ETV Bharat / bharat

ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನ.. ಪ್ರಕೃತಿ ಮಾತೆಯ ರಕ್ಷಿಸೋಣ, ನಾವು ಬದುಕೋಣ - ಜೀವನದ ಮೇಲೆ ಪ್ರತಿಕೂಲ ಪರಿಣಾಮ

ಡಿಸೆಂಬರ್​​​​ 2 ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನ. ಪ್ರಕೃತಿ ದೇವತೆಯ ರಕ್ಷಣೆಗೆ ಕೈಜೋಡಿಸುವ ದಿನವಾಗಿದೆ. ಮಾನವನ ಉಳಿವಿಗೆ ಅಗತ್ಯವಿರುವ ಶುದ್ಧ ವಾತಾವರಣ ಉಳಿಸುವೆಡೆಗೆ ನಾವು ಸಾಗೋಣ.

National Pollution Control Day 2022
ನಾಳೆ ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನ
author img

By

Published : Dec 1, 2022, 3:34 PM IST

Updated : Dec 1, 2022, 11:05 PM IST

ಹೈದರಾಬಾದ್: ಪ್ರಕೃತಿ ಮಾನವನ ಉಳಿವಿಗೆ ಮೂಲಾಧಾರ. ಇಂತಹ ಅಗತ್ಯದ ಮೇಲೆ ನಾವೇ ದಾಳಿ ಮಾಡುತ್ತಿದ್ದೇವೆ. ವಾಯು, ಶಬ್ದ ಮತ್ತು ಜಲ ಮಾಲಿನ್ಯವು ಜಗತ್ತಿಗೆ ಬಹಳ ಆತಂಕಕಾರಿ ವಿಷಯವಾಗಿದೆ. ಇದು ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಪ್ರಕೃತಿ ಕೊಟ್ಟ ಭವ್ಯ ಶ್ರೀಮಂತಿಕೆಯನ್ನು ಮಾನವರಾದ ನಾವೇ ಹಾಳು ಮಾಡುತ್ತಿದ್ದೇವೆ. ಇದಕ್ಕೆ ಕಡಿವಾಣ ಹಾಕದಿದ್ದರೆ ನಾವೇ ಬಲಿಯಾಗೋದು ಮಾತ್ರ ಶತಃಸಿದ್ಧ.

ಪ್ರತಿ ವರ್ಷದಂತೆ ಡಿಸೆಂಬರ್ 2 ನೇ ತಾರೀಖನ್ನು ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನವನ್ನಾಗಿ ಆಚರಿಸಲಾಗುತ್ತದೆ. ಮಾಲಿನ್ಯವನ್ನು ತೊಡೆದುಹಾಕಲು ಮತ್ತು ಅದರ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ದಿನವನ್ನು ಆಚರಿಸುವ ಉದ್ದೇಶವಾಗಿದೆ. ಪ್ರಕೃತಿ ಮಾತೆಯನ್ನು ರಕ್ಷಿಸಬೇಕಾಗಿದೆ. 2022 ರ ಸಾಲಿನ ಘೋಷವಾಕ್ಯ ಮತ್ತು ಥೀಮ್​ ಇನ್ನೂ ಘೋಷಿಸಲಾಗಿಲ್ಲವಾದರೂ, ಭವಿಷ್ಯದ ಪೀಳಿಗೆಗೆಗಾಗಿ ಭೂಮಿಯನ್ನು ಉಳಿಸುವ ಪಣ ತೊಡಬೇಕಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ವ್ಯಾಪಕವಾದ ವಾಯು ಮಾಲಿನ್ಯದ ಪರಿಣಾಮಗಳಿಂದಾಗಿ ಪ್ರತಿ ವರ್ಷ ಸುಮಾರು 7 ಮಿಲಿಯನ್ ಜನರು ಅಕಾಲಿಕವಾಗಿ ಸಾವನ್ನಪ್ಪುತ್ತಿದ್ದಾರೆ. ಇದು ನಾವೇ ಸೃಷ್ಟಿಸಿದ ಕೂಪಕ್ಕೆ ನಾವೇ ಬೀಳುತ್ತಿರುವ ಪರಿಯಾಗಿದೆ ಎಂಬುದು ಗೋಚರಿಸುತ್ತದೆ. ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನದ ಆಚರಣೆಯು ಮಾಲಿನ್ಯದ ವಿರುದ್ಧ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ. ಮಾಲಿನ್ಯ ನಿಯಂತ್ರಣ ನೀತಿಗಳನ್ನು ಬದಲಾಯಿಸಲು ಸರ್ಕಾರವನ್ನು ಎಚ್ಚರಿಸಬೇಕಾಗಿದೆ.

ಈ ದಿನವೇ ಆಚರಿಸೋದ್ಯಾಕೆ ಗೊತ್ತಾ?: ಡಿಸೆಂಬರ್​ 2ನೇ ತಾರೀಖಿನಂದೇ ಮಾಲಿನ್ಯ ನಿಯಂತ್ರಣ ದಿನ ಆಚರಿಸುವುದಕ್ಕೆ ಕಾರಣವಿದೆ. 1984 ರಲ್ಲಿ ಮಧ್ಯಪ್ರದೇಶದ ಭೋಪಾಲ್​ನ ಕೀಟನಾಶಕ ಘಟಕದಿಂದ ಸುಮಾರು 45 ಟನ್‌ಗಳಷ್ಟು ಮೀಥೈಲ್ ಐಸೊಸೈನೇಟ್ ರಾಸಾಯನಿಕ ಸೋರಿಕೆಯಾಯಿತು. ಈ ಭೀಕರ ಅನಿಲ ಸೋರಿಕೆಯಿಂದಾಗಿ ಸಾವಿರಾರು ಜನರು ಪ್ರಾಣ ಕಳೆದುಕೊಂಡರು. ಇದು ಮನುಕುಲದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡಿದ ಭೀಕರ ಘಟನೆಯಾಗಿದೆ.

ಬದುಕುಳಿದ ಜನರಲ್ಲಿ ಅನೇಕ ದೈಹಿಕ ಮತ್ತು ಮಾನಸಿಕ ನೂನ್ಯತೆಗಳು ಕಂಡು ಬಂದವು. ಅದರ ಕುರುಹುಗಳು ಇಂದಿಗೂ ಜೀವಂತವಾಗಿವೆ. ಇದಾದ ಬಳಿಕ ಸಾವಿರಾರು ಜನರು ಭೋಪಾಲ್ ಪ್ರದೇಶವನ್ನೇ ತೊರೆಯಬೇಕಾಯಿತು. ಹೀಗಾಗಿ ಅಂದಿನ ದಿನದ ಭೀಕರ ಘಟನೆಯ ಸ್ಮರಣಾರ್ಥವಾಗಿ ಮಡಿದವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಡಿಸೆಂಬರ್​ 2 ರಂದು ಮಾಲಿನ್ಯ ನಿಯಂತ್ರಣ ದಿನವನ್ನು ಆಚರಿಸಲಾಗುತ್ತದೆ.

ಇನ್ನೂ ಆತಂಕಕಾರಿ ವಿಚಾರವೆಂದರೆ ವಿಶ್ವದಲ್ಲಿ 10 ಜನರಲ್ಲಿ ಒಬ್ಬರು ಮಾತ್ರ ಉಸಿರಾಡುವಷ್ಟು ಶುದ್ಧ ಗಾಳಿ ಇದೆ. ವಾಹನಗಳು, ಕಾರ್ಖಾನೆಗಳು ಸೇರಿದಂತೆ ಹಲವಾರು ಕಾರಣಗಳಿಗಾಗಿ ಉಸಿರಾಡುವ ಗಾಳಿಯೂ ಸತ್ವ ಕಳೆದುಕೊಂಡಿದೆ. ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದಲ್ಲಿ ಶುದ್ಧವಾದ ಪ್ರಕೃತಿಯನ್ನೇ ರಕ್ಷಿಸಲೇಬೇಕಿದೆ. ವಾಯು, ಜಲ, ಭೂಮಿ, ಶಬ್ದ ಮಾಲಿನ್ಯದಂತಹ ವಿವಿಧ ರೀತಿಯ ಮಾಲಿನ್ಯದ ಬಗ್ಗೆ ಜಾಗೃತಿ ಹೊಂದಬೇಕಿದೆ.

ಓದಿ: ಸರ್ಕಾರಿ ವೈದ್ಯರಾಗಿ ನೇಮಕಗೊಂಡು ಇತಿಹಾಸ ಸೃಷ್ಟಿಸಿದ ಮಂಗಳಮುಖಿಯರು

Last Updated : Dec 1, 2022, 11:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.