ETV Bharat / bharat

ಜಮ್ಮು-ಕಾಶ್ಮೀರದಲ್ಲಿ ಉಗ್ರ ಸಂಘಟನೆಗಳಿಗೆ ಯುವಕರ ನೇಮಕಾತಿ: 11 ಕಡೆ ಎನ್​​ಐಎ ಶೋಧ - ಜಮ್ಮು-ಕಾಶ್ಮೀರದಲ್ಲಿ ಎನ್​​ಐಎ ದಾಳಿ

ರಾಷ್ಟ್ರೀಯ ತನಿಖಾ ದಳ (ಎನ್​​ಐಎ)ದ ಅಧಿಕಾರಿಗಳು ಜಮ್ಮು-ಕಾಶ್ಮೀರದಲ್ಲಿ ಗುರುವಾರ 11 ಕಡೆಗಳಲ್ಲಿ ದಾಳಿ ಮಾಡಿ ತೀವ್ರ ಶೋಧ ಕಾರ್ಯ ನಡೆಸಿದರು. ಈ ವೇಳೆ ಅಸಾದುಲ್ಲಾ ಭರತ್ ಹಾಗೂ ಬಸಿತ್ ಅಹ್ಮದ್ ದಾರ್ ಎಂಬುವವರ ನಿವಾಸಗಳ ಮೇಲೂ ದಾಳಿ ಮಾಡಲಾಗಿದೆ.

ಜಮ್ಮು-ಕಾಶ್ಮೀರದಲ್ಲಿ ಎನ್​​ಐಎ ದಾಳಿ:
ಜಮ್ಮು-ಕಾಶ್ಮೀರದಲ್ಲಿ ಎನ್​​ಐಎ ದಾಳಿ:
author img

By

Published : Apr 7, 2022, 1:10 PM IST

Updated : Apr 7, 2022, 7:36 PM IST

ಬಾರಾಮುಲ್ಲಾ (ಜಮ್ಮು-ಕಾಶ್ಮೀರ): ಕಣಿವೆ ನಾಡು ಜಮ್ಮು-ಕಾಶ್ಮೀರದಲ್ಲಿ ಗುರುವಾರ ರಾಷ್ಟ್ರೀಯ ತನಿಖಾ ದಳ (ಎನ್​​ಐಎ) ದಾಳಿ ಮಾಡಿದೆ. ಶ್ರೀನಗರ, ಬಾರಾಮುಲ್ಲಾ, ಅವಂತಿಪೋರ್​, ಬುದ್ಗಾಮ್​ ಮತ್ತು ಕುಲ್ಗಾಮ್​ ಜಿಲ್ಲೆಗಳಲ್ಲಿ 11 ಕಡೆಗಳಲ್ಲಿ ಅಧಿಕಾರಿಗಳು ಮಿಂಚಿನ ದಾಳಿ ನಡೆಸಿ ಪರಿಶೀಲಿಸಿದರು. ಬೆಳಗ್ಗೆ ಏಕಾಏಕಿ ದಾಳಿ ನಡೆಸಿದ ಅಧಿಕಾರಿಗಳ ತಂಡ ಹಲವೆಡೆ ತೀವ್ರ ಶೋಧ ಕಾರ್ಯ ನಡೆಸಿತು.

ಉಗ್ರ ಸಂಘಟನೆಗಳಾದ ಲಷ್ಕರ್-ಎ-ತೈಬಾ ಹಾಗೂ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್)ಗೆ ಯುವಕರ ಸೆಳೆಯುತ್ತಿರುವುದಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಶ್ರೀನಗರದಲ್ಲೇ 6 ಕಡೆ ದಾಳಿ ಮಾಡಿ ಪರಿಶೀಲನೆ ನಡೆಸಲಾಗಿದೆ. ಬಾರಾಮುಲ್ಲಾ ಜಿಲ್ಲೆಯಲ್ಲಿ ಟಿಂಗ್​ಮಾರ್ಗ್, ಕುಂಜಾರ್​​ ಎಂಬ ಪ್ರದೇಶಗಳು ಹಾಗೂ ಅವಂತಿಪೋರ್​, ಬುದ್ಗಾಮ್​ ಮತ್ತು ಕುಲ್ಗಾಮ್​ ಜಿಲ್ಲೆಗಳಲ್ಲಿ ತಲಾ ಒಂದು ಕಡೆ ದಾಳಿ ಮಾಡಲಾಗಿದೆ. ಟಿಂಗ್​ಮಾರ್ಗ್​ನಲ್ಲಿ ಗುಲಾಂ ನಬಿ ನಜ್ಜರ್​ ಅವರ ಪುತ್ರ ಅಸಾದುಲ್ಲಾ ಭರತ್ ಎಂಬುವವರ ಮನೆ ಮೇಲೆ ದಾಳಿ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಜಮ್ಮು-ಕಾಶ್ಮೀರದಲ್ಲಿ ಎನ್​​ಐಎ ದಾಳಿ

ಇತ್ತ, ಕುಲ್ಗಾಮ್​ನಲ್ಲಿ ಬಸಿತ್ ಅಹ್ಮದ್ ದಾರ್ ಎಂಬುವವರ ನಿವಾಸದಲ್ಲಿ ದಾಳಿ ಮಾಡಿ ಶೋಧ ಕಾರ್ಯನಡೆಸಲಾಗಿದೆ. ಈ ಬಸಿತ್ ದಾರ್​ನ ಪತ್ತೆಯಾಗಿ 10 ಲಕ್ಷ ರೂ. ಬಹುಮಾನ ಘೋಷಿಸಲಾಗಿದೆ. ಇನ್ನು, ಉಗ್ರ ಸಂಘಟನೆಗಳಿಗೆ ಯುವಕರ ನೇಮಕ ಮತ್ತು ಅವರನ್ನು ಸೆಳೆಯುವ ಕುರಿತಂತೆ ಕಳೆದ ಫೆಬ್ರವರಿಯಲ್ಲೂ ಎನ್​​ಐಎ ಅಧಿಕಾರಿಗಳು ದಾಳಿ ನಡೆಸಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದರು.

ಇದನ್ನೂ ಓದಿ: ಪಾಕ್​ನಿಂದ ಭಾರತಕ್ಕೆ ಶಸ್ತ್ರಾಸ್ತ್ರಗಳ ಕಳ್ಳಸಾಗಣೆ ಯತ್ನ: ಗಡಿಯಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಜಪ್ತಿ

Last Updated : Apr 7, 2022, 7:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.