ಹೈದರಾಬಾದ್ : ಗೀಸರ್ ಹೊರಸೂಸಿದ ವಿಷಾನಿಲ ಸೇವನೆಯಿಂದ ಮಹಿಳಾ ಪೈಲಟ್ ಒಬ್ಬರು ಸ್ನಾನದ ಮನೆಯಲ್ಲಿಯೇ ಕುಸಿದು ಬಿದ್ದು ಮೃತಪಟ್ಟ ಘಟನೆ ಮಹಾರಾಷ್ಟ್ರದ ನಾಸಿಕ್‌ನಲ್ಲಿ ನಡೆದಿದೆ. ರಶ್ಮಿ ಪರಾಗ್ ಗೈಧಾನಿ(49) ಮೃತಪಟ್ಟ ದುರ್ದೈವಿಯಾಗಿದ್ದಾರೆ.
ಮುಂಬೈನಲ್ಲಿ ಏರ್ ಇಂಡಿಯಾದ ಹಿರಿಯ ಪೈಲಟ್ ಆಗಿದ್ದ ರಶ್ಮಿ ಪರಾಗ್ ಅವರು ಸ್ನಾನ ಮಾಡುತ್ತಿದ್ದಾಗ ಗೀಸರ್ನಿಂದ ವಿಷಾನಿಲ ಸೋರಿಕೆಯಾಗಿದೆ. ಇದರ ಸೇವನೆಯಿಂದ ರಶ್ಮಿ ಅವರು ಅಲ್ಲಿಯೇ ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದಾರೆ.
ಬಳಿಕ ಆಕೆಯ ಕುಟುಂಬಸ್ಥರು ಇಲ್ಲಿನ ಹುಟಾಹುತಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ತಪಾಸಣೆ ವೇಳೆ ರಶ್ಮಿ ಪರಾಗ್ ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ.
ಪೈಲಟ್ ರಶ್ಮಿ ಸಾವಿನಿಂದ ಅವರ ಕುಟುಂಬದಲ್ಲಿ ಸೂತಕದ ಛಾಯೆ ಆವರಿಸಿದೆ. ರಶ್ಮಿ ಅವರ ತಂದೆ ಹಿರಿಯ ಸಾಹಿತಿಯಾಗಿದ್ದರೆ, ತಾಯಿ ನಿವೃತ್ತ ಅರಣ್ಯಾಧಿಕಾರಿಯಾಗಿದ್ದಾರೆ. ಇದಲ್ಲದೇ, ನಾಸಿಕ್‌ನಲ್ಲಿ 15 ದಿನಗಳ ಅವಧಿಯಲ್ಲಿ ಗೀಸರ್ಗೆ ಇಬ್ಬರು ಬಲಿಯಾಗಿದ್ದಾರೆ.
ಓದಿ: ಮಹಿಳಾ ಕಾನ್ಸ್ಟೇಬಲ್ಗಳ ಬಟ್ಟೆಗಾಗಿ ಅಳತೆ ತೆಗೆದುಕೊಂಡ ಟೈಲರ್.. ವಿಡಿಯೋ ವೈರಲ್.