ಕನ್ಯಾಕುಮಾರಿ(ತಮಿಳುನಾಡು): ಶೋಷಿತ ವರ್ಗದ ಮೇಲೆ ಈ ಹಿಂದಿನಿಂದಲೂ ಅನ್ಯಾಯ, ಸಾಮಾಜಿಕ ಬಹಿಷ್ಕಾರದಂತಹ ಅಮಾನವೀಯ ಘಟನೆ ನಡೆಯುತ್ತಲೇ ಇವೆ. ಇದೇ ವಿಷಯವನ್ನಾಧರಿಸಿ ಕಳೆದ ಕೆಲ ತಿಂಗಳ ಹಿಂದೆ 'ಜೈಭೀಮ್' ಎಂಬ ಸಿನಿಮಾ ತೆರೆ ಕಂಡಿತ್ತು. ಇದರ ಬೆನ್ನಲ್ಲೇ ಕೀಳು ಸಮುದಾಯದವರು ಎಂಬ ಕಾರಣಕ್ಕಾಗಿ ಬಸ್ ಡ್ರೈವರ್, ಹಾಗೂ ನಿರ್ವಾಹಕ ಅವರನ್ನ ಕೆಳಗಿಳಿಸಿರುವ ಅಮಾನವೀಯ ಘಟನೆ ನಡೆದಿದೆ.
ತಮಿಳುನಾಡಿನ ನಾಗರಕೋಯಿಲ್ ಎಂಬಲ್ಲಿ ಈ ಘಟನೆ ನಡೆದಿದೆ. ತಿರುನಲ್ವೇಲಿ ಮಾರ್ಗದ ಬಸ್ ಮೂಲಕ ವಲ್ಲಿಯೂರಿಗೆ ತೆರಳುತ್ತಿದ್ದ 'ನರಿಕ್ಕುರವ' ಸಮುದಾಯದ ಮೂವರನ್ನ ತಮಿಳುನಾಡಿನ ರಾಜ್ಯ ಸರ್ಕಾರಿ ಬಸ್‌ನಿಂದ ಕೆಳಗಿಳಿಸಲಾಗಿದೆ.
ಬಸ್ನಲ್ಲಿ ಓರ್ವ ವ್ಯಕ್ತಿ, ಮಹಿಳೆ ಹಾಗೂ ಮಗು ಪ್ರಯಾಣಿಸುತ್ತಿದ್ದರು. ಅವರು ನರಕ್ಕುರವ ಸಮುದಾಯದವರು ಎಂಬ ಮಾಹಿತಿ ಗೊತ್ತಾಗುತ್ತಿದ್ದಂತೆ ಬಸ್ ನಿಲ್ಲಿಸಿ, ಕೆಳಗಿಳಿಸಲಾಗಿದ್ದು, ಅವರ ಸಾಮಗ್ರಿಗಳನ್ನ ಬಸ್‌ನಿಂದ ಹೊರಗೆ ಎಸೆಯಲಾಗಿದೆ. ಬಸ್ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬ ಇದರ ವಿಡಿಯೋ ಸೆರೆಹಿಡಿದಿದ್ದು, ಈ ವೇಳೆ ಮಗು ಅಳುತ್ತಿರುವ ದೃಶ್ಯ ವಿಡಿಯೋದಲ್ಲಿ ಕಾಣಿಸಿಕೊಂಡಿದೆ.
ಇದನ್ನೂ ಓದಿರಿ: ನಕಲಿ ಅಂಕಪಟ್ಟಿ ನೀಡಿದ ಪ್ರಕರಣ : ಶಾಸಕ ಸ್ಥಾನ ಕಳೆದುಕೊಂಡು ಜೈಲು ಶಿಕ್ಷೆಗೊಳಗಾದ BJP MLA
ಬಸ್ ನಿರ್ವಾಹಕನ ಕೃತ್ಯಕ್ಕೆ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ರೋಶ ವ್ಯಕ್ತವಾಗಿದ್ದು, ಈ ವಿಡಿಯೋ ವೈರಲ್ ಅಗಿದೆ. ಇದರಿಂದಾಗಿ ತಕ್ಷಣವೇ ಬಸ್ ಸಿಬ್ಬಂದಿಯನ್ನ ಅಮಾನತುಗೊಳಿಸಲಾಗಿದೆ. ಇನ್ನು ಬಸ್ ನಿರ್ವಾಹಕ ಹೇಳಿರುವ ಪ್ರಕಾರ ಮಹಿಳೆ ಹಾಗೂ ವ್ಯಕ್ತಿ ಬಸ್ ಹತ್ತಿ, ಜಗಳ ಮಾಡ್ತಿದ್ದ ಕಾರಣ ಇತರ ಪ್ರಯಾಣಿಕರಿಗೆ ತೊಂದರೆಯಾಗಿತ್ತು, ಹೀಗಾಗಿ ಅವರನ್ನ ಕೆಳಗಿಳಿಸಲಾಗಿದೆ ಎಂಬ ಸ್ಪಷ್ಟನೆ ಕೊಟ್ಟಿದ್ದಾರೆ. ಆದರೆ, ವಿಡಿಯೋ ವೈರಲ್ ಆಗುತ್ತಿದ್ದಂತೆ ಬಸ್ ಚಾಲಕ ನೆಲ್ಸನ್ ಹಾಗೂ ಕಂಡಕ್ಟರ್ ಜಯದಾಸ್ ವಜಾಗೊಂಡಿದ್ದಾರೆ.