ETV Bharat / bharat

11ರ ಪೋರನ ಕೋಡಿಂಗ್ ಪ್ರತಿಭೆಗೆ ಭೇಷ್ ಎಂದ ನಾಸಾ.. ಮಂಗಳ ಮಿಷನ್​ ತಂಡಕ್ಕೆ ಆಯ್ಕೆ - ಕೋಡಿಂಗ್ ಪ್ರತಿಭೆ ದೈವಾಂಶ ಧನಗರ್

ದೇವಾಂಶ ಅವರ ತಂದೆ 1999ರಲ್ಲಿ ಆರ್​ಬಿಎಸ್​ ಖಂದಾರಿ ಕಾಲೇಜಿನಿಂದ ಎಂಸಿಎ ಮಾಡಿದ್ದರು. ಇವರು ಕಂಪ್ಯೂಟರ್ ಪ್ರೊಗ್ರಾಮರ್ ಆಗಿದ್ದಾರೆ. ತಂದೆಯಿಂದಲೇ ಕೋಡಿಂಗ್ ಕಲಿತ ದೇವಾಂಶ, ಆನ್ಲೈನ್ ಮೂಲಕ ಇದರಲ್ಲಿ ಹೆಚ್ಚಿನ ಜ್ಞಾನ ಪಡೆದುಕೊಂಡಿದ್ದಾನೆ. ದಿನದಲ್ಲಿ 7 ರಿಂದ 8 ಗಂಟೆ ಈತ ಲ್ಯಾಪ್​ಟಾಪ್ ಮುಂದೆಯೇ ಇರುತ್ತಾನಂತೆ. ಸದ್ಯ ಈತ ದೇವಾಂಶ ಮಾರಿಯೊ ಎಂಬ ಗೇಮನ್ನೂ ತಯಾರಿಸಿದ್ದಾನಂತೆ.

nasa-salutes-the-talent-of-coding-master-devansh-of-agra-invites-for-2026-mission-mars

author img

By

Published : Jul 4, 2022, 6:42 PM IST

ಆಗ್ರಾ: ಇಲ್ಲಿಂದ ಸುಮಾರು 11 ಕಿಲೋಮೀಟರ್ ದೂರದಲ್ಲಿರುವ ಬರಾರಾ ಎಂಬ ಗ್ರಾಮದ 11 ವರ್ಷದ ಪೋರನೊಬ್ಬ ಕೋಡಿಂಗ್ ಕ್ಷೇತ್ರದಲ್ಲಿ ಅಸಾಮಾನ್ಯ ಸಾಧನೆಯಿಂದ ಜಗತ್ತಿನ ಗಮನ ಸೆಳೆದಿದ್ದಾನೆ.

150ಕ್ಕೂ ಹೆಚ್ಚು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿಕೊಂಡಿರುವ ಬಾಲಕ ದೇವಾಂಶ ಧನಗರ್​ನ ಪ್ರತಿಭೆಗೆ ಈಗ ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾ ಕೂಡ ಭೇಷ್ ಎಂದಿದೆ. 2026ರ ಮಿಷನ್ ಮಂಗಳ ಯೋಜನೆಯ ಕೋಡಿಂಗ್​ ತಂಡಕ್ಕೆ ಸೇರಿಕೊಳ್ಳಲು ಈ ಬಾಲಕನಿಗೆ ನಾಸಾ ಆಮಂತ್ರಣ ಕೂಡ ನೀಡಿದೆ.

ಈಗಾಗಲೇ 10ಕ್ಕೂ ಹೆಚ್ಚು ಆ್ಯಪ್​ಗಳನ್ನು ತಯಾರು ಮಾಡಿರುವ ದೇವಾಂಶ, 500 ಅಧಿಕ ಮಕ್ಕಳಿಗೆ ಆನ್ಲೈನ್ ಮೂಲಕ ಉಚಿತವಾಗಿ ಕೋಡಿಂಗ್ ಮಾಡುವುದನ್ನು ಹೇಳಿಕೊಟ್ಟಿದ್ದಾರೆ. ಸದ್ಯ ಬಾಲಕನ ಸಾಧನೆಗೆ ಕುಟುಂಬದವರು ಭಾರಿ ಖುಷಿಯಾಗಿದ್ದಾರೆ.

ದೇವಾಂಶ ಅವರ ತಂದೆ 1999ರಲ್ಲಿ ಆರ್​ಬಿಎಸ್​ ಖಂದಾರಿ ಕಾಲೇಜಿನಿಂದ ಎಂಸಿಎ ಮಾಡಿದ್ದರು. ಇವರು ಕಂಪ್ಯೂಟರ್ ಪ್ರೊಗ್ರಾಮರ್ ಆಗಿದ್ದಾರೆ. ತಂದೆಯಿಂದಲೇ ಕೋಡಿಂಗ್ ಕಲಿತ ದೇವಾಂಶ, ಆನ್ಲೈನ್ ಮೂಲಕ ಇದರಲ್ಲಿ ಹೆಚ್ಚಿನ ಜ್ಞಾನ ಪಡೆದುಕೊಂಡಿದ್ದಾರೆ. ದಿನದಲ್ಲಿ 7 ರಿಂದ 8 ಗಂಟೆ ಇವರು ಲ್ಯಾಪ್​ಟಾಪ್ ಮುಂದೆಯೇ ಇರುತ್ತಾನಂತೆ. ಸದ್ಯ ಈತ ದೇವಾಂಶ ಮಾರಿಯೊ ಎಂಬ ಗೇಮನ್ನೂ ತಯಾರಿಸಿದ್ದಾನಂತೆ.

ದೇವಾಂಶ ಅವರ ತಂದೆ ಲಖನ್ ಸಿಂಗ್ ಮನೆಯಲ್ಲೇ ಅಕಾಡೆಮಿಯೊಂದನ್ನು ನಡೆಸುತ್ತಿದ್ದು, ಇವರ ಬಳಿ 70 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಇವರು ಬಡಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡುತ್ತಿದ್ದಾರೆ. ಈ ಮಧ್ಯೆ ದೇವಾಂಶ 8ನೇ ತರಗತಿಯವರೆಗೂ ಶಾಲೆಗೆ ಹೋಗದೆ ಮನೆಯಲ್ಲಿದ್ದೇ ಶಾಲಾ ವಿದ್ಯಾಭ್ಯಾಸ ಮಾಡಿದ್ದಾನೆ. ಇನ್ನು ಹೈಸ್ಕೂಲ್​ ಹಂತದಲ್ಲಿ ಶಾಲೆಗೆ ಹಾಜರಾದ ದೇವಾಂಶ ಶೇ 80ರಷ್ಟು ಅಂಕಗಳೊಂದಿಗೆ ಪರೀಕ್ಷೆ ಪಾಸು ಮಾಡಿದ್ದಾನೆ. 11ನೇ ವರ್ಷದಲ್ಲಿಯೇ ಈ ಬಾಲಕ ಇಂಟರ್​ ಪರೀಕ್ಷೆ ಬರೆಯಲಿದ್ದಾನೆ.

ದೇವಾಂಶಗೆ 2021ರಲ್ಲಿ ಮಹಾರಾಷ್ಟ್ರ ಸರ್ಕಾರವು ಪ್ರತಿಷ್ಠಿತ ಬಾಲ ಗೌರವ್ ಪ್ರಶಸ್ತಿ ನೀಡಿ ಗೌರವಿಸಿದೆ.

ಇದನ್ನು ಓದಿ:WhatsApp: ಮೆಸೇಜ್ ಡಿಲೀಟ್​ ಮಾಡುವ ಸಮಯಾವಧಿ ವಿಸ್ತರಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.