ETV Bharat / bharat

ತಿರುಪತಿಯ ತಿಮ್ಮಪ್ಪನ ಸನ್ನಿಧಿಯಲ್ಲಿ ವಾರ್ಷಿಕ ಬ್ರಹ್ಮೋತ್ಸವ; ಮೀನ ಲಗ್ನದಲ್ಲಿ ಧ್ವಜಾರೋಹಣ - ವಾರ್ಷಿಕ ಬ್ರಹ್ಮೋತ್ಸವ

ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ನವರಾತ್ರಿ ಹಿನ್ನೆಲೆಯಲ್ಲಿ ವಾರ್ಷಿಕ ಬ್ರಹ್ಮೋತ್ಸವ ಆರಂಭವಾಗಿದ್ದು, ಇಂದು ಮೀನ ಲಗ್ನದಲ್ಲಿ ಧ್ವಜಾರೋಹಣ ನೆರವೇರಿತು. ಈ ವೇಳೆ ಭಕ್ತರಿಗೆ ಪ್ರವೇಶ ಇರಲಿಲ್ಲ.

Navaratri fete begins at Kanakadurga, Srisailam temples; annual Brahmotsavams at Tirumala
ತಿರುಪತಿಯ ತಿಮ್ಮಪ್ಪನ ಸನ್ನಿಧಿಯಲ್ಲಿ ವಾರ್ಷಿಕ ಬ್ರಹ್ಮೋತ್ಸವ; ಮೀನ ಲಗ್ನದಲ್ಲಿ ಧ್ವಜಾರೋಹಣ
author img

By

Published : Oct 7, 2021, 5:38 PM IST

ವಿಜಯವಾಡ: ತಿರುಪತಿಯ ತಿಮ್ಮಪ್ಪನ ಸನ್ನಿಧಿಯಲ್ಲಿ ನಿನ್ನೆಯಿಂದ ವಾರ್ಷಿಕ ಬ್ರಹ್ಮೋತ್ಸವ ಆರಂಭವಾಗಿದ್ದು, ಇಂದು ಸಂಜೆ ಧ್ವಜಾರೋಹಣ ಕಾರ್ಯಕ್ರಮ ನೆರವೇರಿತು.

ಸಂಜೆ ಮೀನ ಲಗ್ನದಲ್ಲಿ ಧ್ವಜಾರೋಹಣ ಕಾರ್ಯಕ್ರಮ ಕಲ್ಯಾಣ ಮಂಟಪದಲ್ಲಿ ನಡೆದಿದ್ದು, ಈ ವೇಳೆ ಭಕ್ತರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ತಿರುಮಲ ದೇವಸ್ಥಾನ ಮತ್ತು ರಂಗನಾಯಕರ ಮಂಟಪವನ್ನು 5 ಟನ್ ಹೂವುಗಳಿಂದ ಅಲಂಕರಿಸಲಾಗಿದ್ದು, ತಿರುಮಲ ವೃತ್ತಗಳು ದೀಪಾಲಂಕಾರಗಳಿಂದ ಝಗಮಗಿಸುತ್ತಿವೆ.

ಸಂಪ್ರದಾಯದ ಪ್ರಕಾರ ವಿಜಯವಾಡ ಪೊಲೀಸ್ ಆಯುಕ್ತರು ಬ್ರಹ್ಮೋತ್ಸವದ ಭಾಗವಾಗಿ ಸೀರೆಯನ್ನು (ಸೀರೆ, ವರ್ಮಿಲಿಯನ್, ಅರಿಶಿನ, ಹೂವುಗಳು, ಬಳೆಗಳು, ಹಣ್ಣುಗಳು ಮತ್ತು ಸಿಹಿತಿಂಡಿಗಳು) ದೇವರಿಗೆ ಅರ್ಪಿಸಿದ್ದಾರೆ.

ಆಂಧ್ರದ ಇತರೆ ಪ್ರಮುಖ ದೇವಾಲಯಗಳಾದ ಕನಕದುರ್ಗ, ಇಂದ್ರಕೀಲಾದ್ರಿ ಹಾಗೂ ಶ್ರೀಶೈಲಂ ದೇವಾಲಯಗಳಲ್ಲಿ ಶರನ್ನವರಾತ್ರಿ ಅಂಗವಾಗಿ ವಿಶೇಷ ಪೂಜೆಗಳು ನಡೆಯುತ್ತಿವೆ. ದಸರಾ ಆಚರಣೆಯ ಭಾಗವಾಗಿ ದೇವಾಲಯಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ದೇವಾಲಯವನ್ನು ಹೂವುಗಳಿಂದ ಅಲಂಕರಿಸಲಾಗಿದೆ.

ಕೋವಿಡ್‌ ಹಿನ್ನೆಲೆಯಲ್ಲಿ ಭಕ್ತರನ್ನು ಸೇರಿಸದೆ ಬ್ರಹ್ಮೋತ್ಸವ ನಡೆಸಲಾಗುತ್ತಿದೆ. ಇದೇ 11 ರಂದು ರಾಜ್ಯದ ಪರ ಸಿಎಂ ಜಗನ್‌ ಮೋಹನ್‌ ರೆಡ್ಡಿ ತಿಮ್ಮಪ್ಪನಿಗೆ ರೇಷ್ಮೆ ವಸ್ತ್ರ ಅರ್ಪಿಸಲಿದ್ದಾರೆ ಎಂದು ಟಿಟಿಡಿ ಅಧ್ಯಕ್ಷ ವೈ ವಿ ಸುಬ್ಬಾರೆಡ್ಡಿ ಹೇಳಿದ್ದಾರೆ.

ರಾಜ್ಯದ 13 ಜಿಲ್ಲೆಗಳಿಂದ ದಿತ್ಯ 1 ಸಾವಿರ ಮಂದಿಗೆ ಮಾತ್ರ ನಾಳೆಯಿಂದ ಅ.15ರ ವರೆಗೆ ವೆಂಕಟೇಶ್ವರನ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.