಂದು ರಾಜ್ಯ ವನ್ನು ರಚಿಸುವ ಮೂಲಕ ಕೇಂದ್ರವು ದೇಶದ ಒಕ್ಕೂಟ ರಚನೆಯನ್ನು ದುರ್ಬಲಗೊಳಿಸುತ್ತಿದೆ. BSF ಎಂದರೆ ಗಡಿ ಭದ್ರತಾ ಪಡೆ, ಗಡಿಯ ವ್ಯಾಖ್ಯಾನ ಏನು? 50 ಕಿಮೀ?? ಸಾರ್ವಜನಿಕ ಶಾಂತಿ ಮತ್ತು ಸುರಕ್ಷತೆಯನ್ನು ಸೂಚಿಸುವ ಸಾರ್ವಜನಿಕ ಸುವ್ಯವಸ್ಥೆಯು ಪ್ರಾಥಮಿಕವಾಗಿ ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಪಂಜಾಬ್​ ಕಾಂಗ್ರೆಸ್ ರಾಜ್ಯಾಧ್ಯಕ್ಷ ನವಜೋತ್​ ಸಿಂಗ್ ಸಿಧು ಹೇಳಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ, BSF ದೈನಂದಿನ ಭದ್ರತೆಯ ಹೆಸರಿನಲ್ಲಿ ದೇಶದ ಸಾಂವಿಧಾನಿಕ ನಿಬಂಧನೆಯನ್ನು ಉಲ್ಲಂಘಿಸುತ್ತದೆ ಮತ್ತು ಪಂಜಾಬ್‌ನಲ್ಲಿ ಚಿತ್ರಹಿಂಸೆ, ಸುಳ್ಳು ಪ್ರಕರಣಗಳು, ಅನಿಯಂತ್ರಿತ ಬಂಧನ ಮತ್ತು ಕಾನೂನುಬಾಹಿರ ಬಂಧನಗಳು ಸಂಭವಿಸುವ ಸಾಧ್ಯತೆಯಿದೆ ಎಂದು ಟ್ವೀಟ್​ ಮಾಡಿದ್ದಾರೆ.

ಗುಂಡಿನ ದಾಳಿಗಳ ನಂತರ BSF ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡದ ಹಲವಾರು ಪ್ರಕರಣಗಳು ಬಂಗಾಳದಲ್ಲಿವೆ. ಕಳೆದ ಐದು ವರ್ಷಗಳಲ್ಲಿ ಬಂಗಾಳ ಸರ್ಕಾರವು BSF ಮೇಲೆ ಚಿತ್ರಹಿಂಸೆ, 60 ಕಾನೂನುಬಾಹಿರ ಮರಣದಂಡನೆ ಮತ್ತು ಎಂಟು ಬಲವಂತದ ನಾಪತ್ತೆ ಪ್ರಕರಣಗಳಂತಹ ಒಟ್ಟು 240 ಪ್ರಕರಣಗಳನ್ನು ದಾಖಲಿಸಿದೆ ಎಂದು ಹೇಳಿದ್ದಾರೆ.

  • Without obtaining consent of the state government, the notification amounts to encroachment on constitutional rights of the states, disregarding the democratic powers of the people of Punjab vested in the state legislature and state executive. 5/5

    — Navjot Singh Sidhu (@sherryontopp) October 25, 2021 " class="align-text-top noRightClick twitterSection" data=" ">

ಇವುಗಳಲ್ಲಿ, 33 ಪ್ರಕರಣಗಳಲ್ಲಿ, NHRC ಸಂತ್ರಸ್ತರಿಗೆ ಅಥವಾ ಅವರ ಹತ್ತಿರದ ಸಂಬಂಧಿಕರಿಗೆ ಪರಿಹಾರವನ್ನು ಶಿಫಾರಸು ಮಾಡಿದೆ. ಯುಪಿ ಪೊಲೀಸರು ಕಾನೂನುಬಾಹಿರವಾಗಿ ಕಾಂಗ್ರೆಸ್​ ಮುಖಂಡರಾದ ಪ್ರಿಯಾಂಕಗಾಂಧಿ ಅವರನ್ನು ಬಂಧಿಸಬಹುದಾದರೆ, ಯಾವುದೇ ಮಾನ್ಯ ಕಾರಣವಿಲ್ಲದೆ BSF ಒಬ್ಬ ಸಾಮಾನ್ಯ ವ್ಯಕ್ತಿಯನ್ನು ಬಂಧಿಸಿದರೆ, ಆತನ ಖಾತರಿಯನ್ನು ಯಾರು ತೆಗೆದುಕೊಳ್ಳುತ್ತಾರೆ? ಎಂದು ಅವರು ಪ್ರಶ್ನಿಸಿದ್ದಾರೆ.

ರಾಜ್ಯ ಸರ್ಕಾರದ ಒಪ್ಪಿಗೆಯನ್ನು ಪಡೆಯದೇ, ರಾಜ್ಯ ಶಾಸಕಾಂಗ ಮತ್ತು ರಾಜ್ಯ ಕಾರ್ಯಕಾರಿಣಿಯಲ್ಲಿರುವ ಪಂಜಾಬ್ ಜನರ ಪ್ರಜಾಪ್ರಭುತ್ವ ಅಧಿಕಾರವನ್ನು ಕಡೆಗಣಿಸಿ, ರಾಜ್ಯಗಳ ಸಾಂವಿಧಾನಿಕ ಹಕ್ಕುಗಳ ಮೇಲೆ ಅತಿಕ್ರಮಣ ಮಾಡುತ್ತದೆ ಎಂದು ಅವರು ಗಂಭೀರವಾದ ಆರೋಪ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.