ಚಂಡೀಗಢ(ಪಂಜಾಬ್): ಕನ್ಯಾಕುಮಾರಿಯಿಂದ ಆರಂಭವಾದ ಭಾರತ್ ಜೋಡೋ ಯಾತ್ರೆ ಕಾಶ್ಮೀರ ತಲುಪಿದೆ ಇನ್ನು ಕೆಲವೇ ದಿನಗಳಲ್ಲಿ ಯಾತ್ರೆ ಮುಗಿಯಲಿದೆ ಎನ್ನಲಾಗುತ್ತಿದೆ. ಜನವರಿ 26ರಂದು ಕಣಿವೆ ರಾಜ್ಯದಲ್ಲಿ ಧ್ವಜಾರೋಹಣದ ನಂತರ ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆಯನ್ನು ಅಂತಿಮ ಗೊಳಿಸಲಿದ್ದಾರೆ. ನಂತರ ಜನವರಿ 30 ರಂದು ಬೃಹತ್ ರ್‍ಯಾಲಿ ನಡೆಯಲಿದೆ ಎಂದು ಹೇಳಲಾಗುತ್ತಿದೆ.
ಜನವರಿ 30 ರಂದು ಶ್ರೀನಗರದಲ್ಲಿ ಮಹಾ ಸಮಾರೋಪ ರ್‍ಯಾಲಿ ಸಮಾರೋಪದ ಹಿನ್ನೆಲೆಯಲ್ಲಿ ಬೃಹತ್ ಸಮಾರಂಭ ನಡೆಯುತ್ತಿದೆ. ಈ ಸಮಾರೋಪ ರ್‍ಯಾಲಿಗೆ ಹಲವಾರು ಜನರಿಗೆ ಆಹ್ವಾನ ಮಾಡಲಾಗುತ್ತಿದೆ. ಅದರಲ್ಲಿ ನವಜೋತ್ ಸಿಧು ಅವರಿಗೂ ಅಹ್ವಾನ ಕೊಡಲಾಗಿದೆ ಎಂದು ಕಾಂಗ್ರೆಸ್ ಮೂಲಗಳಿಂದ ಮಾಹಿತಿ ಹರಿದು ಬರುತ್ತಿದೆ. ಇದು ಪಂಜಾಬ್ನ ರಾಜಕೀಯದಲ್ಲಿ ದೊಡ್ಡ ಅಲೆಯನ್ನೇ ಎಬ್ಬಿಸಿದೆ ಎಂದರೆ ತಪ್ಪಾಗಲಾರದು. ಭಾರತ್ ಜೋಡೋ ಯಾತ್ರೆ ಪಂಜಾಬ್ ದಾಟಿ ಈಗಾಗಲೇ ಜಮ್ಮುವನ್ನು ಪ್ರವೇಶಿಸಿದೆ.
ಪಂಜಾಬ್ನ ಪಠಾಣ್ ಕೋಟ್ನಲ್ಲಿ ರ್‍ಯಾಲಿ ನಡೆದ ವೇಳೆ ಹೊರಗಿನಿಂದ ಬರುವವರಿಗೆ ಪಕ್ಷದಲ್ಲಿ ಯಾವುದೇ ದೊಡ್ಡ ಸ್ಥಾನವನ್ನು ನೀಡಬಾರದು ಎಂಬ ಹೇಳಿಕೆಯನ್ನು ಪ್ರತಾಪ್ ಸಿಂಗ್ ಬಾಜ್ವಾ, ರಾಜಾ ವಾರಿಂಗ್ ಮತ್ತು ಸುಖಜಿಂದರ್ ಸಿಂಗ್ ರಾಂಧವಾ ಒತ್ತಿ ಹೇಳಿದ್ದರು. ಇದು ಅಲ್ಲಿನ ಕಾಂಗ್ರೆಸ್ ವಲಯದಲ್ಲಿ ಭಾರಿ ಚರ್ಚೆಗೂ ಗ್ರಾಸವಾಗಿತ್ತು.
ಜೈಲಿನಲ್ಲಿರುವ ಸಿಧು ಅವರಿಗೆ ಆಹ್ವಾನ ನೀಡಿರುವುದು ಈಗ ಚರ್ಚೆಗೆ ಕಾರಣವಾಗಿದೆ. ರೋಡ್ ರೇಜ್ ಪ್ರಕರಣದಲ್ಲಿ ಪಟಿಯಾಲ ಜೈಲಿನಲ್ಲಿ ನವಜೋತ್ ಸಿಧು ಸಜೆಯಲ್ಲಿದ್ದಾರೆ. ಅವರ ಬಿಡುಗಡೆ ಬಗ್ಗೆ ಚರ್ಚೆಯೂ ನಡೆಯುತ್ತಿದೆ. ಸಿಧು ಬಿಡುಗಡೆ ಬಗ್ಗೆ ಯಾವುದೇ ನಿಖರತೆ ಇಲ್ಲದೇ ಕಾಂಗ್ರೆಸ್ ಆಹ್ವಾನ ನೀಡಿರುವುದು ವಿರೋಧ ಪಕ್ಷಗಳಿಗೆ ಪ್ರಶ್ನಾರ್ಹ ವಿಷಯವಾಗಿದೆ. ಜನವರಿ 26ರಂದು ಸಿಧು ಅವರು ಬಿಡುಗಡೆ ಆಗಲಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿದೆ. ಆದರೆ, ಈ ಬಗ್ಗೆ ಯಾವುದೇ ಆಧಿಕೃತ ಮಾಹಿತಿ ಇಲ್ಲ.
ಇದನ್ನೂ ಓದಿ: ನವಜೋತ್ ಸಿಂಗ್ ಸಿಧು ಜನವರಿ 26 ರಂದು ಜೈಲಿನಿಂದ ಬಿಡುಗಡೆ ಆಗ್ತಾರಾ?
ಏನಿದು ರೋಡ್ ರೇಜ್ ಪ್ರಕರಣ ?: ನವಜೋತ್ ಸಿಧು ಅವರು ಪಟಿಯಾಲಾದಲ್ಲಿ ಪಾರ್ಕಿಂಗ್ ಜಾಗದ ವಿಷಯವಾಗಿ ವ್ಯಕ್ತಿಯೊಂದಿಗೆ ಜಗಳವಾಡಿ ಹಲ್ಲೆ ಮಾಡಿದ್ದರು. ಸಿಧು ಹಲ್ಲೆ ಮಾಡಿದ ವ್ಯಕ್ತಿ ಗಂಭೀಗ ಗಾಯಗೊಂಡು ಸಾವನ್ನಪ್ಪಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 2006ರಲ್ಲಿ ಸಿಧು ದೋಷಿ ಎಂದು ಹೈಕೋರ್ಟ್ ತೀರ್ಪು ನೀಡಿತ್ತು. ಮೇಲ್ಮನವಿಯಲ್ಲಿ ಸುಪ್ರೀಂಕೋರ್ಟ್ 2018ರ ಮೇ ತಿಂಗಳಲ್ಲಿ ಸಿಧು ಅವರನ್ನು ದೋಷಮುಕ್ತಗೊಳಿಸಿ ಆದೇಶ ನೀಡಿತ್ತು. 19 ಮೇ 2022ರಂದು ಸುಪ್ರೀಂಕೋರ್ಟ್ ತೀರ್ಪನ್ನು ಪರಿಷ್ಕರಿಸಿ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಈಗ ಪಟಿಯಾಲ ಜೈಲಿನಲ್ಲಿ ಸಿಧು ಇದ್ದಾರೆ.
ಕಥುವಾ(ಜಮ್ಮು ಮತ್ತು ಕಾಶ್ಮೀರ): ಕಾಶ್ಮೀರದ ಚಳಿಗೆ ಜಾಕೆಟ್ ಧರಿಸಿದ ರಾಹುಲ್ ಗಾಂಧಿ: ಇಂದು ಬೆಳಗ್ಗೆ ಜಮ್ಮು ಕಾಶ್ಮೀರದ ಕಥುವಾದಿಂದ ಭಾರತ್ ಜೋಡೋ ಯಾತ್ರೆ ಆರಂಭವಾಯಿತು. ಯಾತ್ರೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜಾಕೆಟ್ ಧರಿಸಿದ್ದರು. ಯಾತ್ರೆ ಉದ್ದಕ್ಕೂ ಜೋಡೋ ಯಾತ್ರೆಯ ಟೀ-ಶರ್ಟ್ನಲ್ಲಿ ಮಾತ್ರ ಕಂಡಿದ್ದರು. ಮೊದಲ ಬಾರಿಗೆ ಚಾಕೆಟ್ ಯಾತ್ರೆಯಲ್ಲಿ ಚಾಕೆಟ್ ಧರಿಸಿ ಕಾಣಿಸಿಕೊಂಡಿದ್ದಾರೆ.
ಇಂದು 125ನೇ ದಿನದ ನಡಿಗೆಯಾಗಿದ್ದು ಇದರಲ್ಲಿ ಶಿವಸೇನಾ ನಾಯಕ ಸಂಜಯ್ ರಾವತ್ ಅವರು ಸ್ಥಳೀಯ ನಾಯಕರೊಂದಿಗೆ ರಾಹುಲ್ ಮೆರವಣಿಗೆಯಲ್ಲಿ ಪಾಲ್ಗೊಂಡರು. ಯಾತ್ರೆ ಜನವರಿ 19 ರಂದು ಜಮ್ಮು ಮತ್ತು ಕಾಶ್ಮೀರವನ್ನು ಪ್ರವೇಶಿಸಿತ್ತು. ಜನವರಿ 26 ರಂದು ಕಣಿವೆಯಲ್ಲಿ ರಾಹುಲ್ ತ್ರಿವರ್ಣ ಧ್ವಜವನ್ನು ಹಾರಿಸುವುದರೊಂದಿಗೆ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ.
ಇದನ್ನೂ ಓದಿ: ಲೈಂಗಿಕ ಕಿರುಕುಳ ಆರೋಪ: ಕುಸ್ತಿ ಫೆಡರೇಶನ್ ಅಧ್ಯಕ್ಷರ ರಾಜೀನಾಮೆ ಸಾಧ್ಯತೆ?