ನಾಸಾದ ಮಾರ್ಸ್(ಮಂಗಳ) ರೋವರ್, ತನ್ನ ಮೊದಲ ರಾಕ್ ಮಾದರಿಯನ್ನು ಯಶಸ್ವಿಯಾಗಿ ಸಂಗ್ರಹಿಸಿದ್ದು, ಭೂಮಿಗೆ ಮರಳಿಸಲಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪರ್ಸೆವೆರೆನ್ಸ್ ರೋವರ್ನ ಮುಖ್ಯ ಇಂಜಿನಿಯರ್ ಆಡಮ್ ಸ್ಟೆಲ್ಝ್ನರ್, ಇದು ಒಂದು ಪರಿಪೂರ್ಣ ಕೋರ್ ಸ್ಯಾಂಪಲ್ ಆಗಿದೆ. ಒಂದು ಕಲ್ಲಿನ ರಂಧ್ರವನ್ನು ನೋಡಿ ನಾನೆಂದಿಗೂ ಸಂತೋಷವಾಗಿರಲಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
-
Now that is one beautifully perfect cored sample, if I do say so myself! Be patient, little sample, your journey is about to begin. #SamplingMars https://t.co/jOtNGKjeAe
— Adam Steltzner (@steltzner) September 2, 2021 " class="align-text-top noRightClick twitterSection" data="
">Now that is one beautifully perfect cored sample, if I do say so myself! Be patient, little sample, your journey is about to begin. #SamplingMars https://t.co/jOtNGKjeAe
— Adam Steltzner (@steltzner) September 2, 2021Now that is one beautifully perfect cored sample, if I do say so myself! Be patient, little sample, your journey is about to begin. #SamplingMars https://t.co/jOtNGKjeAe
— Adam Steltzner (@steltzner) September 2, 2021
ಕಳೆದ ಒಂದು ತಿಂಗಳ ಹಿಂದೆ ರೋವರ್ ಈ ಮಾದರಿ ಸಂಗ್ರಹಿಸುವಲ್ಲಿ ವಿಫಲವಾಗಿತ್ತು. ಆದರೆ, ಉತ್ತಮ ಮಾದರಿ ಸಂಗ್ರಹಿಸಲು ಅರ್ಧ ಮೈಲಿ ಮುಂದಕ್ಕೆ ಚಲಿಸಿತ್ತು. ನಾಸಾದ ವಿಜ್ಞಾನಿಗಳ ತಂಡ ಡೇಟಾ ಮತ್ತು ಚಿತ್ರಗಳನ್ನು ವಿಶ್ಲೇಷಿಸಿದ ಬಳಿಕ ರೋವರ್ನ ಯಶಸ್ವಿ ಕಾರ್ಯಾಚರಣೆ ನಡೆಸಿದೆ ಎಂದು ಘೋಷಿಸಿದ್ದಾರೆ.
ಕಠಿಣ ಪರಿಶ್ರಮದಿಂದ ಸಂಗ್ರಹಿಸಿದ ಮಾದರಿಗಳನ್ನು ಹಿಂಪಡೆಯಲು ನಾಸಾ ಹೆಚ್ಚಿನ ಬಾಹ್ಯಾಕಾಶ ನೌಕೆಗಳನ್ನು ಆರಂಭಿಸಲು ಯೋಜಿಸಿದೆ. ಒಂದು ದಶಕದಲ್ಲಿ ಮೂರು ಡಜನ್ ಮಾದರಿಗಳನ್ನು ಸಂಗ್ರಹಿಸಲು ಇಂಜಿನಿಯರ್ಗಳು ಕೆಲಸ ಮಾಡುತ್ತಿದ್ದಾರೆ.
ಇದನ್ನೂ ಓದಿ: Apple TV+ ಶೋನಲ್ಲಿ ಹೊಸ ವಿನ್ಯಾಸದೊಂದಿಗೆ ಕಾಣಿಸಿಕೊಂಡ iPhone 13