ETV Bharat / bharat

'ಪ್ರಧಾನಿ ನರೇಂದ್ರ ಮೋದಿ ಕೊಲೆಗಾರ' ಎಂಬ ಬರಹವಿದ್ದ ಕಾರು ಪೊಲೀಸ್​ ವಶಕ್ಕೆ

author img

By

Published : Jan 10, 2022, 3:15 PM IST

ಪ್ರಧಾನಿ ನರೇಂದ್ರ ರೈತರ ಹೋರಾಟದ ವೇಳೆ 750 ಜನರನ್ನು ಕೊಂದಿದ್ದಾನೆ. ಪ್ರಧಾನಿ ಒಳ್ಳೆಯವರಲ್ಲ, ಆರ್​ಎಸ್​ಎಸ್​ ಒಂದು ಭಯೋತ್ಪಾದಕ ಸಂಘಟನೆಯಾಗಿದೆ. ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಲಖೀಂಪುರದಲ್ಲಿ ನಾಲ್ವರನ್ನು ಹತ್ಯೆ ಮಾಡಿದ್ದಾರೆ ಎಂಬೆಲ್ಲಾ ಬರಹಗಳು ಕಾರೊಂದರ ಮೇಲೆ ಕಾಣಸಿಕೊಂಡಿವೆ.

car
ಕಾರು

ತಿರುವನಂತಪುರಂ: 'ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೊಲೆಗಾರರು. ಆರ್​ಎಸ್​ಎಸ್​ ಭಯೋತ್ಪಾದಕ​ ಸಂಘಟನೆ' ಎಂಬ ಆಕ್ಷೇಪಾರ್ಹ ಬರಹವಿದ್ದ ಕಾರೊಂದನ್ನು ಕೇರಳದ ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ನಡೆದಿದೆ.

ತಿರುವನಂತಪುರದ ಹೋಟೆಲ್​ ಒಂದಕ್ಕೆ ವ್ಯಕ್ತಿಯೊಬ್ಬ ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಬಂದಿದ್ದಾನೆ. ಅಲ್ಲದೇ ಈ ವ್ಯಕ್ತಿ ಅನುಮಾನಾಸ್ಪದವಾಗಿ ವರ್ತಿಸಿದ ಕಾರಣ ಹೋಟೆಲ್​ ಸಿಬ್ಬಂದಿ ವಿಚಾರಿಸಿದ್ದಾರೆ. ಬಳಿಕ ಹೋಟೆಲ್​ ಒಳಗೆ ಬಂದು ಮದ್ಯ ಕೇಳಿದ್ದಾನೆ. ಕೊಡಲು ಒಪ್ಪದ ಕಾರಣ ಸಿಬ್ಬಂದಿ ಜೊತೆ ಜಗಳವಾಡಿಕೊಂಡಿದ್ದಾನೆ.

ಆಕ್ಷೇಪಾರ್ಹ ಬರವಿರುವ ಕಾರು
ಆಕ್ಷೇಪಾರ್ಹ ಬರವಿರುವ ಕಾರು

ಈ ವೇಳೆ ಹೋಟೆಲ್​ ಸಿಬ್ಬಂದಿ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಅಷ್ಟರಲ್ಲಿ ಆ ವ್ಯಕ್ತಿ ಕಾರನ್ನು ಅಲ್ಲಿಯೇ ಬಿಟ್ಟು ಆಟೋ ಹತ್ತಿ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಬಂದ ಪೊಲೀಸರು ಕಾರು ತಪಾಸಣೆ ನಡೆಸಿದಾಗ ಅದರಲ್ಲಿ ಹಳೆಯ ಬಟ್ಟೆಗಳು, ಕೇಬಲ್​ಗಳು, ಎಲೆಕ್ಟ್ರಾನಿಕ್​ ವಸ್ತುಗಳು ದೊರೆತಿವೆ.

ಅಲ್ಲದೇ, 'ಪ್ರಧಾನಿ ನರೇಂದ್ರ ಮೋದಿ ರೈತ ಹೋರಾಟದ ವೇಳೆ 750 ಜನರನ್ನು ಕೊಂದಿದ್ದಾನೆ. ಪ್ರಧಾನಿ ಒಳ್ಳೆಯವರಲ್ಲ, ಆರ್​ಎಸ್​ಎಸ್​ ಒಂದು ಭಯೋತ್ಪಾದಕ ಸಂಘಟನೆಯಾಗಿದೆ. ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಲಖೀಂಪುರದಲ್ಲಿ ನಾಲ್ವರನ್ನು ಹತ್ಯೆ ಮಾಡಿದ್ದಾರೆ' ಎಂಬೆಲ್ಲಾ ವಾಕ್ಯಗಳನ್ನು ಕಾರಿನ ಮೇಲೆ ಬರೆಯಲಾಗಿದೆ.

ಇದರಿಂದ ಅನುಮಾನಗೊಂಡ ಪೊಲೀಸರು ಬಾಂಬ್​ ಪತ್ತೆ ದಳ ಮತ್ತು ಶ್ವಾನ ದಳವನ್ನು ಕರೆಯಿಸಿ ತಪಾಸಣೆ ನಡೆಸಿದ್ದಾರೆ. ಬಳಿಕ ಕಾರನ್ನು ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಹಣಕ್ಕಾಗಿ 'ಪತ್ನಿಯರ ವಿನಿಮಯ' ದಂಧೆ ಬೆಳಕಿಗೆ.. ಇದಕ್ಕಾಗಿ ಮೆಸೆಂಜರ್​, ಟೆಲಿಗ್ರಾಂ ಗ್ರೂಪ್​ ರಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.