ETV Bharat / bharat

ಇಂದು ರಾಷ್ಟ್ರೀಯ ಮತದಾರರ ದಿನ.. - ರಾಷ್ಟ್ರೀಯ ಮತದಾರರ ದಿನ

ಪ್ರತೀ ವರ್ಷ ಜನವರಿ 25 ರಂದು ರಾಷ್ಟ್ರೀಯ ಮತದಾರರ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ.

National Voters Day
ರಾಷ್ಟ್ರೀಯ ಮತದಾರರ ದಿನ
author img

By

Published : Jan 25, 2022, 10:11 AM IST

ನವದೆಹಲಿ: ಪ್ರತಿ ವರ್ಷ ಜನವರಿ 25 ಅನ್ನು ರಾಷ್ಟ್ರೀಯ ಮತದಾರರ ದಿನವನ್ನಾಗಿ ಆಚರಿಸಲಾಗುವುದು. ಭಾರತದ ಚುನಾವಣಾ ಆಯೋಗದ ಸಂಸ್ಥಾಪನಾ ದಿನವನ್ನು ಗುರುತಿಸಲು ಜನವರಿ 25 ರಂದು ರಾಷ್ಟ್ರೀಯ ಮತದಾರರ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ.

ಹೊಸ ಮತದಾರರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ದಿನವನ್ನು ಆಚರಣೆ ಮಾಡಲಾಗುತ್ತದೆ. ದೇಶದ ಮತದಾರರಿಗೆ ಮೀಸಲಾಗಿರುವ ಈ ದಿನವನ್ನು ಚುನಾವಣಾ ಪ್ರಕ್ರಿಯೆಯಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸಲು ಬಳಸಿಕೊಳ್ಳಲಾಗುತ್ತದೆ. ಚುನಾವಣೆಯ ಸಮಯದಲ್ಲಿ ಮತದಾರರು ಸಂಪೂರ್ಣ ಪ್ರಕ್ರಿಯೆಯಲ್ಲಿ ಒಳಗೊಳ್ಳುವಂತೆ ಮಾಡಲು ರಾಷ್ಟ್ರೀಯ ಮತದಾರರ ದಿನವನನ್ನು ಆಚರಿಸಲಾಗುತ್ತದೆ.

ಈ ವರ್ಷ ದೇಶವು 10ನೇ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಿದೆ. ಹೊಸ ಮತದಾರರನ್ನು ಪ್ರೋತ್ಸಾಹಿಸುವುದು ರಾಷ್ಟ್ರೀಯ ಮತದಾರರ ದಿನಾಚರಣೆಯ ಮುಖ್ಯ ಉದ್ದೇಶ.

ರಾಜಧಾನಿ ದೆಹಲಿಯಲ್ಲಿ ಪ್ರತಿವರ್ಷ ರಾಷ್ಟ್ರೀಯ ಮತದಾರರ ದಿನವನ್ನು ಭಾರತದ ರಾಷ್ಟ್ರಪತಿಗಳು ಮುಖ್ಯ ಅತಿಥಿಯಾಗಿ ಆಗಮಿಸುವ ಮೂಲಕ ಆಚರಿಸಲಾಗುತ್ತದೆ. ಆದರೆ, ಅವರಿಂದು ಸಮಾರಂಭಕ್ಕೆ ಹಾಜರಾಗಲು ಸಾಧ್ಯವಾಗದ ಕಾರಣ, ಸಮಾರಂಭದಲ್ಲಿ ಅವರ ಸಂದೇಶವನ್ನು ವರ್ಚುಯಲ್​ ಮೂಲಕ ತಲುಪಿಸಲಾಗುತ್ತದೆ. ಕೇಂದ್ರ ಸಚಿವ ಕಿರಣ್ ರಿಜಿಜು ಅವರು ಸಮಾರಂಭದಲ್ಲಿ ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಇದನ್ನೂ ಓದಿ: 3 ಲಕ್ಷದ ಗಡಿಯಿಂದ ಇಳಿಕೆ ಕಂಡ ಕೊರೊನಾ: ನಿಟ್ಟುಸಿರು ಬಿಟ್ಟ ಭಾರತದ ಜನ

ಇನ್ನೂ ಚುನಾವಣಾ ಆಯೋಗವು 2021-22 ನೇ ಸಾಲಿನಲ್ಲಿ ಚುನಾವಣಾ ಸಂಬಂಧಿತ ಕಾರ್ಯ ಚಟುವಟಕೆಯಲ್ಲಿ ಉತ್ತಮ ನಿರ್ವಹಣೆ ತೋರಿದ ಅಧಿಕಾರಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಿದೆ. ಜೊತೆಗೆ ಸಮಾರಂಭದಲ್ಲಿ, ಹೊಸದಾಗಿ ಸೇರ್ಪಡೆಗೊಂಡ ಮತದಾರರನ್ನು ಸನ್ಮಾನಿಸಲಾಗುವುದು ಮತ್ತು ಅವರ ಮತದಾರರ ಭಾವಚಿತ್ರ ಗುರುತಿನ ಚೀಟಿಯನ್ನು (EPIC) ಹಸ್ತಾಂತರಿಸಲಾಗುವುದು.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಕಾರ್ಯಕ್ರಮದಲ್ಲಿ ಜರ್ನಿ ಆಫ್ ಇಂಡಿಯನ್ ಎಲೆಕ್ಷನ್ಸ್ ಬುಕ್​​ ಕೂಡ ಬಿಡುಗಡೆಯಾಗಲಿದೆ. ಪುಸ್ತಕವು ಭಾರತದ ಚುನಾವಣಾ ಇತಿಹಾಸವನ್ನು ತಿಳಿಸಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.