ETV Bharat / bharat

NEET UG 2022 ಫಲಿತಾಂಶ ಪ್ರಕಟ: ಕರ್ನಾಟಕದ ಹೃಷಿಕೇಶ್​​​ಗೆ 3ನೇ ಸ್ಥಾನ - Etv bharat kannada

ನ್ಯಾಷನಲ್​​ ಟೆಸ್ಟಿಂಗ್​ ಏಜೆನ್ಸಿ(ಎನ್‌ಟಿಎ) ಬುಧವಾರ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ(ನೀಟ್​​-ಯುಜಿ 2022)ಯ ಫಲಿತಾಂಶ ಪ್ರಕಟಿಸಿದೆ. ಕರ್ನಾಟಕದ ಹೃಷಿಕೇಶ್​ ನಾಗಭೂಷಣ ಗಂಗುಲೆ 3ನೇ ಸ್ಥಾನ ಪಡೆದುಕೊಂಡಿದ್ದಾರೆ.

NEET UG 2022 ಫಲಿತಾಂಶ
NEET UG 2022 ಫಲಿತಾಂಶ
author img

By

Published : Sep 8, 2022, 7:01 AM IST

Updated : Sep 8, 2022, 8:38 AM IST

ನವದೆಹಲಿ: 2022ನೇ ಸಾಲಿನ ನೀಟ್​ ಯುಜಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ. ಕರ್ನಾಟಕದ ಇಬ್ಬರು ವಿದ್ಯಾರ್ಥಿಗಳು 3 ಹಾಗೂ 4ನೇ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಮೊದಲನೇ ಸ್ಥಾನ ರಾಜಸ್ಥಾನದ ವಿದ್ಯಾರ್ಥಿನಿ ತನಿಷ್ಕಾ ಪಾಲಾಗಿದೆ.

NEET UG 2022 results
ನೀಟ್​​ನಲ್ಲಿ ಮೊದಲ ಸ್ಥಾನ ಗಳಿಸಿದ ರಾಜಸ್ಥಾನದ ತನಿಷ್ಕಾ

ಜುಲೈ 17ರಂದು ದೇಶದ 546 ನಗರಗಳಲ್ಲಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್​​​​ಗಳಿಗೆ ಬಹುನಿರೀಕ್ಷಿತ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ನಡೆಸಲಾಗಿತ್ತು. ಈ ವರ್ಷ ಒಟ್ಟು 17.64 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದರು.

  • National Testing Agency (NTA) declared NEET-UG 2022 results with Rajasthan's Tanishka bagging the top rank among 17.64 lakh candidates who appeared for the medical entrance exam

    Delhi's Vatsa Ashish Batra and Hrishikesh Nagbhushan Gangule from Karnataka bagged 2nd & 3rd position pic.twitter.com/R7SDd02EjW

    — ANI (@ANI) September 7, 2022 " class="align-text-top noRightClick twitterSection" data=" ">

ನೀಟ್ ಯುಜಿ 2022 ಫಲಿತಾಂಶ ಚೆಕ್​ ಮಾಡುವುದು ಹೇಗೆ?

  • ಎನ್‌ಟಿಎ ನೀಟ್‌ ಅಧಿಕೃತ ವೆಬ್‌ಸೈಟ್‌ ntaneet.nic.in ಗೆ ಭೇಟಿ ನೀಡಿ.
  • ತೆರೆದ ಹೋಮ್‌ ಪೇಜ್‌ನಲ್ಲಿ ನೀಟ್‌ ಫಲಿತಾಂಶಕ್ಕೆ ಸಂಬಂಧಿಸಿದ ಲಿಂಕ್‌ ಕ್ಲಿಕ್ ಮಾಡಿ.
  • ನಂತರ ಅಪ್ಲಿಕೇಶನ್‌ ಸಂಖ್ಯೆ ಮತ್ತು ಜನ್ಮ ದಿನಾಂಕ ಮಾಹಿತಿ ನೀಡಿ, 'Submit' ಎಂಬಲ್ಲಿ ಕ್ಲಿಕ್ ಮಾಡಿ

ವೈದ್ಯಕೀಯ ಪರೀಕ್ಷೆಯಲ್ಲಿ ಟಾಪ್​ 50ರ ಪೈಕಿ 18 ಮಹಿಳಾ ವಿದ್ಯಾರ್ಥಿಗಳು ಸ್ಥಾನ ಪಡೆದುಕೊಂಡಿದ್ದಾರೆ. ಕರ್ನಾಟಕದ ರುಚಿ ಅವರಿಗೆ 4ನೇ ಸ್ಥಾನ ಸಿಕ್ಕಿದೆ. ಉಳಿದಂತೆ, 5ನೇ ಸ್ಥಾನದಲ್ಲಿ ತೆಲಂಗಾಣದ ಸಿದ್ಧಾರ್ಥ ರಾವ್ ಇದ್ದಾರೆ.

ಇದನ್ನೂ ಓದಿ: ನೀಟ್​ ಪರೀಕ್ಷಾ ಕೇಂದ್ರದಲ್ಲಿ ತೆಗೆಸಿದ ಒಳ ಉಡುಪು ಧರಿಸದಂತೆಯೂ ಹೇಳಿದ್ದರು: ಕೇರಳದ ವಿದ್ಯಾರ್ಥಿನಿ ಅಳಲು

Last Updated : Sep 8, 2022, 8:38 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.