ETV Bharat / bharat

ಅದ್ಧೂರಿ ಮದುವೆ ತಂದಿಟ್ಟ ಫಜೀತಿ... ಕ್ರೇನ್​ ಮೇಲಿಂದ ಬಿದ್ದ ವಧು-ವರ! - ಅದ್ಧೂರಿ ಮದುವೆ ತಂದಿಟ್ಟ ಫಜೀತಿ

ಕ್ರೇನ್​ ಮೇಲೆ ನಿಂತುಕೊಂಡು ವೇದಿಕೆ ಮೇಲೆ ಬರುತ್ತಿದ್ದಾಗ ತಾಂತ್ರಿಕ ದೋಷದಿಂದಾಗಿ ವಧು-ವರು ಕೆಳಗೆ ಬಿದ್ದಿರುವ ಘಟನೆ ರಾಯ್​ಪುರ್​ದಲ್ಲಿ ನಡೆದಿದೆ.

Narrow escape for bride
Narrow escape for bride
author img

By

Published : Dec 14, 2021, 11:40 PM IST

ರಾಯ್​​ಪುರ್​​(ಛತ್ತೀಸ್​​ಗಢ): ಇತ್ತೀಚಿನ ದಿನಗಳಲ್ಲಿ ಅದ್ಧೂರಿ, ಆಡಂಬರದ ಮದುವೆ ಸಮಾರಂಭ ನಡೆಯುವುದು ಸರ್ವೆ ಸಾಮಾನ್ಯ. ವಿವಾಹ ಸಮಾರಂಭ ಸ್ಮರಣೀಯವಾಗಿಸಲು ಜನರು ವಿಶಿಷ್ಟವಾದ ಪ್ರಯತ್ನಕ್ಕೆ ಕೈ ಹಾಕುತ್ತಾರೆ. ಸದ್ಯ ಛತ್ತೀಸ್​ಗಢದ ರಾಯ್​ಪುರ್​​ದಲ್ಲಿ ಇಂತಹ ಸಾಹಸಕ್ಕೆ ಕೈಹಾಕಿ, ಕೈಸುಟ್ಟು ಕೊಂಡಿದ್ದಾರೆ.

ಅದ್ಧೂರಿ ಮದುವೆ ತಂದಿಟ್ಟ ಫಜೀತಿ... ಕ್ರೇನ್​ ಮೇಲಿಂದ ಬಿದ್ದ ವಧು-ವರ!

ಮದುವೆ ಮಾಡಿಕೊಳ್ಳುತ್ತಿದ್ದ ವಧು-ವರು ವೇದಿಕೆ ಮೇಲೆ ಬರುವ ಸಂದರ್ಭದಲ್ಲಿ ಕ್ರೇನ್​ ಮೇಲೆ ನಿಲ್ಲಿಸಲಾಗಿತ್ತು. ಈ ವೇಳೆ ಅದರ ಸುತ್ತಲೂ ಲೈಟ್ಸ್​ ಬಿಡಲಾಗಿತ್ತು. ವಧು-ವರ ವೇದಿಕೆ ಪ್ರವೇಶಿಸಿದ ಕೆಲ ಕ್ಷಣಗಳಲ್ಲೇ ಅದು ಆಯಾತಪ್ಪಿದ್ದರಿಂದ ಇಬ್ಬರು ಕೆಳಗೆ ಬಿದ್ದಿದ್ದಾರೆ. ಈ ಆಘಾತಕಾರಿ ಘಟನೆ ಎಲ್ಲರಲ್ಲೂ ಆಘಾತ ಮೂಡಿಸಿದೆ. ಅದೃಷ್ಟವಶಾತ್​​ ಯಾವುದೇ ರೀತಿಯ ಪ್ರಾಣಹಾನಿ ಸಂಭವಿಸಿಲ್ಲ. ಈ ಘಟನೆಯ ವಿಡಿಯೋ ಮೊಬೈಲ್​​ನಲ್ಲಿ ಸೆರೆಯಾಗಿವೆ.

ಇದನ್ನೂ ಓದಿರಿ: ವಿಜಯ ಹಜಾರೆ ಟ್ರೋಫಿ :115 ರನ್​ ಚೇಸ್​ ಮಾಡಲಾಗದೇ ಹೀನಾಯ ಸೋಲುಂಡ ತಮಿಳುನಾಡು!

ಇದಕ್ಕೆ ಸಂಬಂಧಿಸಿದಂತೆ ಕಾರ್ಯಕ್ರಮದ ಆಯೋಜಕರು ಈಟಿವಿ ಭಾರತ್​ ಜೊತೆ ಮಾತನಾಡಿದ್ದು, ತಾಂತ್ರಿಕ ದೋಷದಿಂದಾಗಿ ಈ ಘಟನೆ ಸಂಭವಿಸಿದಾಗಿ ಹೇಳಿದ್ದಾರೆ. ಆದರೆ, ವಧು-ವರ ಸುರಕ್ಷಿತವಾಗಿದ್ದು, ಯಾರಿಗೂ ಗಾಯವಾಗಿಲ್ಲ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.