ETV Bharat / bharat

2036ರ ಒಲಿಂಪಿಕ್ಸ್​ ಭಾರತದಲ್ಲಿ?.. ಉದ್ಘಾಟನೆಗೆ ಮೈದಾನ ಕೂಡ ಫಿಕ್ಸ್​ ಮಾಡಿದ IOA! - ಭಾರತೀಯ ಒಲಿಂಪಿಕ್ಸ್​ ಅಸೋಷಿಯೇಷನ್​

ಕ್ರೀಡಾಕೂಟಗಳ ಹಬ್ಬ ಎಂದು ಪ್ರಸಿದ್ಧವಾಗಿರುವ ಒಲಿಂಪಿಕ್ಸ್​​ ಭಾರತದಲ್ಲಿ ಆಯೋಜನೆಗೊಂಡರೆ ಗುಜರಾತ್​ನ ಅಹಮದಾಬಾದ್​ನಲ್ಲಿರುವ ಮೈದಾನದಲ್ಲಿ ಉದ್ಘಾಟನಾ ಸಮಾರಂಭ ನಡೆಯುವ ಸಾಧ್ಯತೆ ಇದೆ.

Narendra Modi Stadium
Narendra Modi Stadium
author img

By

Published : Oct 9, 2021, 9:46 PM IST

ಅಹಮದಾಬಾದ್​​(ಗುಜರಾತ್​): ಒಂದು ವೇಳೆ 2036 ಒಲಿಂಪಿಕ್ಸ್​ ಭಾರತದಲ್ಲಿ ಆಯೋಜನೆಗೊಂಡರೆ ಗುಜರಾತ್​ನ ಅಹಮದಾಬಾದ್​​ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣ ಉದ್ಘಾಟನಾ ಸಮಾರಂಭ ಆಯೋಜನೆ ಮಾಡಲು ಉತ್ತಮವಾದ ಸ್ಥಳ ಎಂದು ಭಾರತೀಯ ಒಲಿಂಪಿಕ್​​ ಅಸೋಷಿಯೇಷನ್​​ ಅಧ್ಯಕ್ಷ ನರೀಂದರ್​ ಬಾತ್ರಾ ಅಭಿಪ್ರಾಯಪಟ್ಟಿದ್ದಾರೆ.

ವಿಶ್ವದಲ್ಲೇ ಅತಿ ದೊಡ್ಡ ಕ್ರಿಕೆಟ್ ಮೈದಾನ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ನರೇಂದ್ರ ಮೋದಿ ಮೈದಾನದಲ್ಲಿ ಒಟ್ಟು 1,32,000 ಜನರು ಕುಳಿತುಕೊಂಡು ಪಂದ್ಯ ವೀಕ್ಷಣೆ ಮಾಡಬಹುದಾಗಿದೆ. 2036ರ ಒಲಿಂಪಿಕ್​ ಭಾರತದಲ್ಲಿ ಆಯೋಜನೆಗೊಂಡರೆ ಖಂಡಿತವಾಗಿ ಅಹಮದಾಬಾದ್​​ನ ನರೇಂದ್ರ ಮೋದಿ ಮೈದಾನದಲ್ಲಿ ಉದ್ಘಾಟನೆ ಮಾಡಬಹುದು ಎಂದು ತಿಳಿಸಿದ್ದಾರೆ. ಆದರೆ, ಈ ವೇಳೆ ಏನು ಆಗುತ್ತದೆ ಎಂಬುದು ನಮಗೆ ಗೊತ್ತಿಲ್ಲ ಎಂದು ತಿಳಿಸಿದ್ದಾರೆ.

ಅಹಮದಾಬಾದ್‌ನ ಮೊಟೆರಾ ಕ್ರೀಡಾಂಗಣದ ಹೆಸರನ್ನು ನರೇಂದ್ರ ಮೋದಿ ಕ್ರೀಡಾಂಗಣ ಎಂದು ಈಗಾಗಲೇ ಬದಲಾವಣೆ ಮಾಡಲಾಗಿದೆ. ಇಲ್ಲಿಯವರೆಗೆ, ಮೆಲ್ಬೋರ್ನ್ ಕ್ರೀಡಾಂಗಣವು ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವಾಗಿತ್ತು.

ಇದನ್ನೂ ಓದಿರಿ: ರೈಲು ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಮೊಬೈಲ್​ ಕಳ್ಳತನ.. ಸಬ್​​ ಇನ್ಸ್​​​ಪೆಕ್ಟರ್​ ಅಮಾನತು

ಜಪಾನ್​ನಲ್ಲಿ ಆಯೋಜನೆಗೊಂಡಿದ್ದ ಟೋಕಿಯೋ ಒಲಿಂಪಿಕ್ಸ್​​ನಲ್ಲಿ ಭಾರತ ಅತ್ಯುತ್ತಮ ಪ್ರದರ್ಶನ ನೀಡಿದ್ದು, 1 ಚಿನ್ನ, 2 ಬೆಳ್ಳಿ ಹಾಗೂ 4 ಕಂಚು ಸೇರಿದಂತೆ ಒಟ್ಟು 7 ಪದಕ ಗೆದ್ದಿದೆ. ಮುಂದಿನ ಒಲಿಂಪಿಕ್ಸ್​​​​ ಪ್ಯಾರಿಸ್​​ನಲ್ಲಿ ಆಯೋಜನೆಗೊಂಡಿದೆ.

ಇದೇ ವಿಚಾರವಾಗಿ ಈ ಹಿಂದೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಾತನಾಡಿದ್ದು, ನಾವು 2036ರ ಒಲಿಂಪಿಕ್ಸ್​​ ಭಾರತದಲ್ಲಿ ಆಯೋಜನೆ ಮಾಡಲು ಸಿದ್ಧರಾಗಿದ್ದೇವೆ ಎಂದು ಹೇಳಿಕೊಂಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.